ಚನ್ನಪಟ್ಟಣದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಎಚ್​ಡಿಕೆ: ಸವಾಲಾಗಿ ಸ್ವೀಕರಿಸುವೆ ಎಂದ ಸಿ.ಪಿ.ಯೋಗೇಶ್ವರ್‌

| Updated By: ವಿವೇಕ ಬಿರಾದಾರ

Updated on: Oct 22, 2022 | 9:12 PM

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೆ ಇಬ್ಬರು ನಾಯಕರ ನಡುವೆ ನೇರ ನೇರ ಹಾಣಾ-ಹಣಿ ಶುರುವಾಗಿದೆ.

ಚನ್ನಪಟ್ಟಣದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಎಚ್​ಡಿಕೆ: ಸವಾಲಾಗಿ ಸ್ವೀಕರಿಸುವೆ ಎಂದ ಸಿ.ಪಿ.ಯೋಗೇಶ್ವರ್‌
ಎಂಎಲ್​ಸಿ ಸಿಪಿ ಯೋಗೇಶ್ವರ್
Follow us on

ರಾಮನಗರ: ಬರುವ 2023ರ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣದಿಂದ (Channapattana) ಮಾತ್ರ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​. ಡಿ ಕುಮಾರಸ್ವಾಮಿ (HD Kumarswamy) ಘೋಷಿಸಿದ ಬೆನ್ನಲ್ಲೆ ವಿಧಾನಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ (CP Yogeshwar) ರಿಯಾಕ್ಟ್​​ ಮಾಡಿದ್ದಾರೆ. ಕುಮಾರಸ್ವಾಮಿ ಆಯಾ ವಾತಾವರಣಕ್ಕೆ ಅನುಕೂಲವಾಗುವ ಹೇಳಿಕೆ ಕೊಡುತ್ತಾರೆ. ನಾನು ಚನ್ನಪಟ್ಟಣ ‌ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮುಂದಿನ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ವರ್ಧೆ ಮಾಡುವುದಾಗಿ ಹೇಳಿದ್ದಾರೆ. ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕುಮಾರಸ್ವಾಮಿ ಯಾವಾಗಲೂ ಚುನಾವಣೆಯಲ್ಲಿ ‌ಸೋತೆ ಇಲ್ವಾ ? ಕುಮಾರಸ್ವಾಮಿ ಅವರ ಸವಾಲುನ್ನು ಸ್ಫೋಟಿವ್ ಆಗಿ ಸ್ವೀಕಾರ ‌ಮಾಡುತ್ತೇನೆ. ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ. ಸುಮ್ಮನೇ ಅವರಿವರ ಮೇಲೆ ಆರೋಪ ಮಾಡುತ್ತಾರೆ. ಗೆದ್ದರೆ ನನ್ನಿಂದ, ಸೋತರೆ ಇನ್ನೊಬ್ಬನಿಂದ ಅಂತಾ ಹೇಳಿದರೆ ಇದು ಕುಮಾರಸ್ವಾಮಿ ಮೂರ್ಖತನ‌. ಯಾರೋ ಒಬ್ಬ ಸರ್ಕಾರ ಬೀಳಿಸಲು ಸಾಧ್ಯವೇ ? ಹತಾಶೆಯಿಂದ ಹೇಳಿಕೆ ಕೊಡುತ್ತಿದ್ದಾರೆ ಎಂದು ಟಾಂಗ್​ ಕೊಟ್ಟರು.

ನಮ್ಮ ನಡುವಳಿಕೆ ಮೇಲೆ ಸರ್ಕಾರಿ‌ ಅಧಿಕಾರಿಗಳ ನಡುವಳಿಕೆ ಇರುತ್ತದೆ. ಅಧಿಕಾರಿಗಳಿಗೆ ಹೆದರಿಸುವುದು ಕುಮಾರಸ್ವಾಮಿ ‌ಗುಣ. ನನ್ನ ಮೇಲೂ ಬೇರೆ ಕಡೆಯಿಂದ ಗುಂಡಗಳನ್ನು ಕರೆಸಿ ಆಟ್ಯಾಕ್ ಮಾಡಿಸಿದರು. ಕುಮಾರಸ್ವಾಮಿ ‌ಕೇತಗಾನಹಳ್ಳಿ ಬಳಿ ಕಟ್ಟುತ್ತಿದ್ದಾನಲ್ಲ ಜಮೀನು ಅದು ದಲಿತರ ಭೂಮಿ. ಅವನು ದಲಿತರ ಭೂಮಿ‌ ಕಬಳಿಸಿರುವುದು ಎಂದು ಆರೋಪ ಮಾಡಿದರು.

ಚನ್ನಪಟ್ಟಣದಲ್ಲಿ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಇತ್ತೀಚೆಗೆ ವಿಧಾನಪರಿಷತ್‌ ಸದಸ್ಯ ಸಿ ಪಿ ಯೋಗೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ನಡುವೆ ವಾಗ್ದಾಳಿಗಳು ನಡೆದಿದ್ದವು. ಇಬ್ಬರು ನಾಯಕರ ನಡುವಿನ ಗುದ್ದಾಟಕ್ಕೆ ಇಡೀ ಚನ್ನಪಟ್ಟಣವೇ ಸಾಕ್ಷಿಯಾಗಿತ್ತು. ಸಿ. ಪಿ ಯೋಗೇಶ್ವರ, ಸರ್ಕಾರದ ಯೋಜನೆಗಳ ಶಂಕು ಸ್ಥಾಪನಗೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ. ಆದರೆ ಸ್ಥಳಿಯ ಶಾಸಕರನ್ನು ಒಗ್ಗೂಡಿಸಿಕೊಂಡು ಯೋಜನೆಗಳಿಗೆ ಚಾಲನೆ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್​ ತಿಂಗಳಲ್ಲಿ ನಡೆದ ಮಳೆಗಾಲ ಅಧಿವೇಶನದಲ್ಲಿ ಹೇಳಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಸಿ. ಪಿ ಯೋಗೇಶ್ವರ್​ ಇದನ್ನು ಮುರಿದಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು.

ಅಲ್ಲದೇ ಸಿ. ಪಿ ಯೋಗೇಶ್ವರ್ ಕಾರಿನ ಮೇಲೆ ಜೆಡಿಎಸ್​ ಕಾರ್ಯಕರ್ತರು ಮೊಟ್ಟೆ ಎಸೆದಿದ್ದರು. ಇದು ಭಾರಿ ಚರ್ಚಗೆ ಗ್ರಾಸವಾಗಿತ್ತು. ಇದಾದ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್​​ ಕಾರ್ಯಕರ್ತರು ಹಲ್ಲೆ ಮಾಡಿದ್ದರು.  ಒಟ್ಟಾರೆ ಚನ್ನಪಟ್ಟಣದಲ್ಲಿ ಇಬ್ಬರು ನಾಯಕರ ನಡುವೆ ನೇರ ನೇರ ಹಾಣಾ-ಹಣಿ ಇದ್ದು, ನಾಯಕರು ತಮ್ಮ ಬಲಾ-ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:47 pm, Sat, 22 October 22