PC Mody: ರಾಜ್ಯಸಭೆ ಸೆಕ್ರೆಟರಿ ಜನರಲ್ ಆಗಿ ರಾಮಾಚಾರ್ಯುಲು ಸ್ಥಾನಕ್ಕೆ ಪಿಸಿ ಮೋದಿ ನೇಮಕ
ಪಿ.ಸಿ. ಮೋದಿ ರಾಜ್ಯಸಭೆಯ ಹೊಸ ಸೆಕ್ರೆಟರಿ ಜನರಲ್ ಆಗಲಿದ್ದಾರೆ. ನೇಮಕಾತಿ ಪ್ರಾಧಿಕಾರದ ಮುಖ್ಯಸ್ಥರಾಗಿರುವ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಈ ನಿಟ್ಟಿನಲ್ಲಿ ನೇಮಕಾತಿ ಆದೇಶಕ್ಕೆ ಸಹಿ ಮಾಡಿದ್ದಾರೆ
ನವದೆಹಲಿ: ರಾಜ್ಯಸಭೆಯ ಸೆಕ್ರೆಟರಿ ಜನರಲ್ ಹುದ್ದೆಯಲ್ಲಿದ್ದ ಪಿಪಿಕೆ ರಾಮಾಚಾರ್ಯುಲು (PPK Ramaharyalu) ಅವರನ್ನು ಕೇವಲ ಹತ್ತು ವಾರಗಳ ಅವಧಿಯಲ್ಲೇ ಬದಲಾಯಿಸಲಾಗಿದೆ. ರಾಜ್ಯಸಭೆಯ ಹೊಸ ಸೆಕ್ರೆಟರಿ ಜನರಲ್ ಆಗಿ ಪಿ.ಸಿ. ಮೋದಿ ಅವರನ್ನು ನೇಮಿಸಲಾಗಿದೆ. ಪಿ.ಸಿ. ಮೋದಿ (PC Mody) ಅವರು ಐಆರ್ಎಸ್ ಅಧಿಕಾರಿಯಾಗಿದ್ದವರು. ಸಿಬಿಡಿಟಿ ಅಧ್ಯಕ್ಷರಾಗಿದ್ದ ಪಿ.ಸಿ. ಮೋದಿ ಅವರನ್ನು ರಾಜ್ಯಸಭೆಯ ಸೆಕ್ರೆಟರಿ ಜನರಲ್ ಆಗಿ ನೇಮಿಸಿರುವುದು ಅನೇಕರು ಹುಬ್ಬೇರುವಂತೆ ಮಾಡಿದೆ. ಬಹುಶಃ ರಾಜ್ಯಸಭಾ ಸೆಕ್ರೆಟರಿ ಜನರಲ್ ಆಗಿ ಅತ್ಯಂತ ಕಡಿಮೆ ಅವಧಿಯನ್ನು ಅನುಭವಿಸಿದವರೆಂದರೆ ಪಿಪಿಕೆ ರಾಮಾಚಾರ್ಯಲು ಮಾತ್ರ. ಅವರನ್ನು ನೇಮಕ ಮಾಡಿದ ಕೇವಲ 10 ವಾರಗಳ ನಂತರ ಹುದ್ದೆಯಿಂದ ತೆಗೆದುಹಾಕಲಾಗಿದೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (CBDT) ಮಾಜಿ ಅಧ್ಯಕ್ಷ ಪಿ.ಸಿ. ಮೋದಿ ಅವರನ್ನು ಮೇಲ್ಮನೆಯ ಸೆಕ್ರೆಟರಿ ಜನರಲ್ ಆಗಿ ನೇಮಕ ಮಾಡಲಾಗಿದೆ.
ಪಿ.ಸಿ. ಮೋದಿ ನೇಮಕಾತಿಯು ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯೊಬ್ಬರು ರಾಜ್ಯಸಭೆಯ ಸೆಕ್ರೆಟರಿ ಜನರಲ್ ಆಗುವ ಅಪರೂಪದ ಸಂದರ್ಭವನ್ನು ಸೃಷ್ಟಿಸಿದೆ. ಈ ಸ್ಥಾನವನ್ನು ಸಾಂಪ್ರದಾಯಿಕವಾಗಿ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಗಳು ಅಥವಾ ಸಂಸತ್ತಿನ ಹಿರಿಯ ಕಾರ್ಯದರ್ಶಿ ಅಧಿಕಾರಿಗಳಿಗೆ ಕಾಯ್ದಿರಿಸಲಾಗಿತ್ತು. ಉತ್ತರಾಖಂಡ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಉತ್ಪಲ್ ಕುಮಾರ್ ಸಿಂಗ್ ಅವರು ಪ್ರಸ್ತುತ ಲೋಕಸಭೆಯ ಸೆಕ್ರೆಟರಿ ಜನರಲ್ ಆಗಿದ್ದಾರೆ.
