AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾಗಲೇ ಸಿಎಂ ಬೊಮ್ಮಾಯಿಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮಾ. 12ರಂದು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗಿರುವಾಗಲೇ ಇಂದು ದಿಢೀರ ಆಗಿ ಸಿಎಂ ಬಸವರಾಜ ಬೊಮ್ಮಾಯಿ‌ಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ದಾರೆ.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾಗಲೇ ಸಿಎಂ ಬೊಮ್ಮಾಯಿಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ
ಗಂಗಾಧರ​ ಬ. ಸಾಬೋಜಿ
|

Updated on: Mar 10, 2023 | 8:57 PM

Share

ಗದಗ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾ. 12ರಂದು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗಿರುವಾಗಲೇ ಇಂದು ದಿಢೀರ ಆಗಿ ಸಿಎಂ ಬಸವರಾಜ ಬೊಮ್ಮಾಯಿ‌ಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ದಾರೆ. ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆಯುತ್ತಿದ್ದ BJP ವಿಜಯ ಸಂಕಲ್ಪ ಯಾತ್ರೆಯ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದಾಗ ಸಿಎಂಗೆ ಕರೆ ಮಾಡಿದ್ದಾರೆ. ಪ್ರಧಾನಿ ಜೊತೆ ಸಿಎಂ ಮಾತನಾಡುತ್ತಿದ್ದಾರೆ ಸುಮ್ಮನಿರಿ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರಿಗೆ ಸಚಿವ ಸಿ.ಸಿ.ಪಾಟೀಲ್‌ ಮನವಿ ಮಾಡಿದರು. ಕೆಲವು ನಿಮಿಷ ಪ್ರಧಾನಿ ಮೋದಿ ಜೊತೆ ಫೋನ್‌ನಲ್ಲಿ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದ್ದು, ಯಾವ ವಿಷಯ ಕುರಿತಾಗಿ ಚರ್ಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಆದರೆ ಪ್ರಧಾನಿ ಮೋದಿ ದೂರವಾಣಿ ಕರೆ ಕುತೂಲಹ ಮೂಡಿಸಿದೆ.

ಬಡವರಲ್ಲಿ ಹೃದಯ ಶ್ರೀಮಂತಿಕೆ ಜಾಸ್ತಿ: ಸಿಎಂ ಬೊಮ್ಮಾಯಿ‌ 

ಸಿಎಂ ಬೊಮ್ಮಾಯಿ‌ ಮಾತನಾಡಿ, ಜಮೀನಿನಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿಗೆ ಒಂದು ಸಾವಿರ ನೀಡುವ ಯೋಜನೆ ಜಾರಿ ಮಾಡಲಾಗಿದೆ. 180 ಕೋಟಿ ರೈತರಿಗಾಗಿ ಮೀಸಲಿಡಲಾಗಿದೆ. ಓರ್ವ ಎಸ್ಸಿ 18 ವರ್ಷದ ವಿದ್ಯಾರ್ಥಿ ನನಗೆ ಹೇಳಿದಳು. ನಾನು ಎಸ್ಸಿಯಲ್ಲಿ ಲಾಭ ಪಡಿಯುತ್ತಿದ್ದೇನೆ. ವಿದ್ಯಾನಿಧಿ ನನಗೆ ಬೇಡ ಎಂದಳು. ಬಡವರಲ್ಲಿ ಹೃದಯ ಶ್ರೀಮಂತಿಕೆ ಜಾಸ್ತಿ ಇದೆ ಎಂದು ಹೇಳಿದರು.

ಇದನ್ನೂ ಓದಿ: Kalghatgi Thottilu: ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಸಿದ್ಧವಾಯಿತು ಜಗತ್ಪ್ರಸಿದ್ಧ ಕಲಘಟಗಿ ತೊಟ್ಟಿಲು

