ಅಮೃತಸರ: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (CM Amarinder Singh) ನಡುವಿನ ವೈರತ್ವ ಪಂಜಾಬ್ ಕಾಂಗ್ರೆಸ್ ರಾಜಕಾರಣದ (Punjab Politics) ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ತೀವ್ರ ವಿರೋಧದ ನಡುವೆಯೂ ನವಜೋತ್ ಸಿಂಗ್ ಸಿಧುಗೆ ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನ ನೀಡಿರುವ ಹೈಕಮಾಂಡ್ ವಿರುದ್ಧ ಪಂಜಾಬ್ ಸಿಎಂ ಮುನಿಸಿಕೊಂಡಿದ್ದಾರೆ. ಅಮರೀಂದರ್ ಸಿಂಗ್ ಬಳಿ ಸಿಧು ಕ್ಷಮಾಪಣೆ ಕೇಳುವವರೆಗೂ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ನವಜೋತ್ ಸಿಂಗ್ (Navjot Singh Sidhu) ಅವರನ್ನು ಭೇಟಿ ಮಾಡುವುದಿಲ್ಲ ಎಂದು ಅಮರೀಂದರ್ ಸಿಂಗ್ ಬಣದವರು ಘೋಷಿಸಿದ್ದರು. ಇದಕ್ಕೆ ಪ್ರತಿಸವಾಲು ಹಾಕಿರುವ ಸಿಧು ಬಣದವರು ಸಿಎಂ ಅಮರೀಂದರ್ ಸಿಂಗ್ ಬಳಿ ನವಜೋತ್ ಸಿಂಗ್ ಸಿಧು ಕ್ಷಮಾಪಣೆ ಕೇಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಈ ಮೂಲಕ ಪಂಜಾಬ್ ರಾಜ್ಯದ ಕಾಂಗ್ರೆಸ್ ಪಕ್ಷದೊಳಗೆ ಮತ್ತೆ ಅಸಮಾಧಾನ ಹೊಗೆಯಾಡುತ್ತಿದೆ. ನವಜೋತ್ ಸಿಂಗ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಅವರ ಅಸಮಾಧಾನ ಕಡಿಮೆಯಾಗಿ, ಸಿಎಂ ಅಮರೀಂದರ್ ಸಿಂಗ್ ಜೊತೆ ಸೌಹಾರ್ದಯುತ ಸಂಬಂಧ ಏರ್ಪಡಬಹುದು ಎಂಬ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ತಲೆಕೆಳಗಾಗಿದೆ. ನವಜೋತ್ ಸಿಂಗ್ ಪಂಜಾಬ್ನ ಸಿಎಂ ಅಮರೀಂದರ್ ಸಿಂಗ್ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ‘ಆ ಟ್ವೀಟ್ಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳುವವರೆಗೂ ನಾನು ಸಿಧು ಅವರನ್ನು ಭೇಟಿಯಾಗುವುದಿಲ್ಲ’ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಳೆದ ವಾರ ನಡೆದ ಪಕ್ಷದ ಸಭೆಯಲ್ಲಿ ಹೇಳಿದ್ದರು. ಆದರೆ, ಕ್ಷಮಾಪಣೆ ಕೇಳುವ ಮಾತೇ ಇಲ್ಲ ಎಂದು ಸಿಧು ಬಣದವರು ಇಂದು ಖಚಿತಪಡಿಸಿದ್ದಾರೆ.
