ಪ್ರಬಲ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡಿ; ಜಾತಿ ಗಣತಿ ಆಧರಿಸಿ ಬಜೆಟ್ ಮಂಡಿಸಿ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ

| Updated By: guruganesh bhat

Updated on: Aug 19, 2021 | 7:02 PM

ಈಗಿರುವ ಶೇಕಡಾ 50ರಷ್ಟು ಮೀಸಲಾತಿ ತೆಗೆಯಬೇಕು, ಜಾತಿ, ಪ್ರವರ್ಗಗಳನ್ನು ವರ್ಗೀಕರಣ ಮಾಡಬೇಕು. ತಮಿಳುನಾಡಿನಲ್ಲಿರುವಂತೆ ಶೇ.73ರಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಡಾ.ಎಸ್.ದ್ವಾರಕನಾಥ್ ತಿಳಿಸಿದರು.

ಪ್ರಬಲ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡಿ; ಜಾತಿ ಗಣತಿ ಆಧರಿಸಿ ಬಜೆಟ್ ಮಂಡಿಸಿ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ
ಡಾ ಸಿ ಎಸ್ ದ್ವಾರಕಾನಾಥ್ ಮತ್ತು ಮುಖ್ಯಮಂತ್ರಿ ಚಂದ್ರು
Follow us on

ಬೆಂಗಳೂರು: ಶಾಸಕರ ಭವನದಲ್ಲಿ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಸಭೆ ನಡೆಸಿ,ಜಾತಿ ಗಣತಿ ವರದಿ ಸ್ವೀಕರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜತೆಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಸ್ಥಾನಮಾನ‌ ನೀಡಲು ವಿರೋಧ ವ್ಯಕ್ತಪಡಿಸಿತು. ಪಂಚಮಸಾಲಿ ಸಮುದಾಯ ಈಗಾಗಲೇ ಮುಂದುವರಿದ ಸಮುದಾಯವಾಗಿದ್ದು,  ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸದಂತೆ ಆಯೋಗ ಮನವಿ ಸಲ್ಲಿಸಿತು. ಪಂಚಮಸಾಲಿ 2ಎಗೆ ಸೇರ್ಪಡೆ ಮಾಡಲು ರಚಿಸಿದ್ದ ನ್ಯಾಯಮೂರ್ತಿ ಸುಭಾಷ್ ಆಡಿ ಆಯೋಗದ ಬಗ್ಗೆಯೂ ವೇದಿಕೆ ಆಕ್ಷೇಪ ವ್ಯಕ್ತಪಡಿಸಿತು. ಆಯೋಗದ ಎರಡು ಸದಸ್ಯರು ಬಿಜೆಪಿ ಸದಸ್ಯರು, ನ್ಯಾಯಮೂರ್ತಿ ಕೂಡ ಪಂಚಮಸಾಲಿ ಸಮುದಾಯ ಆಗಿರುವ ಹಿನ್ನಲೆ ವೇದಿಕೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಕ್ಷೇಪಿಸಿತು. ಜಾತಿ ಗಣತಿಯಿಂದ ಜಾತಿಗಳ ಅಂಕಿಅಂಶ ಸಿಗಲಿದೆ. ಹೀಗಾಗಿ ಜಾತಿ ಗಣತಿ ಸ್ವೀಕರಿಸಿ, ಜಾತಿ ಗಣತಿ ಆಧಾರದಲ್ಲೇ ಬಜೆಟ್ ಮಂಡಿಸುವಂತೆ ವೇದಿಕೆ ಒತ್ತಾಯಿಸಿತು.