ಕಾಂಗ್ರೆಸ್​ಗೆ ಟಾಂಗ್​​ ಕೊಟ್ಟ ಸಿಎಂ ಬೊಮ್ಮಾಯಿ 

ಕಳಸಾ ಬಂಡೂರಿ ಯೋಜನೆಗಾಗಿ ನಾನೂ ಹೋರಾಟ ಮಾಡಿದ್ದೇನೆ. ಅಂದು ನಾವು ಹೋರಾಟ ಮಾಡಿದಕ್ಕೆ ಅಂದಿನ ಸರ್ಕಾರ ನಡುಗಿ ಹೋಯಿತು. ಅಂದು ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಹನಿ ನೀರು ಬಿಡುವುದಿಲ್ಲಾ ಅಂತಾ ಹೇಳಿದ್ದರು. ಅದು ಕಾಂಗ್ರೆಸ್ ಪಕ್ಷದ ನಿಲುವು ಎಂದು ಟಾಂಗ್ ನೀಡಿದರು. ಕಾಂಗ್ರೆಸ್ ಸರ್ಕಾರ ನರಗುಂದ ಹಾಗೂ ನವಲಗುಂದದಲ್ಲಿ ಮಹಿಳೆಯರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು. ದನಕ್ಕೆ ಹೊಡೆಯು ಹಾಗೇ ಹೊಡೆದರು. ರೈತರ ಪರವಾಗಿ ಮಾತನಾಡುವ ನೈತಿಕತಿ ಇಲ್ಲಾ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ನಾವು ಮಹದಾಯಿ ನೀರು ಹರಿಯುವವರೆಗೂ ವಿರಮಿಸುವುದಿಲ್ಲ ಎಂದರು.

ಸಿಎಂ ಬೊಮ್ಮಾಯಿ‌ಯನ್ನು ಬಸವಣ್ಣನವರಿಗೆ ಹೋಲಿಕೆ ಮಾಡಿದ ಸವದಿ

ಮಾಜಿ ಲಕ್ಷ್ಮಣ್ ಸವದಿ ಮಾತನಾಡಿ, ನಾನು ಹಾಗೂ ಸಿ.ಸಿ ಪಾಟೀಲ್ 25 ವರ್ಷದ ಸ್ನೇಹಿತರು. ನರಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧ ಮಾಡುವುದು ನಮಗೂ ಕಲಿಸಿಕೊಡು ಎಂದು ಸವದಿ ಹೇಳಿದರು. ಅಷ್ಟೊಂದು ಅಭಿವೃದ್ಧಿಯನ್ನು ಮಾಡಿದ್ದಿಯಾ. 12 ಶತಮಾನದಲ್ಲಿ ಸರ್ವರಿಗೂ ಸಮ ಬಾಳು, ಸಮ ಪಾಲು ಎಂದಿದ್ದರು. ಆದರೆ ಈಗ ನಮ್ಮ ಬಸವರಾಜ ಬೊಮ್ಮಾಯಿ‌ ಅವರು ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಆಡಳಿತ ನೀಡಿದ್ದಾರೆ. ಎಲ್ಲ ವರ್ಗದ ಸಮುದಾಯಗಳ ಜನರಿಗೆ ಅನಕೂಲ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಅವರನ್ನು ಬಸವಣ್ಣನವರಿಗೆ ಹೋಲಿಕೆ ಮಾಡಿದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಅಭಿವೃದ್ಧಿಯ ಪಥಕ್ಕೆ ಕೊಡುಗೆ: ಪ್ರಧಾನಿ ಮೋದಿ

ನರಗುಂದ ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಅನುದಾನ: ಸಿ.ಸಿ.ಪಾಟೀಲ್​  

ಸಚಿವ ಸಿ.ಸಿ.ಪಾಟೀಲ್​ ಮಾತನಾಡಿ, ನರಗುಂದ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಸಿಎಂ ಬಿಎಸ್​ವೈ, ಸಿಎಂ ಬೊಮ್ಮಾಯಿ‌ 2 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ನರಗುಂದ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಆಗಿದೆ. ನರಗುಂದ ಕ್ಷೇತ್ರದಲ್ಲಿ ರಸ್ತೆಗಳು ಹದಗೆಟ್ಟಿವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಧಿವೇಶನದ ವೇಳೆ ಬಾಯಿ ಮುಚ್ಚಿಕೊಂಡು ಇದ್ದರು. ಈಗ ನನ್ನ ಕ್ಷೇತ್ರದಲ್ಲಿ ಬಂದು ಮಾತನಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.