ಬೆಂಗಳೂರು, ಅ.05: ನಮ್ಮ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್(S.S Mallikarjun) ಅವರು ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಈ ಬಗ್ಗೆ ತಂದೆ ಶಾಮನೂರು ಶಿವಶಂಕರಪ್ಪ (Shamanuru Shivashankarappa) ರನ್ನೇ ಕೇಳಿ, ಅವರ ವೈಯಕ್ತಿಕ ವಿಚಾರ ಏನೂ ಎಂದು ಗೊತ್ತಿಲ್ಲ. ತಂದೆಯವರ ಜೊತೆಗೆ ನಾನು ಮಾತನಾಡಿಲ್ಲ. ಈ ವಿಷಯ ಕುರಿತು ಸಿಎಂ ಹಾಗೂ ತಂದೆ ಶಾಮನೂರು ಶಿವಶಂಕರಪ್ಪ ಅವರೇ ಮಾತಾಡಿಕೊಳ್ಳುತ್ತಾರೆ. ಇದು ಮುಗಿದು ಹೋದ ಅಧ್ಯಾಯ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.
‘ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದಿದ್ದ ಶಾಮನೂರು ಅವರ ಹೇಳಿಕೆಯನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಸಮರ್ಥಿಸಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ‘
ಕಾಂಗ್ರೆಸ್ಗೆ ಲಿಂಗಾಯತರು ವೋಟ್ ಹಾಕಿಲ್ಲ ಎನ್ನುವವನು ಮೂರ್ಖ, ವೀರೇಂದ್ರ ಪಾಟೀಲ್ ಬಳಿಕ ಕಾಂಗ್ರೆಸ್ ಪರ ನಿಂತಿದ್ದಾರೆ. ಈ ಬಾರಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಗೆ ವೋಟ್ ಹಾಕಿದ್ದಾರೆ.
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಯಾರೂ ಕೌಂಟರ್ ಕೊಡೋದು ಬೇಡ. ಅವರಿಗೆ 92 ವಯಸ್ಸಾಗಿದ್ದು, ನಮ್ಮ ಹಿರಿಯರು. ಸಿಎಂ ನಮ್ಮ ಹೊರಗಿನವರಲ್ಲ, ನಮ್ಮದೇ ಕುಟುಂಬ. ನಮ್ಮವರೇ ಹೋಗಿ ಅವರ ಬಳಿ ಮಾತನಾಡಿದರೆ ತಪ್ಪೇನಿದೆ ಅದರಲ್ಲಿ ಎಂದಿದ್ದಾರೆ.
ಇದನ್ನೂ ಓದಿ:ಶಾಮನೂರು ಶಿವಶಂಕರಪ್ಪ ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ಅವರೊಂದಿಗೆ ಚರ್ಚೆ ಮಾಡ್ತೀನಿ: ಡಿಕೆ ಶಿವಕುಮಾರ್
ಒಂದು ಸಮಾಜದಿಂದ ಯಾರೂ ಸಿಎಂ ಹಾಗೂ ಶಾಸಕಾರಾಗುವುದಿಲ್ಲ. ಅಧಿಕಾರಿಗಳು ಅಥವಾ ರಾಜಕಾರಣಿಗಳಿಗೆ ಸಮಸ್ಯೆ ಆಗುತ್ತಿದ್ದರೆ, ಅಂತವರು ನಮ್ಮ ಗಮನಕ್ಕೆ ತರಲಿ. ಅಧಿಕಾರಿಗಳು ನಮ್ಮ ಬಳಿ ಬರಲಿ, ನಾವೇ ಸಿಎಂ ಬಳಿ ಮಾತನಾಡುತ್ತೇವೆ. ನಮ್ಮ ಒಳಗಡೆಯೇ ಇದೆಲ್ಲ ಸರಿಪಡಿಸಿಕೊಳ್ಳುತ್ತೇವೆ. ಎಲ್ಲರ ವಿಚಾರಗಳೂ ಒಂದೇ ತರಹ ಇರಲ್ಲ. ಯಾರಾದ್ರೂ ನಾಲ್ಕು ಜನ ಸಚಿವರನ್ನು ಶಾಮನೂರು ಬಳಿ ಕಳಿಸಿ ಮಾತನಾಡಿದರೆ ತಪ್ಪೇನಿದೆ ಎಂದರು.
ಹೌದು, ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆರೋಪ ಕೇಳಿಬಂದಿದ್ದು, ಈ ಕುರಿತು
ಸಚಿವ ಈಶ್ವರ ಖಂಡ್ರೆ ಅವರು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಲಿದ್ದಾರೆ. ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವ ಈಶ್ವರ ಖಂಡ್ರೆ ಅವರು ಭೇಟಿ ವೇಳೆ ಶಾಮನೂರು ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿ, ಲಿಂಗಾಯತ ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ವಿವರಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