ಸಹಕಾರ ಬ್ಯಾಂಕ್ ಚುನಾವಣೆ ಮುಂದೂಡಿಕೆ: ಜಿಟಿ ದೇವೇಗೌಡ ಕುಟುಂಬಕ್ಕೆ ಟಕ್ಕರ್ ಕೊಡಲು ಮುಂದಾದ್ರಾ ಸಿಎಂ ಸಿದ್ದರಾಮಯ್ಯ?
ಜಿ.ಟಿ.ದೇವೇಗೌಡ ಕುಟುಂಬಕ್ಕೆ ಟಕ್ಕರ್ ಕೊಡಲು ಮುಂದಾದ್ರಾ ಸಿಎಂ? ಸಹಕಾರ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಕುಟುಂಬದ ಹಿಡಿತ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ರಾ? ಸಿದ್ದರಾಮಯ್ಯ ಸೂಚನೆ ಮೇರೆ ಜಿಲ್ಲಾಧಿಕಾರಿ ಚುನಾವಣೆ ಮುಂದೂಡಿದ್ರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಕಾರಣ ಮೈಸೂರು-ಚಾಮರಾಜನಗರ ಸಹಕಾರ ಬ್ಯಾಂಕ್ ಚುನಾವಣೆ ಮುಂದೂಡಿಕೆ.
ಮೈಸೂರು, (ಸೆಪ್ಟೆಂಬರ್ 19): ಮೈಸೂರು-ಚಾಮರಾಜನಗರ(Mysuru Chamarajnagar) ಸಹಕಾರ ಬ್ಯಾಂಕ್ ಚುನಾವಣೆ(Cooperative Bank Election) ಮುಂದೂಡಿಕೆ ಮಾಡಲಾಗಿದೆ. ಅಕ್ಟೋಬರ್ 4ರಂದು ಸಹಕಾರ ಬ್ಯಾಂಕ್ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಆದ್ರೆ, ಇದೀಗ ಏಕಾಏಕಿ ಚುನಾವಣೆ ದಿನಾಂಕ ಮುಂದೂಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ನಿಯಮಾವಳಿಗಳ ಪ್ರಕಾರ ಮತದಾರ ಪಟ್ಟಿ ತಯಾರಿಸದ ಆರೋಪ ಹಾಗೂ ಬ್ಯಾಂಕ್ಗಳಿಂದ ಡೆಲಿಗೇಟ್ ಫಾರಂ ಸಲ್ಲಿಸುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ. ಆದರೂ ಸಹ ಜಿಲ್ಲಾಧಿಕಾರಿ ನಡೆ ಹಲವು ಚರ್ಚೆಗೆ ಗ್ರಾಸವಾಗಿದೆ.
ಬ್ಯಾಂಕ್ ನ ಅಡಿಯಲ್ಲಿ ಇದೆ 1500 ಕ್ಕು ಹೆಚ್ಚು ಸಹಕಾರ ಸಂಘಗಳು ಇವೆ. ಸದ್ಯ ಶಾಸಕ ಜಿ.ಟಿ.ದೇವೇಗೌಡ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿದ್ದರೆ. ಪತ್ನಿ ಲಲಿತಾ ಜಿ.ಟಿ ದೇವೇಗೌಡ ಪತ್ತಿನ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿದ್ದಾರೆ. ಇನ್ನು ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ ಮೈಸೂರು ಚಾಮರಾಜನಗರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಹೀಗೆ ಮೂವರು ಸಹಕಾರ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಕುಟುಂಬ ತನ್ನದೇ ಆದ ಹಿಡತ ಹೊಂದಿದೆ. ಹೀಗಾಗಿ ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಿ ತಮ್ಮ ಬೆಂಬಲಿಗರಿಗೆ ಅಧ್ಯಕ್ಷ ಗಾದಿಯಲ್ಲಿ ಕೂರಿಸಲ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ.
ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ಸಿದ್ದರಾಮಯ್ಯ , ಅ.4 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿ ಕೆಲವೇ ದಿನ ಬಾಕಿ ಇರುವಾಗಲೇ ಏಕಾಏಕಿ ಚುನಾವಣೆ ಮುಂದೂಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಜಿ.ಟಿ.ದೇವೇಗೌಡ ಕುಟುಂಬಕ್ಕೆ ಟಕ್ಕರ್ ಕೊಡಲು ಮುಂದಾದ್ರಾ ಸಿಎಂ? ಸಹಕಾರ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಕುಟುಂಬದ ಹಿಡಿತ ತಪ್ಪಿಸಲು ಸಿಎಂ ಸಿದ್ದರಾಂಯ್ಯ ಪ್ಲ್ಯಾನ್ ಮಾಡಿದ್ರಾ? ಸಿದ್ದರಾಮಯ್ಯ ಸೂಚನೆ ಮೇರೆ ಜಿಲ್ಲಾಧಿಕಾರಿ ಚುನಾವಣೆ ಮುಂದೂಡಿದ್ರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:07 am, Tue, 19 September 23