About 62 MLAs arrive at Punjab Congress President Navjot Singh Sidhu’s residence in Amritsar: Sidhu’s Office pic.twitter.com/G03RiYcNSy
— ANI (@ANI) July 21, 2021
ಇಷ್ಟೇ ಅಲ್ಲದೆ, ಪಂಜಾಬ್ನ ಕಾಂಗ್ರೆಸ್ ಪಕ್ಷದ 77 ಶಾಸಕರನ್ನು ಇಂದು ಅಮೃತಸರದ ಗೋಲ್ಡನ್ ಟೆಂಪಲ್ಗೆ ತನ್ನೊಡನೆ ಬರಲು ಪಂಜಾಬ್ ನೂತನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಕೋರಿದ್ದರು. ಅವರಲ್ಲಿ 62 ಶಾಸಕರು ಇಂದು ಸಿಧು ಜೊತೆ ಅಮೃತಸರಕ್ಕೆ ತೆರಳುವ ಮೂಲಕ ಅಮರೀಂದರ್ ಸಿಂಗ್ಗೆ ಶಾಕ್ ಕೊಟ್ಟಿದ್ದಾರೆ. ಹೀಗಾಗಿ, ಸದ್ಯಕ್ಕಂತೂ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಗೆ ತನ್ನ ಪ್ರಾಬಲ್ಯ ತೋರಿಸಲು ನಿರ್ಧರಿಸಿದ್ದ ಸಿಧು ಪಂಜಾಬ್ನ ಕಾಂಗ್ರೆಸ್ ಪಕ್ಷದ ಎಲ್ಲ 77 ಶಾಸಕರನ್ನೂ ಅಮೃತಸರದ ಗೋಲ್ಡನ್ ಟೆಂಪಲ್ಗೆ ಬರಲು ಸೂಚಿಸಿದ್ದರು. ಆದರೆ, ಅವರಲ್ಲಿ 62 ಶಾಸಕರು ನವಜೋತ್ ಸಿಂಗ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದು, ಉಳಿದ 15 ಶಾಸಕರು ಸಿಎಂ ಅಮರೀಂದರ್ ಸಿಂಗ್ ಬಣದಲ್ಲಿದ್ದಾರೆ. ಈ ಮೂಲಕ ತಮ್ಮ ನಾಯಕತ್ವವನ್ನು ಒಪ್ಪಿಕೊಂಡ ಶಾಸಕರ ಸಂಖ್ಯೆ ಹೆಚ್ಚಾಗಿದೆ ಎಂಬ ಸಂದೇಶವನ್ನು ತಮ್ಮ ಎದುರಾಳಿ ಬಣಕ್ಕೆ ನವಜೋತ್ ಸಿಂಗ್ ಸಿಧು ತಲುಪಿಸಿದ್ದಾರೆ.
Winds of Change – Of the People By the People For the People | Chandigarh to Amritsar | 20 July 2021 pic.twitter.com/CRBQLqMJk2
— Navjot Singh Sidhu (@sherryontopp) July 21, 2021
ಈ ಬಾರಿಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಬೆಂಬಲಿಗರಾದ ವಿಜಯೇಂದರ್ ಸಿಂಗ್ ಸಿಂಗ್ಲಾ, ಮನೀಷ್ ತಿವಾರಿ, ಸಂತೋಷ್ ಚೌಧರಿ, ಡಾ. ರಾಜ್ಕುಮಾರ್ ವರ್ಕ ಅವರನ್ನು ಶಿಫಾರಸು ಮಾಡಿದ್ದರು. ಆದರೆ, ಅವರ್ಯಾರಿಗೂ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನ ನೀಡದಿರುವುದು ಕ್ಯಾಪ್ಟನ್ ಅಸಮಾಧಾನಕ್ಕೆ ಕಾರಣವಾಗಿದೆ.
ತಮ್ಮ ಪರವಾಗಿರುವ 62 ಕಾಂಗ್ರೆಸ್ ಶಾಸಕರೊಂದಿಗೆ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿರುವ ನವಜೋತ್ ಸಿಂಗ್ ಸಿಧು ಫೋಟೋಗಳು ವೈರಲ್ ಆಗಿವೆ. ‘ಆಟ ಶುರುವಾಗಿದೆ. ನವಜೋತ್ ಸಿಂಗ್ ಸಿಧು 62, ಕ್ಯಾಪ್ಟನ್ ಅಮರೀಂದರ್ ಸಿಂಗ್ 15 ರನ್ ಪಡೆದಿದ್ದಾರೆ’ ಎಂದು ಬಿಜೆಪಿ ನಾಯಕ ಆರ್ಪಿ ಸಿಂಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Navjot Singh Sidhu: ಅಮೃತಸರದಲ್ಲಿ 62 ಶಾಸಕರ ಪ್ರಾಬಲ್ಯ ಪ್ರದರ್ಶಿಸಿದ ನೂತನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು
(Punjab Congress Chief Navjot Singh Sidhu camp says he wont apologize to Punjab CM Amarinder Singh)
Published On - 3:39 pm, Wed, 21 July 21