ಹಿಂದುಳಿದ ವರ್ಗಗಳ ಮೀಸಲಾತಿ ವರ್ಗೀಕರಣ ಮಾಡಬೇಕು. ಇದರಿಂದ ಅತಿ ಹಿಂದುಳಿದ ವರ್ಗಗಳಿಗೂ ಸಮಾನತೆ ಸಿಗಲಿದೆ. ರಾಜ್ಯದಲ್ಲಿ 160ಕ್ಕೂ ಹೆಚ್ಚು ಸಣ್ಣಪುಟ್ಟ ಜಾತಿಯವರು ಇದ್ದಾರೆ. ಇಂಥವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜಾತಿಗಣತಿ ವರದಿ ಸ್ವೀಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ. ಈಗಿರುವ ಶೇಕಡಾ 50ರಷ್ಟು ಮೀಸಲಾತಿ ತೆಗೆಯಬೇಕು, ಜಾತಿ, ಪ್ರವರ್ಗಗಳನ್ನು ವರ್ಗೀಕರಣ ಮಾಡಬೇಕು. ತಮಿಳುನಾಡಿನಲ್ಲಿರುವಂತೆ ಶೇ.73ರಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಡಾ.ಎಸ್.ದ್ವಾರಕನಾಥ್ ತಿಳಿಸಿದರು.

ಇದೇ ವೇಳೆ ಮಾಧ್ಯಮಗಳ ಜತೆಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಪಂಚಮಸಾಲಿಗರ ಒತ್ತಡಕ್ಕೆ ಸಿಲುಕಿ ಮೀಸಲಾತಿ ನೀಡಬಾರದು. ಅವರಿಗೆ ಮೀಸಲಾತಿ ನೀಡಿದರೆ ನಾವೂ ಹೋರಾಟ ಮಾಡುತ್ತೇವೆ. ಇದನ್ನೇ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೇವೆ.

ಡಾ.ಎಸ್.ದ್ವಾರಕನಾಥ್ ಮಾತನಾಡಿ, ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿ ಮಾಡಿದ್ದೇವೆ. ನಮ್ಮೆಲ್ಲ ಸಮಸ್ಯೆಗಳನ್ನು ಸಿಎಂ ಬೊಮ್ಮಾಯಿ ಕೇಳಿಸಿಕೊಂಡರು. ಜತೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಡಾ.ಸಿ.ಎಸ್.ದ್ವಾರಕಾನಾಥ್ ತಿಳಿಸಿದರು. 190ಕ್ಕೂ ಹೆಚ್ಚು ಸಣ್ಣ ಜಾತಿಗಳು ರಾಜ್ಯದಲ್ಲಿವೆ. ಇವುಗಳಿಗೆ ನ್ಯಾಯ ನೀಡುವ ಕೆಲಸ ಮಾಡಬೇಕು. ಜಾತಿಗಣತಿ ಸ್ವೀಕಾರ ಮಾಡುವಂತೆ ಮನವಿ ಮಾಡಿದ್ದೇವೆ. ಜಾತಿ ಪ್ರವರ್ಗಗಳನ್ನು ವರ್ಗೀಕರಣ ಮಾಡಬೇಕು. ಇದರಿಂದ ಸಣ್ಣ ಜಾತಿಗಳಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವೇದಿಕೆಯ ಗೌರವಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷ ಎಂ ಸಿ ವೇಣುಗೋಪಾಲ್, ಡಾ ದ್ವಾರಕಾನಾಥ್, ವಿ ಆರ್ ಸುದರ್ಶನ್, ಪಿ ಆರ್ ರಮೇಶ್,  ನರೇಂದ್ರಬಾಬು ಸೇರಿದಂತೆ ಹಲವಾರು ಅತಿ ಸಣ್ಣ ಸಮುದಾಯದ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ: 

ಜಾತಿಗಣತಿ ವರದಿ ಬಿಡುಗಡೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸಿದ್ಧವಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ  

Census India: ಜನಗಣತಿಗೆ ಸಿದ್ಧತೆ: ಮತ್ತೊಮ್ಮೆ ಜಾತಿ ಆಧರಿತ ಮಾಹಿತಿ ಸಂಗ್ರಹಿಸುವ ಉದ್ದೇಶವಿಲ್ಲ ಎಂದ ಕೇಂದ್ರ ಸರ್ಕಾರ

(Most Backward classes committee request CM Basavaraj Bommai to Do not make a 2A reservation for the powerful Panchamasali community and Budget Based on Caste Census)

Published On - 6:55 pm, Thu, 19 August 21