ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಸಂಸ್ಕೃತಿ: ಸಚಿವ ಪ್ರಿಯಾಂಕ್ ಖರ್ಗೆ‌ಗೆ ವಿಪಕ್ಷ ನಾಯಕ ಆರ್​. ಅಶೋಕ್ ತಿರುಗೇಟು

ಎಷ್ಟು ಕೊಟ್ಟು ವಿಪಕ್ಷ ನಾಯಕರಾಗಿ ಬಂದ್ರಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ‌ ಹೇಳಿಕೆಗೆ ವಿಪಕ್ಷ ನಾಯಕ ಆರ್​​ ಅಶೋಕ್​ ತಿರುಗೇಟು ನೀಡಿದ್ದು, ಸಚಿವ ಸ್ಥಾನ ಪಡೆಯಲು ನೀವು ಎಷ್ಟು ಕೊಟ್ಟಿದ್ದೀರಿ. ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಕೊಟ್ಟು ಹೋಗುವ ಸಂಸ್ಕೃತಿ ಬಿಜೆಪಿಯದ್ದಲ್ಲ ಎಂದು ಹೇಳಿದ್ದಾರೆ.

ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಸಂಸ್ಕೃತಿ: ಸಚಿವ ಪ್ರಿಯಾಂಕ್ ಖರ್ಗೆ‌ಗೆ ವಿಪಕ್ಷ ನಾಯಕ ಆರ್​. ಅಶೋಕ್ ತಿರುಗೇಟು
ಸಚಿವ ಪ್ರಿಯಾಂಕ್ ಖರ್ಗೆ‌, ವಿಪಕ್ಷ ನಾಯಕ ಆರ್​​. ಅಶೋಕ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2023 | 3:39 PM

ಬೆಂಗಳೂರು, ನವೆಂಬರ್​​​ 18: ಪ್ರಿಯಾಂಕ್ ತಂದೆ ಖರ್ಗೆ ಎಐಸಿಸಿ ಅಧ್ಯಕ್ಷರಾಗಲು ಎಷ್ಟು ಕೊಟ್ಟಿದ್ರು ಪ್ರಿಯಾಂಕ್ ಖರ್ಗೆ‌ (Priyank Kharge) ಸಚಿವ ಸ್ಥಾನ ಪಡೆಯಲು ಎಷ್ಟು ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್​​ ಅಶೋಕ್​ ಪ್ರಶ್ನಿಸಿದ್ದಾರೆ. ಎಷ್ಟು ಕೊಟ್ಟು ವಿಪಕ್ಷ ನಾಯಕರಾಗಿ ಬಂದ್ರಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ‌ ಹೇಳಿಕೆಗೆ ವಿಪಕ್ಷ ನಾಯಕ ಆರ್​​ ಅಶೋಕ್​ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಕೊಟ್ಟು ಹೋಗುವ ಸಂಸ್ಕೃತಿ ಬಿಜೆಪಿಯದ್ದಲ್ಲ ಎಂದು ಹೇಳಿದ್ದಾರೆ.

ಸಿಎಂ ಆಗಲು ಸಿದ್ದರಾಮಯ್ಯ ಎಷ್ಟು ಹಣ ಕೊಟ್ಟಿದ್ದಾರೆ? ರಾಜ್ಯದಲ್ಲಿ ಕಡಿಮೆ ಅಂದ್ರೆ, ದೆಹಲಿ ಮಟ್ಟಕ್ಕೆ ಎಷ್ಟು ಕೊಟ್ಟು ಹೋಗಿದ್ದಾರೆ? ಪ್ರಿಯಾಂಕ್‌ ಅವರ ಅಪ್ಪ ಸಾವಿರಾರು ಕೋಟಿ ರೂ. ಕೊಟ್ಟು ಹೋಗಿರಬಹುದು ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆಗೆ ನಿಖಲ್ ಶಿಫಾರಸು ಮಾಡಿ​ಲ್ಲವೇ? ಪ್ರಿಯಾಂಕ್​ ಆರೋಪ

