ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ; ಗೆಹ್ಲೋಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ

ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಗೆಹ್ಲೋಟ್ ಪ್ರಮುಖ ಕಾರಣ. ಶಾಸಕರು ತಮ್ಮ ಸರ್ಕಾರವನ್ನು ಉಳಿಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಇದು ಅವರನ್ನು ಬೆಂಬಲಿಸುವ ಶಾಸಕರನ್ನು ಮುಖ್ಯಮಂತ್ರಿಯಂತೆ ವರ್ತಿಸುವಂತೆ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ ಅರ್ಜುನ್ ರಾಮ್ ಮೇಘವಾಲ್.

ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ; ಗೆಹ್ಲೋಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ
ಅರ್ಜುನ್ ರಾಮ್ ಮೇಘ್ವಾಲ್
Follow us
|

Updated on: Jul 20, 2023 | 4:43 PM

ದೆಹಲಿ ಜುಲೈ 20: ರಾಜಸ್ಥಾನದಲ್ಲಿ (Rajasthan) ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ, ವಿಶೇಷವಾಗಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಬಿಜೆಪಿ ಬುಧವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರನ್ನು ತರಾಟೆಗೆ ತೆಗೆದುಕೊಂಡಿದೆ. ದಲಿತ ನಾಯಕ ಮತ್ತು ರಾಜಸ್ಥಾನದ ಸಂಸದರೂ ಆಗಿರುವ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಕಾ ಗುರ್ಜರ್ ಬುಧವಾ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಚುನಾವಣೆ ಎದುರಿಸುತ್ತಿರುವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗೆಹ್ಲೋಟ್ ಅವರ ತವರು ಜಿಲ್ಲೆಯ ಜೋಧ್‌ಪುರದ ಓಸಿಯಾನ್‌ನಲ್ಲಿ ಇಬ್ಬರು ಮಹಿಳೆಯರು ಮತ್ತು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣ ಸೇರಿದಂತೆ ದಲಿತರು, ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆ ಸೇರಿದಂತೆ ಇತ್ತೀಚಿನ ಹಲವಾರ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

“ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಗೆಹ್ಲೋಟ್ ಪ್ರಮುಖ ಕಾರಣ. ಶಾಸಕರು ತಮ್ಮ ಸರ್ಕಾರವನ್ನು ಉಳಿಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಇದು ಅವರನ್ನು ಬೆಂಬಲಿಸುವ ಶಾಸಕರನ್ನು ಮುಖ್ಯಮಂತ್ರಿಯಂತೆ ವರ್ತಿಸುವಂತೆ ಮಾಡುತ್ತದೆ. ಅವರು ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳನ್ನು ನಿಯಂತ್ರಿಸುತ್ತಾರೆ. ಅವರು ಭ್ರಷ್ಟರು ಎಂದು ಕೇಂದ್ರ ಕಾನೂನು ಸಚಿವರು ಆರೋಪಿಸಿದ್ದಾರೆ.

ಏತನ್ಮಧ್ಯೆ, ಬಿಜೆಪಿಯ ಪ್ರಮುಖ ನಾಯಕರು #NahiSahegaRajasthan ಎಂಬ ಹ್ಯಾಶ್ ಟ್ಯಾಗ್ ಬಳಸಿ ರಾಜಸ್ಥಾನದಲ್ಲಿನ ಪ್ರಕರಣಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇತಿಹಾಸದ ಕಪ್ಪು ಪುಟಗಳಲ್ಲಿ ದಾಖಲಾಗಲಿದೆ ರಾಜಸ್ಥಾನದ ಕಾಂಗ್ರೆಸ್ ದುರಾಡಳಿತ.ಗೆಹ್ಲೋಟ್ ಜಿ ಅವರಿಗೆ ಸ್ವಂತ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಇಡೀ ರಾಜಸ್ಥಾನವನ್ನು ರಕ್ಷಿಸಲು ನೀವೇನು ಮಾಡುತ್ತೀರಿ. ವಿಡಿಯೊ ಸ್ಪರ್ಧೆಗಳಿಂದ ನಿಮ್ಮ ವೈಫಲ್ಯ ಮುಚ್ಚಿಡಲು ಸಾಧ್ಯವಿಲ್ಲ. ನಿಮ್ಮ ಕುಖ್ಯಾತ ಸರ್ಕಾರದ ವೈಫಲ್ಯದ ಅಡ್ಡ ಪರಿಣಾಮವೇ ಈ ಸಾಮೂಹಿಕ ಹತ್ಯೆ.ನಾಲ್ಕೂವರೆ ವರ್ಷಗಳಲ್ಲಿ ರಾಜಸ್ಥಾನವನ್ನು ಕ್ರೈಂ ಸೀನ್ ಮಾಡಿದ್ದೀರಿ. ಈಗ ಇದೆಲ್ಲ ರಾಜಸ್ಥಾನದಲ್ಲಿ ನಡೆಯುವುದಿಲ್ಲ ಎಂದು ರಾಜ್ಯವರ್ಧನ್ ಸಿಂಗ್ ರಾಥೋಡ್ ಟ್ವೀಟ್ ಮಾಡಿದ್ದಾರೆ.

