ದಾವಣಗೆರೆ: ಮತ್ತೆ ಸಚಿವ S.S.ಮಲ್ಲಿಕಾರ್ಜುನ್ ಭೇಟಿಯಾದ ರೇಣುಕಾಚಾರ್ಯ; ಇಲ್ಲಿದೆ ವಿವರ
ದಾವಣಗೆರೆಯ ಎಂಸಿಸಿಎ ಬ್ಲಾಕ್ನಲ್ಲಿರುವ S.S.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿದ ಎಂಪಿ ರೇಣುಕಾಚಾರ್ಯ ಅವರು ಇದೇ ವೇಳೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ಸಹ ಸಚಿವ ಮಲ್ಲಿಕಾರ್ಜುನ ಅವರನ್ನು ಭೇಟಿ ಆಗಿದ್ದರು.
ದಾವಣಗೆರೆ, ಸೆ.17: ರಾಜ್ಯದಲ್ಲಿ ಕಾಂಗ್ರೆಸ್ (Congress) ಈಗಾಗಲೇ ಭರ್ಜರಿ ಬಹುಮತದೊಂದಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ. ಈ ಮಧ್ಯೆ ರಾಜಕೀಯ ವಲಯದಲ್ಲಿ ಆಪರೇಷನ್ ಹಸ್ತ ಸುದ್ದಿಯಲ್ಲಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಕೆಲ ನಾಯಕರು ಕಾಂಗ್ರೆಸ್ ಶಾಸಕ, ಸಚಿವರನ್ನು ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹೌದು, ಇದೀಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ S.S.ಮಲ್ಲಿಕಾರ್ಜುನ್ (SS Mallikarjun) ಅವರ ನಿವಾಸಕ್ಕೆ ಇಂದು(ಸೆ.17) bಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ(MP Renkacharya) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹೌದು, ದಾವಣಗೆರೆಯ ಎಂಸಿಸಿಎ ಬ್ಲಾಕ್ನಲ್ಲಿರುವ S.S.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿದ ಎಂಪಿ ರೇಣುಕಾಚಾರ್ಯ ಅವರು ಇದೇ ವೇಳೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ಸಹ ಸಚಿವ ಮಲ್ಲಿಕಾರ್ಜುನ ಅವರನ್ನು ಭೇಟಿ ಆಗಿದ್ದರು. ಇದೀಗ ಪದೇ ಪದೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿರುವ ರೇಣುಕಾಚಾರ್ಯ ಅವರ ಒಲವು ಬಹುತೇಕ ಕಾಂಗ್ರೆಸ್ ಕಡೆ ವ್ಯಕ್ತವಾಗಿರುವುದು ಖಚಿತವಾಗಿದೆ.
ಇದನ್ನೂ ಓದಿ:ಆಪರೇಷನ್ ಹಸ್ತಕ್ಕೆ ಬ್ರೇಕ್, ಲೋಕಸಭಾ ಚುನಾವಣೆಗೆ ತಂತ್ರ ಹೆಣೆಯಲು ಇಂದು ಬಿಜೆಪಿ ಕೋರ್ ಕಮಿಟಿ ಸಭೆ
ಹಾರಿಕೆ ಉತ್ತರ ನೀಡಿದ ಎಂಪಿ ರೇಣುಕಾಚಾರ್ಯ
ಸಚಿವ ಮಲ್ಲಿಕಾರ್ಜುನ್ ಭೇಟಿ ಬಳಿಕ ಮಾತನಾಡಿದ ಮಾಜಿ ಶಾಸಕ ರೇಣುಕಾಚಾರ್ಯ ‘ಭದ್ರಾ ಕಾಲುವೆ ನೀರು ಹಾಗೂ ಅಡಿಕೆ ತೋಟಗಳಿಗೆ ನೀರು ಪೂರೈಕೆ ವಿಚಾರದ ಹಿನ್ನೆಲೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾಗಿ ಹಾರಿಕೆ ಉತ್ತರ ನೀಡಿದ್ದಾರೆ. ಹೌದು, ರೈತರ ವಿಚಾರವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭೇಟಿ ಮಾಡಿದ್ದೆ. ಇದು ರಾಜಕೀಯ ಮೀರಿದ ವಿಶ್ವಾಸ ಎಂದಿದ್ದಾರೆ. ಈ ವೇಳೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ವಿಚಾರ ‘ ಕಾಂಗ್ರೆಸ್ನವರು ನನಗೆ ಆಹ್ವಾನ ನೀಡಿಲ್ಲ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಮಾಷೆ ಮಾಡಿದ್ದಾರೆ ಅಷ್ಟೇ, ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು, ಎಲ್ಲೂ ಹೇಳಿಲ್ಲ. ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿ ನಾನು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