
ಮೈಸೂರು: ಮೈಸೂರಿನಲ್ಲಿ ಶುರುವಾಗಿದ್ದ ಗುಂಬಜ್ ಗುದ್ದಾಟಕ್ಕೆ (Mysuru Gumbaj Row) ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ವಿವಾದದಂತಿದ್ದ ಗುಂಬಜ್ ವಾರ್ ಈಗ ಪೊಲಿಟಿಕಲ್ ಟರ್ನ್ ಪಡೆದುಕೊಂಡಿದೆ. ಇನ್ನು ಇದೇ ವಿಚಾರವಾಗಿ ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಪ್ರತಿಕ್ರಿಯಿಸಿದ್ದು, ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಅರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಬಸ್ ಶೆಲ್ಟರ್ ವಿವಾದ ವಿಚಾರದ ಬಗ್ಗೆ ಮೈಸೂರಿನಲ್ಲಿ ಇಂದು(ನ.17) ಸುದ್ದಿಗಾರರೊಂದಿಗೆ ಮಾತನಾಡಿದ ರಾಮದಾಸ್, ಬಿಜೆಪಿಯ 11 ಜನ ಶಾಸಕರು ಇದ್ದರು. ಕಿರುಕುಳ ನೀಡಿದ್ದರಿಂದ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೆ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನು ಪ್ರಶ್ನೆ ಕೇಳಬೇಡಿ ಎಂದು ಕೈ ಮುಗಿದು ಬೇಡಿಕೊಂಡರು.
ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ. ನನ್ನನ್ನು ದಯಮಾಡಿ ಬಿಟ್ಟು ಬಿಡಿ. ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್ ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕು ಅನ್ನೋದೆ ನನ್ನ ಗುರಿ. ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದು, ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರು ಅದಕ್ಕೆ ಬದ್ಧ ಎಂದು ಗದ್ಗದಿತರಾಗಿ ಪ್ರತಿಕ್ರಿಯೆ ನೀಡಿದರು.
ಮೈಸೂರಿನ ಬಹುತೇಕ ಕಟ್ಟಡಗಳಲ್ಲಿರುವುದು ಗೋಪುರವು ಅಲ್ಲ ಗುಮ್ಮಟವೂ ಅಲ್ಲ – ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್
ಪ್ರತಾಪ್ ಸಿಂಹ- ರಾಮದಾಸ್ ಫೈಟ್
ಅರಮನೆ ನಗರಿ ಮೈಸೂರಿನಲ್ಲಿ ಶುರುವಾಗಿರುವ ಗುಂಬಜ್ ಗುದ್ದಾಟ ದಿನಕ್ಕೊಂದು ರೀತಿ ತಿರುವು ಪಡೆದುಕೊಳ್ತಿದೆ.. ಬಸ್ ನಿಲ್ದಾಣದ ಮೇಲ್ಚಾವಣಿ ಗುಂಬಜ್ ಮಾದರಿಯಲ್ಲಿದೆ ಅಂತ ಪ್ರತಾಪ್ ಸಿಂಹ ಬಾಂಬ್ ಸಿಡಿಸಿದ್ದೇ ತಡ, ಇದ್ದಕಿದ್ದಂತೆ ಗುಂಬಜ್ ಮೇಲೆ ಕಳಶ ಪ್ರತಿಷ್ಠಾಪನೆ ಆಗೇ ಬಿಡ್ತು.
ಇಷ್ಟು ದಿನ ವಿವಾದದಂತಿದ್ದ ಗುಂಬಜ್ ವಾರ್ ಈಗ ಪೊಲಿಟಿಕಲ್ ಟರ್ನ್ ಪಡೆದುಕೊಂಡಿದೆ. ಸಂಸದ ಪ್ರತಾಪ್ ಸಿಂಹ ಗುಂಬಜ್ ವಿರುದ್ಧ ಗುಡುಗಿದ್ರೆ, ಶಾಸಕ ರಾಮದಾಸ್ ಮಾತ್ರ ಇದಕ್ಕೆ ಟಕ್ಕರ್ ಕೊಡುವಂತೆ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಇಬ್ಬರ ಮುಸುಕಿನ ಗುದ್ದಾಟಕ್ಕೆ ಕಿಚ್ಚು ಹಚ್ಚಿದಂತಿದೆ. ಸಾಲದಕ್ಕೆ ರಾಮದಾಸ್ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ದೂರು ನೀಡಿದ್ದಾರೆ.
ಕೃಷ್ಣರಾಜ ಕ್ಷೇತ್ರದಲ್ಲಿ ತಲೆ ಎತ್ತಿರುವ ಗುಂಬಜ್ ಗುದ್ದಾಟ ಮೊದ ಮೊದಲು ಜಸ್ಟ್ ಬಿಸಿಯೇರಿತ್ತು ಅಷ್ಟೇ. ವಿವಾದ ಎಂಬಂತೆ ಸುದ್ದಿ ಆಗಿತ್ತು. ಆದ್ರೆ ಗುಂಬಜ್ ಗುದ್ದಾಟಕ್ಕೆ ರಾಜಕೀಯ ಕದನ ಅಂಟಿಕೊಳ್ಳುವಂತೆ ಮಾಡಿದೆ. ಗುಂಬಜ್ ಗುದ್ದಾಟದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಎಸ್.ಎ ರಾಮದಾಸ್ ನಡುವಿನ ಕಾಳಗ ಮತ್ತೊಮ್ಮೆ ಬಟಾ ಬಯಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:06 pm, Thu, 17 November 22