ಪ್ರತಾಪ್ ಸಿಂಹ ಹೇಳಿಕೆಯನ್ನು ವಕೀಲರ ಸಂಘ ಗಂಭೀರವಾಗಿ ಪರಿಗಣಿಸಬೇಕು: ಎಂ.ಲಕ್ಷ್ಮಣ

| Updated By: Rakesh Nayak Manchi

Updated on: Jun 05, 2022 | 4:31 PM

ವಕೀಲ ಗಿರಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ, ಪ್ರತಾಪ್ ಸಿಂಹರಿಂದ ವಕೀಲರಿಗೆ ಅವಮಾನ ಆಗಿದೆ. ವಕೀಲರ ಸಂಘಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಪ್ರತಾಪ್ ಸಿಂಹ ಹೇಳಿಕೆಯನ್ನು ವಕೀಲರ ಸಂಘ ಗಂಭೀರವಾಗಿ ಪರಿಗಣಿಸಬೇಕು: ಎಂ.ಲಕ್ಷ್ಮಣ
ಎಂ.ಲಕ್ಷ್ಮಣ
Follow us on

ಮೈಸೂರು: ವಕೀಲ ಗಿರಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ (Prathap Simha) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ (M.Lakshman), ಸಿದ್ದರಾಮಯ್ಯ (Siddaramaiah) ಬಗ್ಗೆ ಸಂಸದ ಪ್ರತಾಪ್ ಸಿಂಹ ಕೇವಲವಾಗಿ ಮಾತನಾಡಿದ್ದಾರೆ. ವಕೀಲರ ಸಂಘಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಹಾಗೂ ತೆರಿಗೆ ಬಾಕಿ ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಇದಕ್ಕೆ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಪ್ರತಾಪ್ ಸಿಂಹ ಅವರು, ವಕೀಲಗಿರಿ ಮಾಡುತ್ತಿದ್ದ ಸಿದ್ದರಾಮಯ್ಯ ಅವರಿಗೆ ದೇಶದ ಆರ್ಥಿಕತೆ ಬಗ್ಗೆ ಹೇಗೆ ಗೊತ್ತಾಗುತ್ತದೆ? 13 ಬಾರಿ ಬಜೆಟ್ ಮಂಡಿಸಿರುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ ಅವರಿಗೆ ತೆರಿಗೆ ವ್ಯವಸ್ಥೆಯ ಕನಿಷ್ಠ ಜ್ಞಾನ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಸಂಸದರ ಈ ಟೀಕೆಗೆ ಇಂದು ಲಕ್ಷ್ಮಣ ಅವರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ನನಗೊಬ್ಬನಿಗೆ ಅಲ್ಲ ಬಹಳ ಜನರಿಗೆ ಸಿದ್ದರಾಮಯ್ಯ ಬಗ್ಗೆ ಅನುಭವ ಆಗಿದೆ; ಆ ವ್ಯಕ್ತಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ -ಹೆಚ್ಡಿ ಕುಮಾರಸ್ವಾಮಿ

ಸಂಸದ ಪ್ರತಾಪ್ ಸಿಂಹರಿಂದ ವಕೀಲರಿಗೆ ಅವಮಾನ ಆಗಿದೆ. ವಕೀಲರ ಸಂಘಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಡಿಯೂರಪ್ಪ ಅವರು 6 ಬಜೆಟ್ ಮಂಡಿಸಿದ್ದಾರೆ. ಅವರ ಕ್ವಾಲಿಫಿಕೇಶನ್ ಏನು ? ಬಸವರಾಜ ಬೊಮ್ಮಾಯಿ, ಅರುಣ್ ಜೇಟ್ಲಿ, ಯಶವಂತ ಸಿನ್ಹಾ ಏನು ಮಾಡಿದ್ದರು? ಎಂದು ಪ್ರಶ್ನಿಸಿದರ ಲಕ್ಷ್ಮಣ, ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡಲ್ಲಾ ಎಂಬ ಮಾಹಿತಿ ಇದೆ. ಹೀಗಾಗಿ ಸಿದ್ದರಾಮಯ್ಯ ವಿರುದ್ದ ಮಾತನಾಡಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ ಎಂದರು.

ನರೇಂದ್ರ ಮೋದಿ ಅವರು ಮೈಸೂರು ನಗರವನ್ನು ಪ್ಯಾರಿಸ್ ಮಾಡುತ್ತೇವೆ ಅಂದಿದ್ದರು. ಮೈಸೂರು ಸಿಂಗಪೂರ ಮಾಡುತ್ತೇವೆ ಅಂತಾ ಹೇಳಿದ್ದರು. ಆ ರೀತಿ ಹೇಳಿಲ್ಲ ಅಂತಾ ಹೇಳಲು 8 ವರ್ಷ ತೆಗೆದುಕೊಂಡಿದ್ದೀರಾ? ನನ್ನ ಬಳಿ ದಾಖಲೆ ಇದೆ ನಿಮ್ಮ ಕಚೇರಿಗೆ ಬಂದು ನೀಡುತ್ತೇನೆ. ಮೈಸೂರು ಮಡಿಕೇರಿ ರೈಲು ಅಂತಾ ರೈಲು ಬಿಟ್ಟಿದ್ದೀರಿ, ಎಲ್ಲಿದೆ ರೈಲು ? ಸುಳ್ಳೇ ನಿಮ್ಮ ಮನೆ ದೇವರು. ಸುಳ್ಳು ಹೇಳುವುದರಲ್ಲಿ ನೀವು ಎಕ್ಸ್​ಪರ್ಟ್​. ನೀವು ಸುಳ್ಳು ಹೇಳುವುದರಲ್ಲಿ 3 ಪಿಎಚ್‌ಡಿ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದಯವಿಟ್ಟು ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ

ಪ್ರತಾಪ್ ಸಿಂಹ ಅವರೇ ನೀವು ಅಷ್ಟೋಂದು ಪ್ರಾಮಾಣಿಕರಾ ? ವಿಜಯನಗರದಲ್ಲಿ ಐದು ಕೋಟಿ ಖರ್ಚು ಮಾಡಿ ಮನೆ ಕಟ್ಟುತ್ತಿದ್ದಾರೆ ಎಂದು ಜನರು ಹೇಳುತ್ತಾ ಇದ್ದಾರೆ. ನೀವು ಅಷ್ಟೊಂದು ಪ್ರಾಮಾಣಿಕರು ಆಗಿದ್ದರೆ ಸಿಡಿಗೆ ಯಾಕೆ ಸ್ಟೇ ತಂದಿದ್ದೀರಿ? ಬಿಡ್ರಿ ಜನ ನೋಡ್ಲಿ ಸ್ಟೇ ಯಾಕೆ ತಂದ್ರಿ ? ಎಂದು ಪ್ರಶ್ನಿಸಿದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Sun, 5 June 22