ಕಾರವಾರ, ನ.18: ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ನಂತರದಿಂದ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಅಸಮಾಧಾನ ರಾಜ್ಯಾಧ್ಯಕ್ಷ ಸ್ಥಾನ ಬಿವೈ ವಿಜಯೇಂದ್ರಗೆ, ವಿಪಕ್ಷ ಸ್ಥಾನ ಆರ್.ಅಶೋಕ ಅವರ ಪಾಲಾಗುತ್ತಿದ್ದಂತೆ ಸ್ಫೋಟಗೊಂಡಿದೆ. ಈ ನಡುವೆ ಪಕ್ಷದ ಮೇಲೆ ಮುನಿಸಿಕೊಂಡಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಅವರು ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಮಾಡಿದ ಆರೋಪಗಳನ್ನು ತಳ್ಳಿಹಾಕಿ ಸಿಎಂ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್ ಬೀಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡಿದ ಶಿವರಾಮ್ ಹೆಬ್ಬಾರ್, ಕುಮಾರಸ್ವಾಮಿ ಮಾತು ಕೇಳಿದರೆ ನಾವು ಚಿಕ್ಕವರಿದ್ದಾಗ ಗುಡು ಗುಡು ಹೇಳುತ್ತಿದ್ದವರ ಹಾಗೆ ಇದೆ. ಕುಮಾರಸ್ವಾಮಿ ಯಾವಾಗಲೂ ಹೀಗೆ. ಕಳೆದ ಎರಡು ಮೂರು ತಿಂಗಳ ಹಿಂದೆ ಪೆಂಡ್ರೈವ್ ಹಿಡಿದು ತೋರಿಸುತ್ತಿದ್ದರು ಎನ್ನುತ್ತಾ ಹಿಂಗೆ ನೋಡಿ ಅಂತಾ ಕೈ ಮಾಡಿ ವ್ಯಂಗ್ಯವಾಡಿದರು.
ಅಲ್ಲದೆ, ಆ ಪೆಂಡ್ರೈವ್ನಲ್ಲಿ ಎನಿತ್ತೊ ಗೊತ್ತಿಲ್ಲ. ಆ ಪೆಂಡ್ರೈವ್ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಕುಮಾರಸ್ವಾಮಿ ಪ್ರತಿ ದಿವಸ ಒಂದೊಂದು ಬಾಂಬ್ ಹಾಕುತ್ತಲೇ ಇರುತ್ತಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅವರ ಮಾತನ್ನ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.
ನನ್ನ ಅಸಮಾಧಾನ ಏನು ಎಂಬುವುದನ್ನ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ. ನಾನು ಅವತ್ತು ಒಂದು ಮಾತನ್ನು ಹೇಳಿದ್ದೇನೆ, ಇವತ್ತು ಹೇಳುತ್ತಿದ್ದೇನೆ. ನಾನು ಲಿಡರ್ ಬೆಸ್ ಪೊಲಿಟಿಸಿಯನ್ ಅಲ್ಲ, ನಾನು ಕೆಡರ್ ಬೆಸ್ ಪೊಲಿಟಿಸಿಯನ್. ನಾಯಕತ್ವ ಆಧಾರ ಮೇಲೆ ರಾಜಕೀಯ ಮಾಡುತ್ತಿಲ್ಲ. ಜನರ ಜೊತೆಗೆ ಜನರಿಂದ ರಾಜಕೀಯ ಮಾಡುತ್ತಿದ್ದೇನೆ ಎಂದರು.
ನನ್ನ ಭಾವನೆಗಳಿಗೆ ಧಕ್ಕೆ ಬಂದಾಗ ಸಹಿಸಿಕೊಳ್ಳುವುದಿಲ್ಲ, ಸ್ವಾಭಿಮಾನ ಜಿವಂತಿಕೆ ಇಟ್ಟುಕೊಂಡು ಹೊಗಲೇಬೆಕಿತ್ತು. ನನ್ನಂತಹ ರಾಜಕಾರಣಿಗೆ ಇಂತಹದ್ದು ಅವಶ್ಯಕ ಅದಕ್ಕೆ ಹೀಗೆ ಮಾಡಿದ್ದು. ಮುಂದಿನ ಸಭೆಗಳಲ್ಲಿ ಭಾಗವಹಿಸಬೇಕೊ ಬೇಡವೋ ಎಂಬುದನ್ನು ಕಾದು ನೋಡೋಣ. ಈಗಾಲೇ ಎಲ್ಲ ನಿರ್ಧಾರ ಮಾಡುವುದು ಬೇಡ ಮುಂದೆ ಕಾದು ನೋಡಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