ಭೂ ಕಬಳಿಕೆ ಪ್ರಕರಣ: ಸಚಿವ ಬೈರತಿ ಬಸವರಾಜ್​ಗೆ​ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ವಿರುದ್ಧ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭೂ ಕಬಳಿಕೆ ಪ್ರಕರಣ: ಸಚಿವ ಬೈರತಿ ಬಸವರಾಜ್​ಗೆ​ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್
ಭೈರತಿ ಬಸವರಾಜ್
TV9kannada Web Team

| Edited By: Ramesh B Jawalagera

Sep 30, 2022 | 3:56 PM

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಆರೋಪ ಪ್ರಕರಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​ಗೆ ಹೈಕೋರ್ಟ್ ಬಿಗ್​ ರಿಲೀಫ್ ನೀಡಿದೆ.

ಬೈರತಿ ಬಸವರಾಜ್​ ವಿರುದ್ಧದ ಕ್ರಿಮಿನಲ್  ಪ್ರಕರಣವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಇಂದು(ಸೆಪ್ಟೆಂಬರ್.30) ಆದೇಶ ಹೊರಡಿಸಿದೆ. ಇದು ಸಿವಿಲ್ ವ್ಯಾಜ್ಯವಾಗಿರುವ ಹಿನ್ನೆಲೆಯಲ್ಲಿ ಮಿನಲ್ ಪ್ರಕರಣ ರದ್ದುಪಡಿಸಿ ನ್ಯಾ.ಸುನೀಲ್ ದತ್ ಯಾದವ್ ಏಕ ಸದಸ್ಯ ಪೀಠ ಆದೇಶಿಸಿದೆ. ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಸಚಿವ ಬೈರತಿ ಬಸವರಾಜ್ ವಿರುದ್ಧ ಮಾದಪ್ಪ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: 18 ವರ್ಷಗಳ ಹಿಂದಿನ ಘಟನೆ ಪ್ರಸ್ತಾಪಿಸಿ ನನ್ನ ಚಾರಿತ್ರ್ಯ ವಧೆ: ಭೈರತಿ ಬಸವರಾಜ್

ಈ ಪ್ರಕರಣವನ್ನು ರದ್ದು ಕೋರಿ ಬೈರತಿ ಬಸವರಾಜ್ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬೈರತಿ ಬಸವರಾಜ್​ ವಿರುದ್ಧದ ಕ್ರಿಮಿನಲ್ ಪ್ರಕರಣ ಪ್ರಕರಣವನ್ನು ರದ್ದು ಮಾಡಿ ಆದೇಶಿಸಿದೆ. ಇದಿರಂದ ಬೈರತಿ ಬಸವರಾಜ್​ ನಿಟ್ಟುಸಿರುವ ಬಿಡುವಂತಾಗಿದೆ.

ರಾಜೀನಾಮೆಗೆ ಆಗ್ರಹಿಸಿದ್ದ ಕಾಂಗ್ರೆಸ್

ಹೌದು…ಈ ಹಿಂದೆ ಸಚಿವ ಭೈರತಿ ಬಸವರಾಜ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಬೆಳಗಾವಿ ಕಲಾಪದಲ್ಲಿ ಕಾಂಗ್ರೆಸ್​ ನಿಲುವಳಿ ಮಂಡಿಸಲು ತೀರ್ಮಾನಿಸಿತ್ತು. ಅಲ್ಲದೇ ಈ ಬಗ್ಗೆ ಚರ್ಚೆ ಮಾಡಲು ಅವಕಾಶ ಕೋರಿತ್ತು, ಆದ್ರೆ, ಸ್ಪೀಕರ್ ಅವಕಾಶ ನೀಡಿರಲಿಲ್ಲ, ಇದರಿಂದ ಕಾಂಗ್ರೆಸ್ ಸದನದಲ್ಲಿ ಭಾರೀ ಸದ್ದು-ಗದ್ದಲ ಮಾಡಿತ್ತು. ಅಲ್ಲದೇ ಕಲಾಪ ಬಹಿಷ್ಕರಿಸಿತ್ತು.

ಬೈರತಿ ಬಸವರಾಜ್‌ ಪರ ನಿಂತಿದ್ದ ಕುಟುಂಬಸ್ಥರು

ಬೈರತಿ ಬಸವರಾಜ್ ಅವರ ರಾಜೀನಾಮೆಗೆ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಿತ್ತು. ಆದ್ರೆ, ಜಮೀನು ಮಾರಾಟ ಮಾಡಿದ್ದ ಅಣ್ಣಯ್ಯಪ್ಪ ಕುಟುಂಬ ಬೈರತಿ ಬಸವರಾಜ್ ಬೆಂಬಲಕ್ಕೆ ನಿಂತಿತ್ತು. 2002-03ರಲ್ಲಿ ಕಲ್ಕೆರೆಯ ಜಮೀನನ್ನು ಬೈರತಿ ಬಸವರಾಜ್ ಅವರಿಗೆ ಮಾರಾಟ ಮಾಡಿದ್ದೇವೆ. ಸಚಿವ ಭೈರತಿ ಬಸವರಾಜ ಅನ್ಯಾಯ ಮಾಡಿಲ್ಲ. ನಮ್ಮ ಕುಟುಂಬವನ್ನ ರಸ್ತೆಗಿಳಿಸುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿದೆ. ನ್ಯಾಯಯುತವಾಗಿ ಹಣಕೊಟ್ಟು ಜಮೀನು‌ ಖರೀದಿ ಮಾಡಿದ್ದಾರೆ ಎಂದು ಅಣ್ಣಯ್ಯಪ್ಪ ಕುಟುಂಬ ಹೇಳಿಕೆ ಕೊಟ್ಟಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada