ಮುಂಬೈ: ಶಿವಸೇನಾದ (Shiv Sena) ಶಾಸಕರು ಏಕನಾಥ್ ಶಿಂಧೆ (Eknath Shinde) ಪಾಳಯಕ್ಕೆ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ, ರಾಜ್ಯ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವ ಶಿಂಧೆ, ಶಿವಸೇನಾ ಮತ್ತು ಅದರ ಸೈನಿಕರ ಉಳಿವು ಖಚಿತಪಡಿಸಿಕೊಳ್ಳಲು ಪಕ್ಷವು “ಅಸಹಜ ಮೈತ್ರಿ ” ದಿಂದ ಹೊರಬರುವುದು ಅಗತ್ಯ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ (NCP) ಜೊತೆ ಮೈತ್ರಿ ಮಾಡಿಕೊಂಡಿದ್ದು ಅದನ್ನೇ ಶಿಂಧೆ ಅಸಹಜ ಮೈತ್ರಿ ಎಂದು ಹೇಳಿದ್ದಾರೆ. ಎಂವಿಎ ಸರ್ಕಾರದ ಅಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ, ಸಮ್ಮಿಶ್ರ ಪಾಲುದಾರರು ಮಾತ್ರ ಲಾಭ ಪಡೆದರು. ಶಿವಸೈನಿಕರು ಹತಾಶರಾಗಿದ್ದರು. ನಮ್ಮ ಮಿತ್ರಪಕ್ಷಗಳು ಬಲಗೊಂಡಾಗ ಶಿವಸೇನಾ ಮತ್ತು ಸೈನಿಕರನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲಾಯಿತು. ಪಕ್ಷ ಮತ್ತು ಸೈನಿಕರ ಉಳಿವಿಗಾಗಿ, ಈ ಅಸಹಜ ಮೈತ್ರಿಯಿಂದ ಹೊರಬರುವುದು ಅವಶ್ಯಕ. ಮಹಾರಾಷ್ಟ್ರದ ಒಳಿತಿಗಾಗಿ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ ಎಂದು ಶಿಂಧೆ ಟ್ವೀಟಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಸಂಜೆ ಫೇಸ್ಬುಕ್ ಲೈವ್ ಮೂಲಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ಸಿದ್ಧ. ಬಂಡಾಯ ಶಾಸಕರಿಂದ ಅಧಿಕೃತ ಹೇಳಿಕೆ ಬಂದರೆ ಸಿಎಂ ಸ್ಥಾನ ತ್ಯಜಿಸಿ ನಾನು ಮುಖ್ಯಮಂತ್ರಿ ನಿವಾಸವನ್ನು ತೊರೆಯುತ್ತೇನೆ. ನನ್ನ ಬಳಿ ಬಂದು ರಾಜೀನಾಮೆ ಪತ್ರ ಕೇಳಿದರೆ ನಾನು ಅದನ್ನು ಕೊಡುತ್ತೇನೆ. ನಾನು ಸಿಎಂ ಆಗಿ ಮುಂದುವರಿಯುವುದು ಇಷ್ಟವಿಲ್ಲ ಎಂದು ಯಾವುದಾದರೂ ಶಾಸಕ ಹೇಳಿದರೆ ನಾನು ವರ್ಷಾ ಬಂಗ್ಲಾದಿಂದ (ಸಿಎಂ ಅಧಿಕೃತ ನಿವಾಸ) ಮಾತೋಶ್ರೀಗೆ ನನ್ನ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಸ್ವಂತದವರು ಹೊಡೆದರೆ ಹೆಚ್ಚು ನೋವಾಗುತ್ತದೆ ಎಂದಿದ್ದಾರೆ.
१. गेल्या अडीच वर्षात म.वि.आ. सरकारचा फायदा फक्त घटक पक्षांना झाला,आणि शिवसैनिक भरडला गेला.
२. घटक पक्ष मजबूत होत असताना शिवसैनिकांचे – शिवसेनेचे मात्र पद्धतशीर खच्चीकरण होत आहे. #HindutvaForever
— Eknath Shinde – एकनाथ शिंदे (@mieknathshinde) June 22, 2022
३. पक्ष आणि शिवसैनिक टिकविण्यासाठी अनैसर्गिक आघाडीतून बाहेर पडणे अत्यावश्यक.
