ಹಾಸನ: ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ (viral audio) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೂರಕ್ಕೆ ನೂರು ಆ ಆಡಿಯೋ ನಂದಲ್ಲ. ತಿರುಚಿದ ಆಡಿಯೋ ವೈರಲ್ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಆರೋಪಿಸಿದ್ದಾರೆ. ಈ ಕುರಿತಾಗಿ ಟಿವಿ9 ಜೊತೆ ಮಾತನಾಡಿದ ಅವರು, ಆ ಆಡಿಯೋ ನನ್ನದಲ್ಲ, ಕಟ್ ಮಾಡಿ ಪ್ಲಾಂಟ್ ಮಾಡಲಾಗಿದೆ. ಮುಸಲ್ಮಾನರು ನನಗೆ ಹೆಚ್ಚಾಗಿ ಬೆಂಬಲ ನೀಡುತ್ತಿರುವ ಕಾರಣ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋವನ್ನು ನಾನು ಚೆಕ್ ಮಾಡಿದ್ದೇನೆ, ಅದು ನನ್ನ ಆಡಿಯೋ ಅಲ್ಲವೇ ಅಲ್ಲಾ ಎಂದು ಪ್ರೀತಂ ಗೌಡ ಸ್ಪಷ್ಟನೆ ನೀಡಿದ್ದಾರೆ.
ಅಕ್ರಮ ಗೋಮಾಂಸ ಮಾರಾಟ ಕೇಂದ್ರದ ಮೇಲೆ ದಾಳಿ ಮಾಡಿದ್ದ ಪೊಲೀಸರಿಗೆ ವಾಪಸ್ ಬರುವಂತೆ ಫೋನ್ನಲ್ಲಿ ಮಾತನಾಡಿರುವ ರೀತಿಯ ಆಡಿಯೋ ವೈರಲ್ ಆಗಿದೆ. ಹಾಸನದ ಶ್ರೀನಗರ ಬಡಾವಣೆಯಲ್ಲಿ ದಾಳಿ ಮಾಡಿದ್ದ ವೇಳೆ ಪೊಲೀಸ್ ಅಧಿಕಾರಿಗಳ ಜೊತೆ ಶಾಸಕರು ಮಾತನಾಡಿದ್ದಾರೆನ್ನಲಾದ ಆಡಿಯೋ ಇದಾಗಿದ್ದು, ಫೋನ್ ಮಾಡಿ ಶಾಸಕರು ಮಾತನಾಡುತ್ತಾರೆ ಎಂದು ಅಧಿಕಾರಿಗಳಿಗೆ ವ್ಯಕ್ತಿ ಓರ್ವ ಫೋನ್ ಕೊಟ್ಟಿದ್ದಾನೆ. ಅಣ್ಣ ಶ್ರೀನಗರ ಏರಿಯಾದ ಮಟನ್ ಅಂಗಡಿ ಮುಚ್ಚಿಸುವುದಕ್ಕೆ ಅಂತಾ ಸರ್ಕಲ್ ಇನ್ಸ್ಪೆಕ್ಟರ್ ಬಂದಿದಾರೆ ಎಂದು ವ್ಯಕ್ತಿ ಹೇಳುತ್ತಾನೆ. ಆಗ ಯಾರು ಎಂದು ಕೇಳಿರುವ ಶಾಸಕರು, ಹಾಸನ ಟೌನ್ ಸರ್ಕಲ್ ಎಂದು ಹೇಳಿ ಇನ್ಸ್ಪೆಕ್ಟರ್ಗೆ ಫೋನ್ ಕೊಡಲಾಗುತ್ತದೆ.
ಇದನ್ನೂ ಓದಿ: Congress: ಕಾಂಗ್ರೆಸ್ ನಾಯಕರ ಬಗ್ಗೆ ಮುಸ್ಲಿಂ ನಾಯಕರಿಂದ ತೀವ್ರ ಅಸಮಾಧಾನ; ಕಾರಣ ಇಲ್ಲಿದೆ
ಆ ಕಡೆಯಿಂದ ಯಾರು ಎಂದು ಕೇಳಿದಾಗ ಫೋನ್ ತೆಗೆದುಕೊಂಡು ಮಾತನಾಡಿರುವ ಹಾಸನ ನಗರ ಠಾಣೆ ಇನ್ಸ್ಪೆಕ್ಟರ್ ಯೋಗೇಶ್ ಎಂದು ಹೇಳಿದ್ದಾರೆ. ಯೋಗೇಶಣ್ಣ ಚುನಾವಣೆ ಸಂದರ್ಭ ಬನ್ನಿ ನಿಮ್ಮ ದಮ್ಮಯ್ಯ ಎಂದಿರುವ ಶಾಸಕರು. ಅವರು ಕೂಡ ನಮ್ಮ ಅಣ್ಣತಮ್ಮಂದ್ರು ಬಾ ಎಂದು ಶಾಸಕರು ಹೇಳಿದ್ದಾರೆ ಎಂದು ಆಡಿಯೋ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ, ಬ್ಲ್ಯಾಕ್ಮೇಲ್ ನನ್ನ ಹತ್ತಿರ ನಡೆಯಲ್ಲ: ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್
ಬಿಜೆಪಿ ಶಾಸಕರು ಅಕ್ರಮ ಗೋಮಾಂಸ ಮಾರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದು, ಜೊತೆಗೆ ಶಾಸಕರೇ ಇನ್ಸ್ಪೆಕ್ಟರ್ ಯೋಗೇಶ್ ಜೊತೆ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಒಂದು ಸದ್ಯ ವೈರಲ್ ಆಗಿದೆ. ಚುನಾವಣೆ ಸಂದರ್ಭದಲ್ಲಿ ಶಾಸಕ ಪ್ರೀತಂಗೌಡ ಅವರದ್ದ ಎನ್ನಲಾದ ಆಡಿಯೋ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.