ಒಂದು ಹೊಸ ಬೆಳಗು, ಹೊಸತೊಂದು ಗಾಯ

ಜೋಧ್‌ಪುರದಲ್ಲಿ ಆರು ತಿಂಗಳ ಮುಗ್ಧ ಮಗುವನ್ನು ಸುಟ್ಟು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ಘಟನೆಯಿಂದ ಮನನೊಂದಿದೆ. ಅಷ್ಟಕ್ಕೂ, ಪ್ರತಿದಿನ ರಾಜ್ಯಾದ್ಯಂತ ಬಹಿರಂಗವಾಗಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಗೆಹ್ಲೋಟ್ ಜಿ ಧೃತರಾಷ್ಟ್ರನಂತೆ ಏಕೆ ನಿಂತಿದ್ದಾರೆ? ಸಾರ್ವಜನಿಕರಿಗೆ ಉತ್ತರಿಸಿ ಎಂದು ಅರ್ಜುನ್ ರಾಮ್ ಮೇಘವಾಲ್ ಟ್ವೀಟ್ ಮಾಡಿದ್ದಾರೆ.

ಓಸಿಯಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆರೈ ಚೌಕಿಯ ರಾಮನಗರ ಗ್ರಾಮದಲ್ಲಿ ಇಂದು ಬೆಳಗ್ಗೆ ಪುನರಂ ಜಿ ಬೈರ್ಡ್ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ಅತ್ಯಂತ ಹೃದಯ ವಿದ್ರಾವಕವಾಗಿದೆ ಎಂದು ಪಿಪಿ ಚೌಧರಿ ಹೇಳಿದ್ದಾರೆ.

ಕಾಂಗ್ರೆಸ್‌ನ ದುರಾಡಳಿತ ಒಂದು ಕುಟುಂಬವನ್ನು ಕೊಂದು ಸುಟ್ಟು ಹಾಕಲಾಯಿತು, 6 ತಿಂಗಳ ಹೆಣ್ಣು ಮಗುವನ್ನು ಸಹ ಉಳಿಸಲಾಗಿಲ್ಲ.ಜೋಧ್‌ಪುರದಲ್ಲಿ ನಾಲ್ವರನ್ನು ಕೊಂದು ಸುಟ್ಟು ಹಾಕಿದ ಘಟನೆ ನೋಡಿ ಗಲ್ಲಿಗೇರಿಸುವವರ ಕಣ್ಣುಗಳು ಕೂಡಾ ನೀರು ತುಂಬಿ ಬರುತ್ತದೆ. ಇದನ್ನು ನೋಡಿ ರಾಹುಲ್ ಗಾಂಧಿಯವರೇ ನಿಮಗೆ ಮರುಕಹುಟ್ಟುವುದಿಲ್ಲವೇ ಎಂದು ಲಕ್ಷ್ಮೀಕಾಂತ್ ಭಾರದ್ವಾಜ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Monsoon Session: ರಾಜಸ್ಥಾನ, ಬಂಗಾಳದಲ್ಲಿನ ಘಟನೆಗಳನ್ನು ಪ್ರಸ್ತಾಪಿಸಿ ವಿಪಕ್ಷಗಳಿಗೆ ಕೌಂಟರ್ ನೀಡಲು ಬಿಜೆಪಿ ಸಿದ್ಧತೆ ನಾಚಿಕೆಗೇಡು! ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಕಾಡಿನ ಆಡಳಿತದಲ್ಲಿ ಸಾಮಾನ್ಯ ಮಹಿಳೆಯರನ್ನು ಬಿಡಿ, ಸ್ವಂತ ಪಕ್ಷದ ಶಾಸಕಿಯರೇ ಸುರಕ್ಷಿತವಾಗಿಲ್ಲ ಎಂದು ಪೀಯುಷ್ ಗೋಯಲ್ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ

ಕಾಂಗ್ರೆಸ್ ಶಾಸಕಿ ದಿವ್ಯಾ ಮದರೇಣಾ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿ “ನಾನು ಸುರಕ್ಷಿತವಾಗಿಲ್ಲ” ಎಂದಿದ್ದಾರೆ. ಸ್ವಲ್ಪ ಯೋಚಿಸಿ, ಕಾಂಗ್ರೆಸ್ ಆಡಳಿತದಲ್ಲಿ ಕಾಂಗ್ರೆಸ್ ಶಾಸಕರೇ ಭಯಗೊಂಡರೆ, ಸಾರ್ವಜನಿಕರ ಗತಿಯೇನು? ಎಂದು ರಾಜಸ್ಥಾನ ಬಿಜೆಪಿ ಟ್ವೀಟ್ ಮಾಡಿದೆ.

ಮುಖ್ಯಮಂತ್ರಿಗಳೇ ಕೇಳಿ, ನಿಮ್ಮ ಪಕ್ಷದ ಮಹಿಳಾ ಶಾಸಕರು ರಾಜ್ಯದ ಕಾನೂನು ವ್ಯವಸ್ಥೆ ಬಗ್ಗೆ ಸತ್ಯ ಹೇಳುತ್ತಿದ್ದಾರೆ.ಯಾವ ಆಲೋಚನೆ ಮತ್ತು ಅಧಿಕಾರದಿಂದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದೀರಿ ಎಂಬುದು ಗೊತ್ತಿಲ್ಲವೇ? ರಾಜೀನಾಮೆ ನೀಡಿ. ನೀವು ರಾಜೀನಾಮೆ ನೀಡುವುದು ಅವಶ್ಯಕ.ಕಾನೂನು ವ್ಯವಸ್ಥೆ ಸಮಸ್ಯೆ ಬಗೆಹರಿಸಲು ನಿಮ್ಮ ರಾಜೀನಾಮೆ ಮೊದಲ ಹೆಜ್ಜೆಯಾಗಬೇಕು ಎಂದು ಗಜೇಂದ್ರ ಸಿಂಗ್ ಶೆಖಾವತ್ ಹೇಳಿದ್ದಾರೆ.

ಶಾಸಕಿ ದಿವ್ಯಾ ಮದರೇಣಾ ಅವರ ಆತಂಕ ಅವರಿಗಷ್ಟೇ ಅಲ್ಲ ರಾಜ್ಯಾದ್ಯಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವ್ಯಥೆಯಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಹಬ್ಬಿಸಿದ ಜಂಗಲ್ ರಾಜ್ ಈಗ ದೈತ್ಯ ಸ್ವರೂಪ ಪಡೆದುಕೊಂಡಿದೆ.ಆದರೆ, ಮುಖ್ಯಮಂತ್ರಿಯವರಿಗೆ ರಾಜ್ಯದ ಬಗ್ಗೆ ಕಾಳಜಿಯಿಲ್ಲ ಆದರೆ ಅವರ ಕುರ್ಚಿ ಮತ್ತು ಗಾಂಧಿ ಕುಟುಂಬದ ಬಗ್ಗೆ ಮಾತ್ರ ಕಾಳಜಿ ಇದೆ ಎಂದು ಅರ್ಜುನ್ ರಾಮ್ ಮೇಘವಾಲ್ ಟ್ವೀಟಿಸಿದ್ದಾರೆ.

ಜೋಧ್‌ಪುರದಲ್ಲಿ ಒಂದು ಮಗು ಮತ್ತು ಅವನ ತಾಯಿ, ಅಜ್ಜಿಯರನ್ನು ಕೊಂದು ಸುಟ್ಟು ಹಾಕಲಾಯಿತು.ಅಲ್ಲಿನ ಕಾಂಗ್ರೆಸ್ ಶಾಸಕರ ಬಗ್ಗೆ ಕೇಳಿದಾಗ, ನಾನು ಸುರಕ್ಷಿತವಾಗಿಲ್ಲ, ನನ್ನ ಮೇಲೆ ಮಾತ್ರ ಹಲ್ಲೆಯಾಗುತ್ತದೆ ಎಂದು ಹೇಳಿದರು. ರಾಹುಲ್ ಗಾಂಧಿ ನಿಮಗಿದು ಕೇಳಿಸುತ್ತಿದೆಯೇ ಎಂದು ಲಕ್ಷ್ಮೀಕಾಂತ್ ಭಾರದ್ವಾಜ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