Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಜೋಡೋ ಯಾತ್ರೆ: ಕರ್ನಾಟಕದಲ್ಲಿ ರಾಹುಲ್​ ಗಾಂಧಿ ಫಸ್ಟ್ ಡೇ ಫಸ್ಟ್ ಶೋನಲ್ಲಿ ಒಗ್ಗಟ್ಟಿನ ಜಪ..

ಭಾರತ್ ಜೋಡೋ ಯಾತ್ರೆಯೊಂದಿಗೆ ಕರ್ನಾಟಕಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ ಸ್ವಾಗತ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಟೀಮ್ ಮಧ್ಯೆ ಮತ್ತೆ ಗೊಂದಲ ಉಂಟಾಗಿದೆ. ಅಲ್ಲದೇ ಇಬ್ಬರ ನಡುವೆ ಎಲ್ಲವೂ ಸರಿ ಇ;ಲ್ಲ ಎಂದು ಸಾಬೀತಾಗಿದೆ. ಆದ್ರೆ, ರಾಹುಲ್ ಗಾಂಧಿ ಮಾತ್ರ ಒಗ್ಗಟ್ಟಿನ ಜಪ ಮಾಡಿರುವುದು ವಿಶೇಷ.

ಭಾರತ್ ಜೋಡೋ ಯಾತ್ರೆ: ಕರ್ನಾಟಕದಲ್ಲಿ ರಾಹುಲ್​ ಗಾಂಧಿ ಫಸ್ಟ್ ಡೇ ಫಸ್ಟ್ ಶೋನಲ್ಲಿ ಒಗ್ಗಟ್ಟಿನ ಜಪ..
Siddu DKS
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 30, 2022 | 8:38 PM

ಚಾಮರಾಜನಗರ: ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ (Bharat Jodo Yatra)ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಇಂದು(ಸೆಪ್ಟೆಂಬರ್ 30) ಕರ್ನಾಟಕ ಪ್ರವೇಶಿಸಿದೆ.

ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಐಕ್ಯತಾ ಯಾತ್ರೆಗೆ ಅದ್ಧೂರಿ ಚಾಲನೆ ದೊರೆಯಿತು. ಈ ವೇಳೆ ರಾಹುಲ್ ಗಾಂಧಿ ರಾಜ್ಯಕ್ಕೆ ಎಂಟ್ರಿ ಆಗುತ್ತಿದಂತೆಯೇ ಒಗ್ಗಟ್ಟಿನ ಜಪ ಮಾಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಕರ್ನಾಟಕದಲ್ಲಿ ರಾಹುಕಾಲ ಆರಂಭ: ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ವ್ಯಂಗ್ಯಭರಿತ ಸ್ವಾಗತ!

ಸ್ವಾಗತದಲ್ಲಿ ಗೊಂದಲ

ರಾಹುಲ್ ಗಾಂಧಿ ಅವರನ್ನು ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗಿರುವ ವೇದಿಕೆ ಬಳಿಯೇ ಸ್ವಾಗತಿಸಲು ಡಿಕೆ ಶಿವಕುಮಾರ್‌, ಇತರ ನಾಯಕರು ಕಾದಿದ್ದರು. ಆದರೆ ಸಿದ್ದರಾಮಯ್ಯ ಟೀಂ ರಾಹುಲ್‌ ಗಾಂಧಿ ಅವರನ್ನು ಬಂಡೀಪುರದ ಕಾಡಿನ ಮಧ್ಯೆ ಸ್ವಾಗತಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಮಧ್ಯೆ ಮುಸುಕಿನ ಗುದ್ದಾಟ ಮತ್ತೆ ಬಹಿರಂಗವಾಗಿದೆ.

ಏಕಾಂಗಿಯಾಗಿ ಕರ್ನಾಟಕ ಪ್ರವೇಶ ಮಾಡಿದ್ದ ರಾಹುಲ್‌ ಗಾಂಧಿ ಅವರನ್ನು ಕೆಕ್ಕನಹಳ್ಳ ಚೆಕ್ ಪೋಸ್ಟ್‌ನಲ್ಲಿ ಬರ ಮಾಡಿಕೊಳ್ಳಲು ಯಾರು ತೆರಳಿರಲಿಲ್ಲ. ಚೆಕ್‌ಪೋಸ್ಟ್‌ನಿಂದ ಗುಂಡ್ಲುಪೇಟೆಗೆ ಬರುವಾಗ ಮಾರ್ಗಮಧ್ಯೆ ಸಿದ್ದು ಅಂಡ್ ಟೀಂ ಸ್ವಾಗತ ನೀಡಿದೆ. ಮಾರ್ಗ ಮಧ್ಯೆ ಹೂಗುಚ್ಛ ನೀಡಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಬರಮಾಡಿಕೊಂಡರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ವಾಗತ ಮಾಡುವ ಮೊದಲೇ ಸಿದ್ದರಾಮಯ್ಯ ಸ್ವಾಗತಿಸಿದ್ದು, ಭಾರೀ ಸಂಚಲನ ಮೂಡಿಸಿದೆ.

