AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇ ಸಿಎಂ ತರಹ ಬೇರೆ ಬೇರೆ ಸಚಿವರ ಕ್ಯೂ ಆರ್​​ಕೋಡ್​ ರಿಲೀಸ್ ಮಾಡಿದ ಕಾಂಗ್ರೆಸ್

ಕಾಂಗ್ರೆಸ್ ‘ಪೇ ಸಿಎಂ’ ತರಹ ಸಚಿವರಾದ ಅಶ್ವತ್ಥ್ ನಾರಾಯಣ, ಡಾ. ಕೆ ಸುಧಾಕರ್, ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕ್ಯೂಆರ್​ ಕೋಡ್ ಬಿಡುಗಡೆ ಮಾಡಿದೆ.

ಪೇ ಸಿಎಂ ತರಹ ಬೇರೆ ಬೇರೆ ಸಚಿವರ ಕ್ಯೂ ಆರ್​​ಕೋಡ್​ ರಿಲೀಸ್ ಮಾಡಿದ ಕಾಂಗ್ರೆಸ್
ಪೇಸಿಎಂ ಕ್ಯೂಆರ್ ಕೋಡ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 24, 2022 | 4:56 PM

ಬೆಂಗಳೂರು: ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಭಾವಚಿತ್ರವಿರುವ ಪೇ ಸಿಎಂ (Paycm) ಎಂದು ಪೋಸ್ಟರ್​ ತಯಾರಿಸಿ ಬೆಂಗಳೂರಿನ ಕೆಲವು ಗೋಡೆಗಳಿಗೆ ಅಂಟಿಸಿದ್ದರು. ಇದು ಬಿಜೆಪಿ ನುಂಗಲಾರದ ತುತ್ತಾಗಿತ್ತು. ಅದಿವೇಶನವನ್ನು ಬಲಿ ಪಡೆಯಿತು. ಈಗ ಕಾಂಗ್ರೆಸ್ ಮುಂದುವರೆದು ‘ಪೇ ಸಿಎಂ’ ತರಹ ಸಚಿವರಾದ ಅಶ್ವತ್ಥ್ ನಾರಾಯಣ, ಡಾ. ಕೆ ಸುಧಾಕರ್, ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕ್ಯೂಆರ್​ ಕೋಡ್ ಬಿಡುಗಡೆ ಮಾಡಿದೆ. ಕಾಂಗ್ರೆಸ್​ ‘ಪೇ ಸಿಎಂ’ ಪೋಸ್ಟರ್​​ನಲ್ಲೇ ಸಚಿವರ ಭಾವಚಿತ್ರದ ಕ್ಯೂಆರ್​ ಕೋಡ್​ಗಳನ್ನು ರಿಲೀಸ್​ ಮಾಡಿದೆ.

ರಾಜ್ಯದಲ್ಲಿ ಎರಡು  ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ವಿಚರವಾಗಿ ಕೆಸರೆಚಾಟ ಶುರುಹಚ್ಚಿಕೊಂಡಿವೆ.  ಕಾಂಗ್ರೆಸ್  ಪೇಸಿಎಂ ಅಭಿಯಾನ ಪ್ರಾರಂಭಿಸಿದಾಗಿನಿಂದಲು ಬಿಜೆಪಿ ಸಂಕಟ ಶುರುವಾಗಿದೆ

‘ಪೇಸಿಎಂ’ ವಿರುದ್ಧ ಸಿಎಂ ಕಿಡಿ: ಕ್ರಮಕ್ಕೆ ಆಗ್ರಹ: ಸಿಎಂ ಬೊಮ್ಮಾಯಿ

ಪ್ರಕರಣದ ಕುರಿತಾಗಿ ಹೆಚ್.ಡಿ.ದೇವೇಗೌಡರ ನಿವಾಸದ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು, ಆಧಾರ ರಹಿತವಾಗಿ ಇಂತಹ ಅಭಿಯಾನ ಮಾಡುವುದು ಸರಿಯಲ್ಲ. ‘ಪೇಸಿಎಂ’ ಪೋಸ್ಟರ್ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಇಂತಹ ಪೋಸ್ಟರ್​ ಹಾಕುವುದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತೆ. ಕಿಡಿಗೇಡಿಗಳು ಯಾರೇ ಇದ್ದರೂ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದರು.

‘ಪೇ ಸಿಎಂ’ ಪೋಸ್ಟರ್​ ಪ್ರಕರಣ: ಸಿಸಿಬಿಗೆ ವರ್ಗಾವಣೆ

ಇನ್ನೂ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದು, ವರ್ಗಾವಣೆ ಆಗ್ತಿದ್ದಂತೆ ಸಿಸಿಬಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸಿಸಿಬಿ ಸ್ಪೆಷಲ್ ಎನ್ಕ್ವೈರಿ ವಿಂಗ್​ನಿಂದ ಎಸಿಪಿ ಸುರೇಶ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ. ಪೋಸ್ಟರ್ ಅಂಟಿಸಿರೋ ಜಾಗಗಳಿಗೆ ಸಿಸಿಬಿ ಪೊಲೀಸರು ವಿಸಿಟ್ ಮಾಡಿದ್ದು, ಯಾವ್ಯಾವ ಠಾಣಾ ವ್ಯಾಪ್ತಿಯಲ್ಲಿ ಪೋಸ್ಟರ್ ಅಂಟಿಸಲಾಗಿದೆ ಎಲ್ಲಾ ಜಾಗಗಳಿಗೂ‌ ಭೇಟಿ ಪರಿಶೀಲನೆ ಮಾಡಿದರು. ಪೋಸ್ಟರ್ ಅಂಟಿಸಿರೋ ಜಾಗದ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಪಡೆದಿದ್ದು, ಸಿಸಿಬಿ ಟೀಂ ಪರಿಶೀಲನೆ ನಡೆಸಿದೆ. ಸಿಸಿಬಿ ಸ್ಪೆಷಲ್‌ ಎನ್ಕ್ವೈರಿ ಟೀಂನಿಂದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