ಜನ ನಮ್ಮನ್ನು ಗೆಲ್ಲಿಸಿರುವುದು ಸರ್ಕಾರದ ಕಿವಿ ಹಿಂಡಲು. ನಾವು ಕಿವಿ ಹಿಂಡುತ್ತೇವೆ, ಕಿವಿ ಹಿಂಡಿದ್ರೂ ಸರ್ಕಾರ ಕೆಲಸ ಮಾಡಿಲ್ಲ ಅಂದರೆ ಸರ್ಕಾರ ತೆಗೆಯಲು ಯೋಚನೆ ಮಾಡುತ್ತೇವೆ. ನಂತರ ಸರ್ಕಾರ ಬೀಳಿಸುವ ವ್ಯವಸ್ಥೆ ಅವರೇ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

ನಾನು ವಿರೋಧ ಪಕ್ಷದ ನಾಯಕನಾಗಬಾರದಾ? ಕಾಂಗ್ರೆಸ್​ ಆರ್​.ಅಶೋಕ್ ಪ್ರಶ್ನೆ 

ಕನಕಪುರದಲ್ಲಿ ಸೋತವರಿಗೆ ವಿಪಕ್ಷ ಸ್ಥಾನ ಎಂದು ಕಾಂಗ್ರೆಸ್​ ಟ್ವೀಟ್​ಗೆ ವಿಪಕ್ಷ ನಾಯಕ ಆರ್​.ಅಶೋಕ್​ ತಿರುಗೇಟು ನೀಡಿದ್ದು, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರಲ್ವೇ? ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಮಾಡಿದ್ದೀರಲ್ಲಾ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ. ನಾನು ಕನಕಪುರ ಕ್ಷೇತ್ರದಲ್ಲಿ 55 ಸಾವಿರ ಮತಗಳನ್ನು ಪಡೆದಿದ್ದೇನೆ. ಅಂದರೆ ಸಿದ್ದರಾಮಯ್ಯಗಿಂತ 20 ಪಟ್ಟು ನಾನು ಮತ ಪಡೆದಿದ್ದೇನೆ. ನಾನು ವಿರೋಧ ಪಕ್ಷದ ನಾಯಕನಾಗಬಾರದಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರು ಬರಗಾಲ ಎದುರಿಸುತ್ತಿರುವುದಕ್ಕೆ ಇದು ನಿದರ್ಶನ: ವಿಪಕ್ಷ ನಾಯಕರಾಗಿ ಆರ್​.ಅಶೋಕ್​ ಆಯ್ಕೆಗೆ ಕಾಂಗ್ರೆಸ್ ಲೇವಡಿ

ಸ್ಮೃತಿ ಇರಾನಿ ವಿರುದ್ಧ ನಿಮ್ಮ ನಾಯಕ ರಾಹುಲ್ ಸೋತಿಲ್ಲವೇ? ಇಂತಹ ನಾಯಕರನ್ನೆಲ್ಲ ಇಟ್ಟುಕೊಂಡು ನನ್ನನ್ನು ಪ್ರಶ್ನೆ ಮಾಡ್ತೀರಾ? ಸಿದ್ದರಾಮಯ್ಯ ರೀತಿ ನಾನೇನು ಭಯದಿಂದ ಬಾದಾಮಿಗೆ ಓಡಿ ಹೋಗಿಲ್ಲ. ಪಕ್ಷ ಹೇಳಿದ್ದಕ್ಕೆ ನಾನು ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು. ಪದ್ಮನಾಭನಗರ ಕ್ಷೇತ್ರದಲ್ಲಿ ನಾನು 7 ಬಾರಿ ಗೆದ್ದಿದ್ದೇನೆ. ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಡಿಪಾಸಿಟ್ ಬಂದಿಲ್ಲ. ನಾವು ಗೆದ್ದಿದ್ದೇವೆ, ಅದಕ್ಕಾಗಿ ನಾನು ವಿಪಕ್ಷ ನಾಯಕನಾಗಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