ಬಿಜೆಪಿ 306 ಲೋಕ ಸಭಾ ಕ್ಷೇತ್ರ ಗೆದ್ದಿತ್ತು; ಆದರೆ ಮುಂದೆ ಏಕಾಂಗಿಯಾಗಿ ಅಷ್ಟು ಬರೋಲ್ಲ -ದೇವೇಗೌಡ ರಾಜಕೀಯ ಭವಿಷ್ಯ

| Updated By: ಸಾಧು ಶ್ರೀನಾಥ್​

Updated on: Nov 12, 2021 | 9:44 PM

ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗುವ ಸಾಧ್ಯತೆಯಿದೆ. ಇದನ್ನು ರೂಲೌಟ್ ಮಾಡೋಕೆ ಆಗಲ್ಲ. ಹೀಗಾಗಿ ದೇಶದ ರಾಜಕಾರಣ ಹೀಗೇ ಎಂದು ಹೇಳಲಾಗಲ್ಲ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ವ್ಯಾಖ್ಯಾನಿಸಿದ್ದಾರೆ.

ಬಿಜೆಪಿ 306 ಲೋಕ ಸಭಾ ಕ್ಷೇತ್ರ ಗೆದ್ದಿತ್ತು; ಆದರೆ ಮುಂದೆ ಏಕಾಂಗಿಯಾಗಿ ಅಷ್ಟು ಬರೋಲ್ಲ -ದೇವೇಗೌಡ ರಾಜಕೀಯ ಭವಿಷ್ಯ
ಬಿಜೆಪಿ 306 ಲೋಕಸಭಾ ಕ್ಷೇತ್ರ ಗೆದ್ದಿದ್ದರು; ಆದರೆ ಮುಂದೆ ಏಕಾಂಗಿಯಾಗಿ ಅಷ್ಟು ಸೀಟ್ ಬರೋದಿಲ್ಲ-ಮಾಜಿ ಪ್ರಧಾನಿ ದೇವೇಗೌಡ ರಾಜಕೀಯ ಭವಿಷ್ಯ
Follow us on

ಹಾಸನ: ದೇಶದ ರಾಜಕಾರಣದಲ್ಲಿ ಮುಂದಿನ ಲೋಕಸಭಾ ಚುನಾವಣಾ ವೇಳೆಗೆ ಸಾಕಷ್ಟು ಮಾರ್ಪಾಡು ಆಗುತ್ತೆ. ಬಿಜೆಪಿಗೂ ಅಷ್ಟ ಸುಲಭ ಇಲ್ಲ. ಬಿಜೆಪಿ ಏಕಾಂಗಿಯಾಗಿ 306 ಲೋಕಸಭಾ ಕ್ಷೇತ್ರ ಗೆದ್ದಿದ್ದರು. ಆದರೆ ಮುಂದೆ ಬಿಜೆಪಿಗೆ ಅಷ್ಟು ಸೀಟ್ ಬರೋದಿಲ್ಲ. ಬೇರೆ ಯಾರನ್ನಾದ್ರು ಜೊತೆಗೆ ಸೇರಿಸಿಕೊಂಡು ಸರ್ಕಾದ ಮಾಡೋಕೆ ಟ್ರೈ ಮಾಡಬಹುದು ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಹೇಳಿದ್ದಾರೆ. ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗುವ ಸಾಧ್ಯತೆಯಿದೆ. ಇದನ್ನು ರೂಲೌಟ್ ಮಾಡೋಕೆ ಆಗಲ್ಲ. ಹೀಗಾಗಿ ದೇಶದ ರಾಜಕಾರಣ ಹೀಗೇ ಎಂದು ಹೇಳಲಾಗಲ್ಲ ಎಂದೂ ದೇವೇಗೌಡ ವ್ಯಾಖ್ಯಾನಿಸಿದ್ದಾರೆ.

ಹಿಂದೆ ಮಮತಾ ಬ್ಯಾನರ್ಜಿಯವರು ಸ್ಟ್ರಾಂಗ್ ಲೀಡರ್ ಆಗಿದ್ದರು. ಆದರೆ ಕಾಂಗ್ರೆಸ್ ಅವರನ್ನು ಲೈಕ್ ಮಾಡಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಿಂದೆಂದೂ ಇಷ್ಟು ಬಹುಮತ ಬಂದಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ನಿಂದಲೂ ತೃಣಮೂಲ ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರು ಪ್ರಧಾನಿ ಆಗೊ ಸಾಧ್ಯತೆ ಇದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಸ್ಟ್ರಾಂಗ್ ಆಗಿದ್ದಾರೆ. ಇಲ್ಲಿ ಕಾಂಗ್ರೆಸ್ ಅಲೈಯನ್ಸ್ ಆ ಸಮಯಕ್ಕೆ ಏನೇನು ಆಗುತ್ತೊ ಹೇಳೋಕೆ ಆಗಲ್ಲ. ನವೀನ್ ಪಟ್ನಾಯಕ್ ಅವರದು ಆಂಟಿ ಕಾಂಗ್ರೆಸ್ ನೀತಿ. ಹಾಗಾಗಿ ದೇಶದ ರಾಜಕಾರಣ ಹೀಗೇ ಇರುತ್ತದೆ ಎಂದು ಹೇಳೋಕೆ ಆಗಲ್ಲ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹೇಳಿದ್ದಾರೆ.

(next time bjp wont cross 300 seats in lok sabha elections all alone predicts hd devegowda)