AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮನ್ನು ಅಲ್ಲಾ ಎಂದಿಗೂ ಕ್ಷಮಿಸಲ್ಲ, ಮುಸ್ಲಿಂ ಸಮುದಾಯದ ವಿರುದ್ಧ ಬುಸುಗುಟ್ಟಿದ ಎಂಟಿಬಿ ನಾಗರಾಜ್‌

ನನ್ನ ಸೋಲಿಗೆ ಮುಸ್ಲಿಂ ಸಮುದಾಯ ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್​ ಆಕ್ರೊಶ ವ್ಯಕ್ತಪಡಿಸಿd್ಅದು, ಅಲ್ಲಾ ಮೇಲೆ ಪ್ರಮಾಣ ಮಾಡಿ ನನ್ನ ಬೆನ್ನಿಗೆ ಚೂರಿ ಹಾಕಿದ್ರಿ ಎಂದು ಕಿಡಿಕಾರಿದ್ದಾರೆ.

ನಿಮ್ಮನ್ನು ಅಲ್ಲಾ ಎಂದಿಗೂ ಕ್ಷಮಿಸಲ್ಲ, ಮುಸ್ಲಿಂ ಸಮುದಾಯದ ವಿರುದ್ಧ ಬುಸುಗುಟ್ಟಿದ ಎಂಟಿಬಿ ನಾಗರಾಜ್‌
ಎಂಟಿಬಿ ನಾಗರಾಜ್
Follow us
ರಮೇಶ್ ಬಿ. ಜವಳಗೇರಾ
|

Updated on: Jun 13, 2023 | 2:23 PM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಕಂಡಿದೆ. ಈ ಬಾರಿ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್, ಶ್ರೀರಾಮುಲು, ಮುರುಗೇಶ್ ನಿರಾಣಿ ಸೇರಿದಂತೆ ಘಟಾನುಘಟಿ ನಾಯಕರುಗಳೇ ಸೋಲುಕಂಡಿದ್ದಾರೆ. ಈ ಸೋಲಿನಿಂದ ಎಂಟಿಬಿ ನಾಗರಾಜ್(MTB Nagaraj)​ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ನಾನು ಸೋಲಲು ಡಾ.ಕೆ.ಸುಧಾಕರ್ ಮಾತ್ರವಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಸಹ ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ಸೋಲಿಗೆ ಮುಸ್ಲಿಂ ಸಮುದಾಯ(Hoskote Muslim community) ಸಹ ಕಾರಣ ಎಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆಯಲ್ಲಿ ನಡೆದ ಆತ್ಮಾವಲೋಕನಾ ಸಭೆಯಲ್ಲಿ ಎಂಟಿಬಿ ನಾಗರಾಜ್ ಮಾತನಾಡಿ, ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದಿದ್ದಾರೆ. ಇದೀಗ ಆ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಆತ ಸೋತ, ನಮ್ಮನ್ನೂ ಸೋಲಿಸಿದ: ಸುಧಾಕರ್ ವಿರುದ್ಧ ನೇರ ಆರೋಪ ಮಾಡಿದ ಎಂಟಿಬಿ ನಾಗರಾಜ್

ಕಳೆದ ಎರಡು ದಿನ ಹಿಂದೆ ಹೊಸಕೋಟೆಯ ಕನಕ ಭವನದಲ್ಲಿ ನಡೆದ ಸೋಲಿನ‌ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ನಾಗರಾಜ್​ ಕ್ಷೇತ್ರದ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಹಣ ತೆಗೆದುಕೊಂಡು ಕಾಂಗ್ರೆಸ್​ಗೆ ವೋಟು ಹಾಕಿದ್ದೀರಿ. ದಿನಕ್ಕೆ ಮೂರು ಸಲ ನಮಾಜ್ ಮಾಡ್ತೀರಿ ಖುರಾನ್ ಮೇಲೆ ಪ್ರಮಾಣ ಮಾಡಿದ್ರಿ . ಅಲ್ಲಾ ಮೇಲೆ ಪ್ರಮಾಣ ಮಾಡಿ ನನ್ನ ಬೆನ್ನಿಗೇ ಚೂರಿ ಹಾಕಿದ್ದೀರಿ. ಮುಸ್ಲಿಮರಿಗೆ ಹಣ ಕೊಡಬೇಡಿ ಮತ ಹಾಕಲ್ಲ ಎಂದು ಹೇಳಿದ್ದರು. ಅದೇ ಹಣವನ್ನ ಹಿಂದೂ ಸಮುದಾಯಗಳಿಗೆ ಕೊಡಿ ಎಂದಿದ್ದರು. ಇನ್ಮುಂದೆ ಭಯ ಪಡುವ ಪ್ರಮೇಯ ಇಲ್ಲ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರಿದ್ದಾರೆ.

ಕಳೆದ ಎರಡು ಚುನಾವಣೆಗಳಲ್ಲಿ ನನಗೆ ಓಟ್ ಹಾಕದೇ ಮೋಸ ಮಾಡಿದ್ರಿ, ಈ ಸಲ ನಾನು ನಿಮ್ಮನ್ನ ನಂಬಿದ್ದೆ. ಆದ್ರೆ, ನಂಬಿಸಿ ಮಾತು ಕೊಟ್ಟು ನನಗೆ ಮೋಸ ಮಾಡಿದ್ರಿ. ಇಷ್ಟು ದಿನ ಸಮುದಾಯ ಪಕ್ಷಾಂತರ ಆಗುತ್ತೆ ಅಂತ ಭಯ ಪಟ್ಟಿದ್ದಾಯ್ತು. ಇನ್ಮುಂದೆ ಭಯ ಪಡುವ ಪ್ರಮೆಯ ಇಲ್ಲ ಎಂದು ಸೋಲಿನ‌ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ನಾಗರಾಜ್​ ಗುಡುಗಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.