ಒಗ್ಗಟ್ಟಿನ ತಂತ್ರ ಹೆಣೆದ ರಾಹುಲ್ ಗಾಂಧಿ

ಹೌದು….ಇನ್ನು ಮುಖ್ಯವಾಗಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲೂ ಒಗ್ಗಟ್ಟಿನ ತಂತ್ರ ಹೆಣೆದರು. ಸಿದ್ದು-ಡಿಕೆಶಿ ನಡುವಿನ ಭಿನ್ನಾಭಿಪ್ರಾಯ ರಾಹುಲ್ ಗಾಂಧಿಗೆ ತಿಳಿಯಿತೋ ಏನೋ ಗೊತ್ತಿಲ್ಲ, ಡಿಕೆಶಿ, ಸಿದ್ದು ಮಧ್ಯೆ ನಡೆಯುತ್ತಿರುವ ಗುದ್ದಾಟವನ್ನು ಅರಿತ ರಾಹುಲ್‌ ಗಾಂಧಿ ವೇದಿಕೆಯಲ್ಲೇ ಇಬ್ಬರ ಕೈ ಹಿಡಿದು ನಗಾರಿ ಬಾರಿಸಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೊದಲು ಪ್ರತ್ಯೇಕವಾಗಿ ಡೋಲು ಬಾರಿಸಿದರು. ಬಳಿಕ ರಾಹುಲ್ ತಾವೇ ಸಿದ್ದು, ಡಿಕೆಶಿ ಕೈ ಹಿಡಿದುಕೊಂಡು ಡೋಲು ಬಾರಿಸಿದರು.

ಈ ಹಿಂದೆ ದಾವಣಗೆರೆಯ ಅಮೃತ ಮಹೋತ್ಸವದಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಅಪ್ಪಿಕೊಳ್ಳುವಂತೆ ಹೇಳಿ ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೈಯನ್ನು ಒಟ್ಟಾಗಿ ಹಿಡಿದುಕೊಂಡು ರಾಹುಲ್ ಡೋಲು ಬಾರಿಸಿ ಒಗ್ಗಟ್ಟಿನ ಸಂದೇಶ ನೀಡಿದರು. ಉಭಯ ನಾಯಕರ ಮಧ್ಯೆ ಒಗ್ಗಟ್ಟಿನ ಜಪ ಮಾಡಿಸಿದ್ದಾರೆ.

ಸಂಚಲನ ಮೂಡಿಸಿದ ರಾಹುಲ್ ಟ್ವೀಟ್

ಯೆಸ್…. ವೇದಿಕೆಯಲ್ಲೇ ರಾಹುಲ್‌ ಗಾಂಧಿ ಅವರು ಡಿಕೆಶಿ, ಸಿದ್ದು ಇಬ್ಬರ ಕೈ ಹಿಡಿದು ನಗಾರಿ ಬಾರಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದ್ರು. ಸಾಲದಕ್ಕೆ ರಾಹುಲ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಫೋಟೋ ಹಾಕಿ ಟ್ವೀಟ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಅವರ ಟ್ವೀಟ್ ನಾನಾ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಉಭಯ ನಾಯಕರು ಒಳಜಗಳ ಮರೆತು ಒಟ್ಟಾಗಿ ಸಾಗಬೇಕೆಂದು ಈ ಮೂಲಕ ರಾಹುಲ್ ಗಾಂಧಿ ಆಶಯ ವ್ಯಕ್ತಪಡಿಸಿದ್ದಾರೆ ಅಲ್ಲದೇ ಸಿದ್ದು-ಡಿಕೆಶಿ ಜೋಡೋ ಅಂತಲೂ ಎನ್ನಬಹುದು ಎಂದು ವ್ಯಾಖ್ಯಾನಿಸಲಾಗಿದೆ. ಮೇಲುನೋಟಕ್ಕೆ ದೇಶ ಒಗ್ಗೂಡಿಸುವ ಉದ್ದೇಶದಿಂದ ಈ ಯಾತ್ರೆ ಎನ್ನಲಾಗುತ್ತಿದೆ. ಆದ್ರೆ, 2023ರ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇರುವ ಕರ್ನಾಟಕದಲ್ಲಿ ಕಾಂಗ್ರೆಸ್‌ ಪರ ಅಲೆ ಎಬ್ಬಿಸುವ ಉದ್ದೇಶವಿದೆ. 21 ದಿನಗಳ ಕಾಲ ಯಾತ್ರೆ ಜೊತೆ ಚುನಾವಣೆ ರ್ಯಾಲಿ ಅಂತನೂ ಹೇಳಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