ಪಿ.ಸಿ. ಮೋದಿ ಅವರು ರಾಜ್ಯಸಭೆಯ ಹೊಸ ಸೆಕ್ರೆಟರಿ ಜನರಲ್ ಆಗಲಿದ್ದಾರೆ. ನೇಮಕಾತಿ ಪ್ರಾಧಿಕಾರದ ಮುಖ್ಯಸ್ಥರಾಗಿರುವ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಈ ನಿಟ್ಟಿನಲ್ಲಿ ನೇಮಕಾತಿ ಆದೇಶಕ್ಕೆ ಸಹಿ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಸರು ಹೇಳಲಿಚ್ಛಿಸದ ಇಬ್ಬರು ಹಿರಿಯ ನಾಯಕರು ಸಿಬ್ಬಂದಿ ಬದಲಾವಣೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿರುವ ಪಿ.ಸಿ. ಮೋದಿ ಅವರು 1982ರ IRS ಅಧಿಕಾರಿಯಾಗಿದ್ದು, ಆಗಸ್ಟ್ 2019 ರಿಂದ CBDT ಅಧ್ಯಕ್ಷರಾಗಿ ಮೂರು ಸೇವಾವಧಿ ವಿಸ್ತರಣೆಗಳನ್ನು ನೀಡಲಾಗಿತ್ತು. ಸೆಪ್ಟೆಂಬರ್ 1ರಿಂದ ರಾಜ್ಯಸಭೆಯ ಸೆಕ್ರೆಟರಿ ಜನರಲ್ ಆಗಿದ್ದ ರಾಮಾಚಾರ್ಯುಲು ಅವರನ್ನು ರಾಜ್ಯಸಭಾ ಸಭಾಪತಿಗಳ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಸೆಕ್ರೆಟರಿ ಜನರಲ್ ರಾಜ್ಯಸಭೆಯ ಸಚಿವಾಲಯದ ಮುಖ್ಯಸ್ಥರಾಗಿರುತ್ತಾರೆ. ಸದನದ ಕಾರ್ಯ ಕಲಾಪ, ವ್ಯವಹಾರಗಳನ್ನು ನಡೆಸಲು ಸಭಾಪತಿ ಅವರಿಗೆ ಪ್ರಮುಖ ಸಹಾಯಕರೂ ಆಗಿರುತ್ತಾರೆ.
ನಿಯಮಗಳು ಮತ್ತು ಕಾರ್ಯ ವಿಧಾನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವರು ರಾಜ್ಯಸಭಾ ಅಧ್ಯಕ್ಷರ ಕಣ್ಣು ಮತ್ತು ಕಿವಿಗಳಂತೆ ಕಾರ್ಯ ನಿರ್ವಹಿಸುತ್ತಾರೆ. ಈಗ ಕೇವಲ ನೇಮಕವಾದ 10 ವಾರಗಳಲ್ಲಿ ಪಿಪಿಕೆ ರಾಮಾಚಾರ್ಯಲು ಅವರನ್ನು ರಾಜ್ಯಸಭೆಯ ಸೆಕ್ರೆಟರಿ ಜನರಲ್ ಹುದ್ದೆಯಿಂದ ತೆಗೆದು ಹಾಕಿರುವುದು ಚರ್ಚೆಗೆ ಕಾರಣವಾಗಿದೆ. ಪಿ.ಸಿ. ಮೋದಿ ಅವರು ಈ ಹಿಂದೆಯೂ ಸಿಬಿಡಿಟಿ ಅಧ್ಯಕ್ಷರಾಗಿ ಮೂರು ಬಾರಿ ಸೇವಾವಧಿ ವಿಸ್ತರಣೆ ಪಡೆದಿದ್ದರು. ಈಗ ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿ ನಿವೃತ್ತರಾದವರು, ರಾಜ್ಯಸಭೆಯ ಸೆಕ್ರೆಟರಿ ಜನರಲ್ ಆಗಿ ನೇಮಕವಾಗಿರುವುದು ಅನೇಕರು ಹುಬ್ಬೇರುವಂತೆ ಮಾಡಿದೆ. ಉನ್ನತ ಮಟ್ಟದ ಶಿಫಾರಸ್ಸು, ತೀರ್ಮಾನಗಳ ಫಲವಾಗಿಯೇ ಪಿ.ಸಿ. ಮೋದಿ ಈಗ ರಾಜ್ಯಸಭೆಯ ಸೆಕ್ರೆಟರಿ ಜನರಲ್ ಆಗಿ ನೇಮಕವಾಗಿದ್ದಾರೆ ಎಂದು ದೇಶದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: Shri Ramayana Yatra ದೆಹಲಿಯಿಂದ ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲು ಆರಂಭಿಸಿದ ಐಆರ್ಸಿಟಿಸಿ; ದರ, ವೇಳಾಪಟ್ಟಿ ಇಲ್ಲಿವೆ
Gang Rape: ಸಾಮೂಹಿಕ ಅತ್ಯಾಚಾರ ಪ್ರಕರಣ; ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ
Published On - 8:11 pm, Fri, 12 November 21