Mysore Dasara: ರಾಷ್ಟ್ರಪತಿ ಜೊತೆ ಸಚಿವ ಸೋಮಶೇಖರ್ ವೇದಿಕೆ ಹಂಚಿಕೊಳ್ಳದಂತೆ ಎಎಪಿ ಆಗ್ರಹ

| Updated By: Rakesh Nayak Manchi

Updated on: Sep 24, 2022 | 1:08 PM

ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕ್ರಿಮಿನಲ್​ ಆರೋಪ ಹೊತ್ತಿರುವ ಸಚಿವ ಸೋಮಶೇಖರ್ ಅವರು ರಾಷ್ಟ್ರಪತಿ ಜೊತೆ ವೇದಿಕೆ ಹಂಚಿಕೊಳ್ಳಬಾರದು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

Mysore Dasara: ರಾಷ್ಟ್ರಪತಿ ಜೊತೆ ಸಚಿವ ಸೋಮಶೇಖರ್ ವೇದಿಕೆ ಹಂಚಿಕೊಳ್ಳದಂತೆ ಎಎಪಿ ಆಗ್ರಹ
ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಜೊತೆ ಸಚಿವ ಸೋಮಶೇಖರ್ ವೇದಿಕೆ ಹಂಚಿಕೊಳ್ಳದಂತೆ ಎಎಪಿ ಆಗ್ರಹ
Follow us on

ಮೈಸೂರು: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ (Mysore Dasara Inauguration)ಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಉದ್ಘಾಟಿಸಲಿದ್ದಾರೆ. ಈ ನಡುವೆ ಆಮ್ ಆದ್ಮಿ ಪಕ್ಷ (AAP) ಸಚಿವ ಎಸ್​.ಟಿ. ಸೋಮಶೇಖರ್ (S.T.Somashekhar)​ ವಿರುದ್ಧ ಹರಿಹಾಯ್ದಿದ್ದು, ಕ್ರಿಮಿನಲ್​ ಆರೋಪ ಹೊತ್ತಿರುವ ಸಚಿವ ಸೋಮಶೇಖರ್ ಅವರು ರಾಷ್ಟ್ರಪತಿ ಜೊತೆ ವೇದಿಕೆ ಹಂಚಿಕೊಳ್ಳಬಾರದು ಎಂದು ಆಗ್ರಹಿಸಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷವು ರಾಷ್ಟ್ರಪತಿ ಅವರಿಗೆ ಪತ್ರ ಕೂಡ ಬರೆದಿದೆ. ಇಂದು ಮಧ್ಯಾಹ್ನದ ವೇಳೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಪಕ್ಷದ ಪದಾಧಿಕಾರಿಗಳು ಪತ್ರವನ್ನು ರಾಜ್ಯಪಾಲರಿಗೆ ನೀಡಲಿದ್ದಾರೆ.

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 26ರಂದು ಚಾಲನೆ ಸಿಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಮಹೋತ್ಸವ 2022 ಅನ್ನು ಉದ್ಘಾಟಿಸಲಿದ್ದಾರೆ. ಈ ಮಧ್ಯೆ, ವೇದಿಕೆಯಲ್ಲಿ ಭಾಗವಹಿಸುವ ಗಣ್ಯರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ 15 ಗಣ್ಯರಿಗೆ ಅವಕಾಶ ನೀಡಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲ, ಸಿಎಂ ಸೇರಿ 15 ಗಣ್ಯರಿಗೆ ಅವಕಾಶ ನೀಡಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್​​​, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಜೊತೆಗೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್, ಸಚಿವರಾದ ಸುನಿಲ್​ ಕುಮಾರ್​, ಶಶಿಕಲಾ ಜೊಲ್ಲೆ, ಆನಂದ್ ಸಿಂಗ್​ ಹಾಗೂ ಶಾಸಕ ಜಿ.ಟಿ. ದೇವೇಗೌಡ, ಮೈಸೂರು ಮೇಯರ್ ಶಶಿಕುಮಾರ್​​ಗೆ ಸ್ಥಾನ ನೀಡಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ಕ್ಕೆ ಮೈಸೂರು ಜಿಲ್ಲಾಡಳಿತದಿಂದ ರಾಜ್ಯಪಾಲರಿಗೆ ಆಹ್ವಾನ ನೀಡಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Sat, 24 September 22