४. महाराष्ट्रहितासाठी आता निर्णय घेणे गरजेचे.#HindutvaForever
— Eknath Shinde – एकनाथ शिंदे (@mieknathshinde) June 22, 2022
ಏತನ್ಮಧ್ಯೆ, ಒಡೆದುಹೋದ ಬಣದ ಭಾಗವಾಗಿರುವ 34 ಶಿವಸೇನೆ ಶಾಸಕರು ಏಕನಾಥ್ ಶಿಂಧೆ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸುವ ನಿರ್ಣಯವನ್ನು ಅಂಗೀಕರಿಸಿದರು. ನಿರ್ಣಯದಲ್ಲಿ, ಅವರು “ ಸೈದ್ಧಾಂತಿಕವಾಗಿ ಪಕ್ಷವನ್ನು ವಿರೋಧಿಸುವ ಎನ್‌ಸಿಪಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿದ್ದಕ್ಕಾಗಿ ಶಿವಸೇನಾದೊಂದಿಗೆ ಪಕ್ಷದ ಕಾರ್ಯಕರ್ತರಲ್ಲಿ ತುಂಬಾ ಅಸಮಾಧಾನವಿದೆ ಎಂದು ಹೇಳಿದ್ದಾರೆ.
ಮಾತೋಶ್ರೀ ಬಂಗ್ಲೆಗೆ ಶಿಫ್ಟ್ ಆದ ಉದ್ಧವ್ ಠಾಕ್ರೆ ಮತ್ತು ಕುಟುಂಬ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ವರ್ಷಾ’ದಿಂದ ತಮ್ಮ ವೈಯಕ್ತಿಕ ವಸ್ತುಗಳನ್ನು ‘ಮಾತೋಶ್ರೀ’ಗೆ ಸ್ಥಳಾಂತರಿಸಿದ್ದಾರೆ. ಮನೆಯಿಂದ ಹೊರಡುವಾಗ ಪತ್ನಿ ರಶ್ಮಿ, ಮಕ್ಕಳಾದ ತೇಜಸ್ ಮತ್ತು ಆದಿತ್ಯ ಜೊತೆಗಿದ್ದರು. ವರ್ಷಾ ಅಧಿಕೃತ ನಿವಾಸವಾಗಿದ್ದರೂ, ಠಾಕ್ರೆ ತನ್ನ ಖಾಸಗಿ ನಿವಾಸ ಮಾತೋಶ್ರೀಯಿಂದ ಕಾರ್ಯನಿರ್ವಹಿಸಲು ಬಳಸುತ್ತಿರುತ್ತಾರೆ.
#WATCH Maharashtra CM Uddhav Thackeray along with his family leaves from his official residence, amid chants of “Uddhav tum aage badho, hum tumhare saath hain” from his supporters.#Mumbai pic.twitter.com/m3KBziToV6
— ANI (@ANI) June 22, 2022
‘ಮಾತೋಶ್ರೀ’ ಹೊರಗೆ ಶಿವಸೇನಾ ಕಾರ್ಯಕರ್ತರ ದಂಡು
ಮುಂಬೈನಲ್ಲಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಶಿವಸೇನೆ ಕಾರ್ಯಕರ್ತರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಜಮಾಯಿಸಿದ್ದಾರೆ.
#WATCH Shiv Sena workers gather outside Maharashtra CM Uddhav Thackeray’s residence ‘Matoshree’ to express their support, in Mumbai pic.twitter.com/WtpciHr5ZX
— ANI (@ANI) June 22, 2022
ಶಿವಸೇನೆಯ ಯಾವುದೇ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ, ಏಕನಾಥ್ ಶಿಂಧೆ ಜೊತೆ ಮಾತನಾಡಿಲ್ಲ: ಬಿಜೆಪಿ ನಾಯಕ
ಮುಂಬೈನಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕ ರಾವ್ಸಾಹೇಬ್ ಪಾಟೀಲ್ ದಾನ್ವೆ, ಯಾವುದೇ ಶಿವಸೇನಾ ನಾಯಕರು ಪಕ್ಷದೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ.
Maharashtra | No Shiv Sena MLA in touch with us. We haven’t spoken to Eknath Shinde. This is Shiv Sena’s internal matter. BJP has nothing to do with this. We’re not staking claim to form govt: BJP leader Raosaheb Patil Danve after meeting with party’s Devendra Fadnavis in Mumbai pic.twitter.com/xksNLKxA5Y
— ANI (@ANI) June 22, 2022
ಉದ್ಧವ್ ಠಾಕ್ರೆ ಸಿಎಂ ಆಗಿಯೇ ಇರುತ್ತಾರೆ: ಶಿವಸೇನೆ ನಾಯಕ ಸಂಜಯ್ ರಾವತ್
Mumbai | Uddhav Thackeray is Maharashtra Chief Minister and he will remain the CM, says Shiv Sena leader Sanjay Raut. pic.twitter.com/ZDQLIsaSmC
— ANI (@ANI) June 22, 2022
ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು, ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಅವಕಾಶ ಸಿಕ್ಕರೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ ಎಂದಿದ್ದಾರೆ ರಾವತ್.
ಕೊವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಧವ್ ವಿರುದ್ಧ ದೂರು
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮುಂಬೈನ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಭೇಟಿ ಮಾಡಿದ್ದಕ್ಕಾಗಿ ಬಿಜೆಪಿ ಯುವ ರಾಷ್ಟ್ರೀಯ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ.
Published On - 9:57 pm, Wed, 22 June 22