ನನ್ನನ್ನು ಗೃಹ ಬಂಧನದಲ್ಲಿಡಲಾಗಿದೆ: ಮನೆ ಗೇಟ್​​ಗೆ ಬೀಗ ಹಾಕಿರುವ ಫೋಟೊ ಟ್ವೀಟ್​​ ಮಾಡಿದ ಮೆಹಬೂಬಾ ಮುಫ್ತಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 21, 2022 | 5:01 PM

Mehbooba Mufti ಭಾರತ ಸರ್ಕಾರ ಕಾಶ್ಮೀರಿ ಪಂಡಿತರ ಸಮಸ್ಯೆಯನ್ನು ಕಂಬಳಿಯಡಿಯಲ್ಲಿ ಹುದುಗಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ನಿಷ್ಠುರ ನೀತಿಗಳಿಂದಾಗಿಯೇ ಪಲಾಯನ ಮಾಡಲು ಬಯಸದ ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿರುವುದು

ನನ್ನನ್ನು ಗೃಹ ಬಂಧನದಲ್ಲಿಡಲಾಗಿದೆ: ಮನೆ ಗೇಟ್​​ಗೆ ಬೀಗ ಹಾಕಿರುವ ಫೋಟೊ ಟ್ವೀಟ್​​ ಮಾಡಿದ ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
Follow us on

ಶ್ರೀನಗರ: ಇತ್ತೀಚೆಗೆ ಶೋಪಿಯಾನ್​​ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕಾಶ್ಮೀರಿ ಪಂಡಿತ್ (Kashmiri Pandit) ಸುನಿಲ್ ಕುಮಾರ್ ಭಟ್​​ನ ಕುಟುಂಬವನ್ನು ಭೇಟಿ ಮಾಡಲು ಹೋಗುವುದನ್ನು ತಡೆಯುವುದಕ್ಕಾಗಿ ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಪಿಡಿಪಿ (PDP)ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti) ಭಾನುವಾರ ಹೇಳಿದ್ದಾರೆ. ಗುರ್ಪಾಕರ್ ಪ್ರದೇಶದಲ್ಲಿರುವ ತನ್ನ ಮನೆಯ ಗೇಟ್​​ಗೆ ಬೀಗ ಹಾಕಿರುವುದನ್ನು ಮತ್ತು ಮನೆಯ ಹೊರಗೆ ಸಿಆರ್​​ಪಿಎಫ್ ವಾಹನ ನಿಲ್ಲಿಸಿರುವ ಫೋಟೊವನ್ನು ಮುಫ್ತಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಿಷ್ಠುರ ನೀತಿಗಳಿಂದಾಗಿ ಕಾಶ್ಮೀರ ಪಂಡಿತರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಭಾರತ ಸರ್ಕಾರ ಕಾಶ್ಮೀರಿ ಪಂಡಿತರ ಸಮಸ್ಯೆಯನ್ನು ಕಂಬಳಿಯಡಿಯಲ್ಲಿ ಹುದುಗಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ನಿಷ್ಠುರ ನೀತಿಗಳಿಂದಾಗಿಯೇ ಪಲಾಯನ ಮಾಡಲು ಬಯಸದ ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿರುವುದು. ನಾವು ಅವರ ಶತ್ರುಗಳು ಎಂದು ಮುಖ್ಯಧಾರೆಯಲ್ಲಿ ಬಿಂಬಿಸುವುದಕ್ಕಾಗಿಯೇ ನನ್ನನ್ನು ಇಂದು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಮುಫ್ತಿ ಹೇಳಿದ್ದಾರೆ.


ಚೋಟಿಗಾಮ್​​ನಲ್ಲಿರುವ ಭಟ್ ಕುಟುಂಬವನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ, ಆದರೆ ಆಡಳಿತ ನನ್ನನ್ನು ತಡೆದಿದೆ. ನಮ್ಮ ಸುರಕ್ಷತೆಗಾಗಿ ನನ್ನನ್ನು ಲಾಕ್ ಮಾಡಲಾಗಿದೆ ಎಂದು ಅವರು ಹೇಳುತ್ತಾರೆ. ಆದರೆ ಅವರು ಕಣಿವೆಯ ಮೂಲೆ ಮೂಲೆಗೂ ಭೇಟಿ ನೀಡುತ್ತಿದ್ದಾರೆ ಎಂದಿದ್ದಾರೆ ಮುಫ್ತಿ.

Published On - 5:00 pm, Sun, 21 August 22