ನಾನು ಕಾಂಗ್ರೆಸ್​ಗೆ ಬರಲ್ಲ ಅಂತಾ ಡಿಕೆ ಶಿವಕುಮಾರ್​ಗೆ ಹೇಳಿದ್ದೇನೆ: ಜಿಟಿ ದೇವೇಗೌಡ

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು, ಎದುರಾಳಿಗಳೇ ಇಲ್ಲದಂತೆ ನೋಡಿಕೊಳ್ಳಲು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಹಿತ ವಿಪಕ್ಷ ಶಾಸಕರನ್ನು ಪಕ್ಷದತ್ತ ಸೆಳೆಯಲು ಡಿಸಿಎಂ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ. ಜಿಡಿ ದೇವೇಗೌಡರನ್ನು ಭೇಟಿಯಾಗಿ ಆಹ್ವಾನವೂ ನೀಡಿದ್ದಾರೆ. ಆದರೆ, ತಾನು ಕಾಂಗ್ರೆಸ್ ಪಕ್ಷಕ್ಕೆ ಬರುವುದಿಲ್ಲ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ನಾನು ಕಾಂಗ್ರೆಸ್​ಗೆ ಬರಲ್ಲ ಅಂತಾ ಡಿಕೆ ಶಿವಕುಮಾರ್​ಗೆ ಹೇಳಿದ್ದೇನೆ: ಜಿಟಿ ದೇವೇಗೌಡ
ಜಿಟಿ ದೇವೇಗೌಡ ಮತ್ತು ಡಿಕೆ ಶಿವಕುಮಾರ್
Follow us
TV9 Web
| Updated By: Rakesh Nayak Manchi

Updated on:Nov 18, 2023 | 2:48 PM

ಬೆಂಗಳೂರು, ನ.18: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು, ಎದುರಾಳಿಗಳೇ ಇಲ್ಲದಂತೆ ನೋಡಿಕೊಳ್ಳಲು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (G.T. Devegowda) ಸಹಿತ ವಿಪಕ್ಷ ಶಾಸಕರನ್ನು ಪಕ್ಷದತ್ತ ಸೆಳೆಯಲು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಯತ್ನಿಸುತ್ತಿದ್ದಾರೆ. ಜಿಡಿ ದೇವೇಗೌಡರನ್ನು ಭೇಟಿಯಾಗಿ ಆಹ್ವಾನವೂ ನೀಡಿದ್ದಾರೆ. ಆದರೆ, ತಾನು ಕಾಂಗ್ರೆಸ್ ಪಕ್ಷಕ್ಕೆ ಬರುವುದಿಲ್ಲ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಜಿಟಿ ದೇವೇಗೌಡ, ಸದಾಶಿವನಗರದಲ್ಲಿ ಅವರೇ ಬಂದು ನನ್ನನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ಎಸ್​.ಟಿ.ಸೋಮಶೇಖರ್, ಪುಲಿಕೇಶಿ ನಗರ ಶಾಸಕರು, ನೆಲಮಂಗಲ ಶಾಸಕರು ಇದ್ದರು. ಈ ಹಿಂದೆ ಪಕ್ಷಕ್ಕೆ ಕರೆದರೂ ಯಾಕೆ ಬರಲಿಲ್ಲ ಎಂದು ಹೇಳಿದ್ದರು. ಅದೃಷ್ಟ ಇರುವವರಿಗೆ ಅಧಿಕಾರ ಸಿಗುತ್ತೆ, ಇಲ್ಲಂದರೆ ಸಿಗಲ್ಲ ಅಂತ ಹೇಳಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಹಾಲಿ ಶಾಸಕರಿಗೆ ಗಾಳ; ಜಿಟಿ ದೇವೇಗೌಡಗೆ ಡಿಕೆ ಶಿವಕುಮಾರ್ ನೀಡಿದ ಆಹ್ವಾನದ ಹಿಂದಿದೆ ರಾಜಕೀಯ ತಂತ್ರಗಾರಿಕೆ

ನಾನು ಕಾಂಗ್ರೆಸ್​​ಗೆ ಹೋಗುವ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಜಿ.ಟಿ.ದೇವೇಗೌಡ, ನಾನು ಕಾಂಗ್ರೆಸ್​ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್​ಗೆ ಹೇಳಿದ್ದೇನೆ. ಜೆಡಿಎಸ್​ನ 19 ಶಾಸಕರೂ ಒಟ್ಟಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ಪಕ್ಷವನ್ನು ಒಡೆಯುವ ಕೆಲಸ ಮಾಡಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಭೇಟಿ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಜಿ.ಟಿ.ದೇವಣೆಗೌಡರನ್ನ ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಎಲ್ಲಾ ಶಾಸಕರು ನನ್ನ ಹತ್ತಿರ ಬರುತ್ತಿರುತ್ತಾರೆ. ನಾನು ಅವರ ಬಳಿ ಹೋಗುತ್ತಿರುತ್ತೇನೆ. ಸ್ನೇಹಿತರು ಇದ್ದಾರೆ ಕುಳಿತುಕೊಳ್ಳುತ್ತೇವೆ. ಊಟ ಮಾಡುತ್ತೇವೆ, ಚರ್ಚೆ ಮಾಡುತ್ತೇವೆ. ಅದು ಎಲ್ಲಾ ಪಾರ್ಟಿಯಲ್ಲೂ ಇರುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sat, 18 November 23