ನಮ್ಮ ಪಕ್ಷದಲ್ಲಿದ್ದು ಅನ್ಯಾಯ ಮಾಡಿದ್ದರು; ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ನಮ್ಮ ಪಕ್ಷದಲ್ಲಿದ್ದು ಅನ್ಯಾಯ ಮಾಡಿದ್ದರು; ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ
ಲಕ್ಷ್ಮೀ ಹೆಬ್ಬಾಳ್ಕರ್

ಬಹಿರಂಗವಾಗಿ ರಮೇಶ್ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕಿ ಲಕ್ಷ್ಮೀ, ಥೂ... ಥೂ ಅಂತಾರೆ ಎನೂ ಮಾಡಿದ್ದೇನೆ ನಾನು? ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ಒಬ್ಬ ಹೆಣ್ಣು ಮಗಳು ನಾನು.

TV9kannada Web Team

| Edited By: sandhya thejappa

Nov 27, 2021 | 8:55 AM


ಬೆಳಗಾವಿ: ಪಕ್ಷ, ಮುಖಂಡರು ನಮಗೆ ಆಶೀರ್ವಾದ ಮಾಡಿದ್ದಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ಬಿಜೆಪಿಯವರು ತಮ್ಮ ಅಭ್ಯರ್ಥಿಯನ್ನ ಚುನಾವಣೆಗೆ ನಿಲ್ಲಿಸಿದ್ದಾರೆ. ಈ ಮೂರನೇಯವರದ್ದು ಎನೂ ಕೆಲಸ ಅಂತ ಬೈಲಹೊಂಗಲ ಪಟ್ಟಣದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಹೋದ ಸಾರಿ ನಮ್ಮ ಪಕ್ಷದಲ್ಲಿದ್ದು ನಮಗೆ ಅನ್ಯಾಯ ಮಾಡಿದ್ದರು. ಈಗ ಬಿಜೆಪಿಗೆ ಹೋಗಿ ಬಿಜೆಪಿಯವರಿಗೂ ಅನ್ಯಾಯ ಮಾಡುತ್ತಿದ್ದಾರೆ ಅಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್​ನ ಸೋಲಿಸೊದು ಅಂತಾರೆ, ಯಾಕೆ ನಮ್ಮ ಪಕ್ಷದಲ್ಲಿ ನಾನು ಬೆಳೆಯಬಾರದಾ? ಎಂದು ಪ್ರಶ್ನಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನೀವು ನಿಮ್ಮ ಪಕ್ಷದಲ್ಲಿ ಬೆಳೆದುಕೊಳ್ಳಿ, ಎನೂ ಮಾಡಿದ್ದೇನಾ ನಾನು ಅಂತ ರಮೇಶ್ ಜಾರಕಿಹೊಳಿ ಥೂ… ಥೂ ಹೇಳಿಕೆಗೆ ಕೆಂಡಾಮಂಡಲರಾಗಿದ್ದಾರೆ.

ಬಹಿರಂಗವಾಗಿ ರಮೇಶ್ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕಿ ಲಕ್ಷ್ಮೀ, ಥೂ… ಥೂ ಅಂತಾರೆ ಎನೂ ಮಾಡಿದ್ದೇನೆ ನಾನು? ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ಒಬ್ಬ ಹೆಣ್ಣು ಮಗಳು ನಾನು. ಇಡೀ ಸ್ತ್ರೀ ಕುಲಕ್ಕೆ ಅವರು ಮಾಡಿದ ಅವಮಾನ ಅಂತ ತಿಳಿಸಿದರು.

ಊರಿಗೆ ಒಂದೊಂದು ಗಾಡಿಯನ್ನ ಬಿಟ್ಟಿದ್ದಾರೆ. ಚುನಾವಣೆ ಮುಗಿದ ಮೇಲೆ ಆ ಗಾಡಿಗಳು ಇಲ್ಲೇ ಇರ್ತಾವಾ? ಎಲೆಕ್ಷನ್ ಮುಗಿದ ಮೇಲೆ ಅವರು ಪಂಚಾಯಿತಿಯಲ್ಲೇ ಕಸಾ ಹೊಡೆಯುತ್ತಾರಾ? ನಾವು ಸತ್ತಾಗ ಹೊರಗಿನವರು ಬರಲು ಆಗಲ್ಲ ನಾವು ನೀವು ಅಷ್ಟೇ ಅಂತ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ನೀವು ವಿಚಾರ ಮಾಡಿ. ಬಹಳ ಜನ ನನ್ನನ್ನ ಕೇಳುತ್ತಾರೆ. ಇವತ್ತು ಸತೀಶ್ ಅಣ್ಣಾ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಹೇಳುತ್ತಿದ್ದೇನೆ. ಸತೀಶ್ ಅಣ್ಣಾ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ನಾಯಕರಿದ್ದಾರೆ. ಇವರು ಕೂಡ ಜಾರಕಿಹೊಳಿ ಮನೆತನದವರು, ಮಾಸ್ಟರ್ ಮೈಂಡ್ ಇವರು. ಜಾರಕಿಹೊಳಿ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಕಿರೀಟ ಪ್ರಾಯ ಅಂತ ಸಹೋದರನ ಮುಂದೇ ರಮೇಶ್ ಜಾರಕಿಹೊಳಿ ವಿರುದ್ಧ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ
ರಮೇಶ್ ಜಾರಕಿಹೊಳಿ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬಿಸಿಯೂಟ: ಟೆಂಡರ್ ಕರೆಯದೇ, 2 ರೂ ಹೆಚ್ಚಿಗೇ ನೀಡಿ, ಇಸ್ಕಾನ್ ಅಕ್ಷಯಪಾತ್ರೆಗೆ ಬಿಬಿಎಂಪಿ ಗುತ್ತಿಗೆ, ಆರ್ಥಿಕ ಇಲಾಖೆ ಕೆಂಗಣ್ಣು

Follow us on

Related Stories

Most Read Stories

Click on your DTH Provider to Add TV9 Kannada