ಕಾಂಗ್ರೆಸ್ ನ ‘ಪೇಸಿಎಂ’ ಅಭಿಯಾನಕ್ಕೆ ಸಿ.ಟಿ.ರವಿ ಆಕ್ರೋಶ

ಕಾಂಗ್ರೆಸ್​ನ ‘ಪೇಸಿಎಂ’ ಅಭಿಯಾನಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸಿ.ಟಿ ರವಿ ದೆಹಲಿಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಚುನಾವಣೆಗೆ ಟೂಲ್‌ ಕಿಟ್ ತಯಾರು ಮಾಡಿದೆ. ಇದು ಟೂಲ್ ಕಿಟ್ ಒಂದು ಭಾಗ. 40% ಸರ್ಕಾರ ಎಂದು ಮೂರ್ನಾಲ್ಕು ತಿಂಗಳಿನಿಂದ ಪ್ರಯತ್ನ ಮಾಡುತ್ತಿದೆ. ಈವರೆಗೂ ಸಾಕ್ಷಿ ಸಮೇತ ದೂರು ಕೊಡುವ ಪ್ರಯತ್ನ ಮಾಡಿಲ್ಲ. ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುತ್ತಿದ್ದಾರೆ. ಲೋಕಾಯುಕ್ತ ಈಗ ಓಪನ್ ಇದೆ ಹೋಗಿ ದೂರ ಕೊಡಲಿ. ಕಾಂಗ್ರೆಸ್ ಸಾಕಷ್ಟು ಹಗರಣ ಮುಚ್ಚಿ ಹಾಕಿದೆ. ನಾವು ಪಿಎಸ್‌ಐ ಹಗರಣ ಮುಚ್ಚಿ ಹಾಕಬಹುದಿತ್ತು. ಆದರೆ ನಾವು ಐಜಿಪಿಯಂತಹ ಹಿರಿಯ ಅಧಿಕಾರಯನ್ನು ಬಂಧಿಸಿದ್ದೇವೆ.

ಹಗರಣ ಮುಚ್ಚಿದ ಕಾಂಗ್ರೆಸ್ ಬೇಕಾ, ಅಧಿಕಾರಿಯನ್ನೇ ಬಂಧಿಸಿದ ಬಿಜೆಪಿ ಬೇಕಾ ಜನರು ನಿರ್ಧರಿಸಲಿ. ಜನರು ಬಿಜೆಪಿ ಮೇಲೆ ವಿಶ್ವಾಸ ಇಡ್ತಾರೆ ಎನ್ನುವ ನಂಬಿಕೆ ಇದೆ. ದೇಶದ 73% ಜನರಿಗೆ ನಾವು ಬೇರೆ ಬೇರೆ ಯೋಜನೆಗಳ ಮೂಲಕ ಸಹಾಯ ಮಾಡಿದ್ದೇವೆ. ನಮ್ಮ ಯೋಜನೆಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗ್ತಿವಿ. ನಾವು ವಿರೋಧ ಪಕ್ಷವಾಗಿ ಫೇಲ್ ಆಗಿಲ್ಲ. ಹಗರಣ ನಡೆದಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ನಾವು ವಿಪಕ್ಷ ದಲ್ಲಿದ್ದ ಅವಧಿಯಲ್ಲೂ ವಕ್ಫ್ ಬೋರ್ಡ್ ಸೇರಿ ಹಲವು ತನಿಖೆಗಳು ನಡೆದಿವೆ. ಭ್ರಷ್ಟಾಚಾರರನ್ನು ಕಾಂಗ್ರೆಸ್ ರಕ್ಷಣೆ ಮಾಡಿತ್ತು.ವಾಚ್, ಹಾಸಿಗೆ ದಿಂಬು, ಶಿಕ್ಷಕರ ನೇಮಕ ಸೇರಿ ಹಲವು ಹಗರಣ ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದ್ದರು.

ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ: ಪ್ರಿಯಾಂಕ್ ಖರ್ಗೆ

ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಸಾರ್ವಜನಿಕವಾಗಿ ಚರ್ಚೆ ಆಗಿರುವುದನ್ನ ಅಭಿಯಾನ ಮಾಡ್ತಿದ್ದೇವೆ. ಇದಕ್ಕೆ  ಉತ್ತರ ಕೊಡಬೇಕಾದವರು ಬಿಜೆಪಿಯವರು. ಪೋಸ್ಟರ್ ಹರಿದು ಟ್ವಿಟ್ಟರ್, ವೆಬ್‌ಸೈಟ್ ಹ್ಯಾಕ್ ಮಾಡಬಹುದು. ಆದರೆ ಚರ್ಚೆ ಮಾಡಲು ಬಿಜೆಪಿಯವರು ಹೆದರುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:46 pm, Sat, 24 September 22