ಚುನಾವಣೆಯಲ್ಲಿ ಡಾ.ಕೆ ಸುಧಾಕರ್ ಸೋಲಿಸಿ ಗೆದ್ದ ಶಾಸಕ ಪ್ರದೀಪ್​ ಈಶ್ವರ್​ಗೆ ರಣ ಬೇಟೆಗಾರ ಬಿರುದು

| Updated By: Ganapathi Sharma

Updated on: May 29, 2023 | 5:28 PM

ವಿಧಾನಸಭೆ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್​ರನ್ನ ಸೋಲಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್, ರಾಜ್ಯದ ಗಮನವನ್ನು ಸೆಳೆದಿದ್ದು, ವಿಧಾನಸೌಧ ಹಾಗೂ ಸರ್ಕಾರದಲ್ಲಿ ಪ್ರದೀಪ್​​ರನ್ನ ರಣ ಬೇಟೆಗಾರ ಎಂದು ಕರೆಯುತ್ತಿದ್ದಾರಂತೆ.

ಚುನಾವಣೆಯಲ್ಲಿ ಡಾ.ಕೆ ಸುಧಾಕರ್ ಸೋಲಿಸಿ ಗೆದ್ದ ಶಾಸಕ ಪ್ರದೀಪ್​ ಈಶ್ವರ್​ಗೆ ರಣ ಬೇಟೆಗಾರ ಬಿರುದು
ಪ್ರದೀಪ್​ ಈಶ್ವರ್​
Follow us on

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್​(Dr.K Sudhakar)ರನ್ನ ಸೋಲಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್(Pradeep Eshwar), ರಾಜ್ಯದ ಗಮನವನ್ನು ಸೆಳೆದಿದ್ದು, ಪ್ರದೀಪ್ ಹೋದಲ್ಲಿ ಬಂದಲ್ಲಿ ಜನ ಸೇಲ್ಪಿಗೆ ಮುಗಿಬಿಳುತ್ತಿದ್ದಾರೆ. ಇನ್ನು ವಿಧಾನಸೌಧ ಹಾಗೂ ಸರ್ಕಾರದಲ್ಲಿ ಪ್ರದೀಪ್​​ರನ್ನು ರಣ ಬೇಟೆಗಾರ ಎಂದೆ ಕರೆಯುತ್ತಿದ್ದಾರಂತೆ. ಹೌದು ಈ ಕುರಿತು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ ಹೆಸರಿನಿಂದ ನನ್ನನ್ನು ಯಾರು ಕರೆಯುತ್ತಿಲ್ಲ, ಬದಲಾಗಿ ರಣ ಬೇಟೆಗಾರ ಎಂದು ಕರೆಯುತ್ತಿದ್ದಾರೆ ಎಂದರು.

‘ನಾನು ಪ್ರಭಾವಿ ವ್ಯಕ್ತಿಯನ್ನು ಸೋಲಿಸಿದ್ದಕ್ಕೆ, ನನಗೆ ಅಪಾರ ಗೌರವ ಮನ್ನಣೆ ಸಿಕ್ತಿದೆ. ಸರ್ಕಾರದಲ್ಲಿ ನನಗೆ ಯಾವುದೇ ಸಚಿವ ಸ್ಥಾನ, ನಿಗಮ ಮಂಡಳಿಯೂ ಬೇಡವೆ ಬೇಡ. ನಾನು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಇರುತ್ತೇನೆ. ಇನ್ನು ಸಚಿವ ಡಾ.ಎಂಸಿ ಸುಧಾಕರ್​ ಅವರಿಗೆ ಚಿಕ್ಕಬಳ್ಳಾಫುರ ಜಿಲ್ಲೆಯ ಉಸ್ತುವಾರಿ ಮಾಡಿದರೆ ಒಳ್ಳೆಯದು, ಯಾಕೆಂದರೆ ಅವರಿಗೆ ಜಿಲ್ಲೆಯ ನಾಡಿಮೀಡಿತ ಗೊತ್ತಿದೆ. ಬೇರೆ ಯಾರನ್ನೆ ಉಸ್ತುವಾರಿಯಾಗಿ ನೇಮಕ ಮಾಡಿದ್ರೆ, ಸಮಸ್ಯೆಯಾಗುತ್ತೆ ಎಂದರು.

ಇದನ್ನೂ ಓದಿ:ಸುಧಾಕರ್​ನನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್​ ನಾಯಕರು ಹೇಗೆಲ್ಲ ಸಂಭ್ರಮಿಸಿದರು ಗೊತ್ತಾ?ನೂತನ ಶಾಸಕ ಪ್ರದೀಪ್ ಈಶ್ವರ್ ಮಾತು ಕೇಳಿ

ಇನ್ನು ಜೊತೆಗೆ ನಮ್ಮ ಜಿಲ್ಲಾ ಕಾಂಗ್ರೆಸ್​ನಲ್ಲಿ ಹಲವರು ಇದ್ದಾರೆ, ಹಿರಿಯರಿಗೆ ಸ್ಥಾನಮಾನ ನೀಡಲಿ. ಹಿರಿಯರಿಗೆ ಸ್ಥಾನಮಾನ ನೀಡುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಕೂಲ ಆಗುತ್ತೆ ಎಂದರು. ಪ್ರದೀಪ್​ ಈಶ್ವರ್​ ಯಾವುದೇ ಫಲಾಫೇಕ್ಷೆ ಇಲ್ಲದೆ ತನ್ನನ್ನು ಗೆಲ್ಲಿಸಿದ ಜನರಿಗಾಗಿ ಮನೆಮನೆಗೆ ತೆರಳಿ ಅವರ ಕಷ್ಟವನ್ನ ಆಲಿಸುತ್ತಿದ್ದಾರೆ. ಜೊತೆಗೆ ಸಾದ್ಯವಾದಷ್ಟು ಸ್ಥಳದಲ್ಲೇ ಪರಿಹಾರ ನೀಡುತ್ತಿದ್ದಾರೆ. ಇಂತಹ ವ್ಯಕ್ತಿ ನಮ್ಮ ಕ್ಷೇತ್ರದಲ್ಲಿಯೂ ಇರಬೇಕೆಂದು ಎಷ್ಟೋ ಜನ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಇನ್ನು ಪ್ರಭಾವಿ ಸಚಿವ ಡಾ ಕೆ ಸುಧಾಕರ್‌ ಅವರನ್ನು ಸೋಲಿಸಿರುವ ಪ್ರದೀಪ್‌ ಈಶ್ವರ್‌,  ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದರು. ಕಾಂಗ್ರೆಸ್​ನ ನೂತನ ಶಾಸಕ ಪ್ರದೀಶ್ ಈಶ್ವರಪ್ಪ ಮಾತಿನ ಶೈಲಿಗೆ ಎಲ್ಲರು ಫಿದಾ ಆಗಿದ್ದಾರೆ. ಅಲ್ಲದೇ ಇದೀಗ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಮನೆಮನೆ ರೌಂಡ್ಸ್​ ಹಾಕುತ್ತಿದ್ದಾರೆ. ಹೌದು ಮೇ 18 ರಂದು ಮೊದಲಿಗೆ ಮೈಲಪ್ಪನಹಳ್ಳಿ ಗ್ರಾಮದಿಂದ ಮನೆ ಮನೆಗೆ ಭೇಟಿ ಆರಂಭಿಸಿದ್ದು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಇನ್ನು ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಸುಧಾಕರ್ ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲುಕುಡಿದಷ್ಟು ಖುಷಿಪಟ್ಟರು ಎಂದಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sun, 28 May 23