ಈ ದಸರಾಗೆ ಮುಡಾ ಸೈಟ್ ನೋಡುವುದನ್ನ ತಪ್ಪಿಸಿಕೊಳ್ಳಬೇಡಿ: ಸಿಎಂ ವಿರುದ್ಧ ಬಿಜೆಪಿ ವ್ಯಂಗ್ಯ

|

Updated on: Oct 05, 2024 | 2:57 PM

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಘಟಕ ತನ್ನ ಸಾಮಾಜಿಕ ಮಾದ್ಯಮ ಎಕ್ಸ್​​​ನಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್​ ಹಾಕಿದೆ.

ಈ ದಸರಾಗೆ ಮುಡಾ ಸೈಟ್ ನೋಡುವುದನ್ನ ತಪ್ಪಿಸಿಕೊಳ್ಳಬೇಡಿ: ಸಿಎಂ ವಿರುದ್ಧ ಬಿಜೆಪಿ ವ್ಯಂಗ್ಯ
ಬಿಜೆಪಿ ಪೋಸ್ಟ್​​
Follow us on

ಬೆಂಗಳೂರು, ಅಕ್ಟೋಬರ್​ 05: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಹಗರಣ (Muda Scam) ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಾನೂನು ಸಂಕಷ್ಟ ಎದುರಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರದ್ದೂ ಪಾಲು ಇದೆ ಅಂತ ಆರೋಪಿಸಿ ವಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸುತ್ತಿದೆ. ರಾಜಿನಾಮೆ ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿದ್ದು, ರಾಷ್ಟ್ರ ಮಟ್ಟದಲ್ಲೂ ಧರಣಿ ನಡೆಸಲು ಚಿಂತನೆ ನಡೆಸಿದೆ.

ಇದರ ನಡುವೆ ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್​ (ಟ್ವಿಟರ್​)ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್​​ ಹಾಕಿದೆ. “ಈ ದಸರಾದಲ್ಲಿ, ಐದು ಸಾವಿರ ಕೋಟಿ ಮೌಲ್ಯದ ಅದ್ಭುತವಾದ ಮುಡಾ “ಸೈಟ್” ಸೀಯಿಂಗ್ ಟೂರ್​ಅನ್ನು ತಪ್ಪಿಸಿಕೊಳ್ಳಬೇಡಿ. ಸೈಟ್​ ಸೀಯಿಂಗ್​ನಲ್ಲಿ ನೀವು ಹಿಂದೆಂದು ನೋಡದ ಭ್ರಷ್ಟಾಚಾರವನ್ನು ಹತ್ತಿರದಿಂದ ನೋಡಬಹುದು. ಸೈಟ್​ ಸೀಯಿಂಗ್​ಗೆ ಗೋಲ್ಡ್ ಪಾಸ್ ಬೇಕೇ? ದಯವಿಟ್ಟು ಸಂಪರ್ಕಿಸಿ ಸಿಎಂ ಸಿದ್ದರಾಮಯ್ಯ (ನಿಯಮಗಳು ಮತ್ತು ಲಂಚ ಅನ್ವಯಿಸುತ್ತವೆ) ಮತ್ತು ನೆನಪಿಡಿ, ವಾಮ ಮಾರ್ಗವಾಗಿ ಪ್ರವೇಶಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತಮಾಷೆ ಅಲ್ಲ! ಕರ್ನಾಟಕದಲ್ಲಿ ನಾವು ಈಗಾಗಲೇ ಮುಖ್ಯಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ” ಎಂದು ಪೋಸ್ಟ್​​ ಹಾಕಿದೆ.

ಟ್ವಿಟರ್​ ಪೋಸ್ಟ್​​

ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹೋರಾಟ

ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಷ್ಟಮಟ್ಟದಲ್ಲಿ ಹೋರಾಟ ನಡೆಸಲು ಚಿಂತನೆ ನಡೆಸಿದೆ. ಮುಡಾಗೆ ಸೈಟ್ ವಾಪಸ್ ಕೊಟ್ಟಿದ್ದು ಭ್ರಷ್ಟಾಚಾರಕ್ಕೆ ಆಧಾರ ಎಂದು ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸಲು ತಯಾರಿ ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಸುದ್ದಿಗೋಷ್ಠಿ ಮತ್ತು ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ: ಮುಡಾ ಕೇಸ್​: ಕಾಂಗ್ರೆಸ್​-ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ ತಂತ್ರ-ಪ್ರತಿತಂತ್ರ

ಮುಡಾ ಪ್ರಕರಣದ ಹೋರಾಟ ತೀವ್ರಗೊಳಿಸಲು ಬಿಜೆಪಿ ನಾಯಕರು ಯೋಜನೆ ರೂಪಿಸುತ್ತಿದ್ದಾರೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲೂ ಮುಡಾ ಕೇಸ್ ಪ್ರಸ್ತಾಪಿಸಲಾಗುತ್ತಿದೆ. ಅಲ್ಲದೇ, ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲೂ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಮುಡಾ ಹಗರಣದ ಬಗ್ಗೆ ಮಾತನಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:45 pm, Sat, 5 October 24