ರಾಜೀವ್​ ಗಾಂಧಿ ಆರೋಗ್ಯ ವಿವಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ: ಡಾ ರಾಮಕೃಷ್ಣ ರೆಡ್ಡಿ ವಿರುದ್ಧ ತನಿಖೆಗೆ ಆಗ್ರಹ

|

Updated on: Jun 03, 2023 | 9:22 PM

ರಾಜ್ಯದ ರಾಜೀವ್​ ಗಾಂಧಿ ಯೂನಿವರ್ಸಿಟಿ ಆಫ್​ ಹೆಲ್ತ್ ಸೈನ್ಸಸ್​​ ಇದೀಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ವಿಶ್ವವಿದ್ಯಾಲಯದ ಕುಲಸಚಿವರಾಗಿರುವ ಪ್ರೊ.ಡಾ, ರಾಮಕೃಷ್ಣ ರೆಡ್ಡಿ ವಿರುದ್ಧ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗ ಆರೋಪ ಕೇಳಿಬಂದಿದೆ.

ರಾಜೀವ್​ ಗಾಂಧಿ ಆರೋಗ್ಯ ವಿವಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ: ಡಾ ರಾಮಕೃಷ್ಣ ರೆಡ್ಡಿ ವಿರುದ್ಧ ತನಿಖೆಗೆ ಆಗ್ರಹ
ರಾಜೀವ್​ ಗಾಂಧಿ ಯೂನಿವರ್ಸಿಟಿ ಆಫ್​ ಹೆಲ್ತ್ ಸೈನ್ಸಸ್
Follow us on

ಬೆಂಗಳೂರು: ರಾಜ್ಯದ ರಾಜೀವ್​ ಗಾಂಧಿ ಯೂನಿವರ್ಸಿಟಿ ಆಫ್​ ಹೆಲ್ತ್ ಸೈನ್ಸಸ್ (Rajiv Gandhi University)​​ ಇದೀಗ ಮತ್ತೊಮ್ಮೆವಿವಾದಕ್ಕೆ ಗುರಿಯಾಗಿದೆ. ವಿಶ್ವವಿದ್ಯಾಲಯದ ಕುಲಸಚಿವರಾಗಿರುವ ಪ್ರೊ.ಡಾ, ರಾಮಕೃಷ್ಣ ರೆಡ್ಡಿ ವಿರುದ್ಧ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗ ಆರೋಪ ಕೇಳಿಬಂದಿದೆ. ಈ ಬಗ್ಗೆ ದೂರುಗಳು ದಾಖಲಾಗಿದ್ದರೂ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆ ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಏನಿದು ಪ್ರಕರಣ?

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ. ರಾಮಕೃಷ್ಣ ರೆಡ್ಡಿ ಅವರು 2000 ಇಸವಿಯ ಮೇ 15ರಂದು ಬೆಂಗಳೂರು ಮೆಡಿಕಲ್‌ ಕಾಲೇಜ್‌ ಅಂಡ್‌ ರಿಸರ್ಚ್ ಸೆಂಟರ್​ಗೆ ಪ್ರಾಧ್ಯಾಪಕರಾಗಿ ನೇಮಕಗೊಂಡು ಅನಂತರ ಸರ್ಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಪ್ರಸಕ್ತ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್‌ ಸೈನ್ಸಸ್ (RGUHS) ನಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿದದಾರೆ. ಆದರೆ ಇತರೆ ಇಲಾಖೆ/ ಪ್ರಾಧಿಕಾರಗಳಲ್ಲೂ ಹುದ್ದೆಗಳಲ್ಲದೆ, ಹೆಚ್ಚುವರಿ ಹುದ್ದೆ ಹೊಂದಿರುವ ಪ್ರಾಧಿಕಾರಗಳಿಂದ ನಿಯಮಬಾಹಿರವಾಗಿ ವೇತನವನ್ನೂ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಖಚಿತ: ಮಧು ಬಂಗಾರಪ್ಪ

ರಾಮಕೃಷ್ಣ ರೆಡ್ಡಿ ಅವರು ನಡೆಸಿರುವ ಅಕ್ರಮದ ಬಗ್ಗೆ ಸ್ವತಃ ಸರ್ಕಾರದ ಒಂದು ಇಲಾಖೆಯೇ ವರದಿ ನೀಡಿದ್ದರೂ ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿರುವುದಿಲ್ಲ. ತಮ್ಮ ಪುತ್ರನನ್ನು ಪ್ರವೇಶ ಪರೀಕ್ಷೆ ಇಲ್ಲದೆಯೇ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆ ಮಾಡಿರುವ ಹಾಗೂ ಪರೀಕ್ಷೆಯಲ್ಲಿ ಅಕ್ರಮವಾಗಿ ತೇರ್ಗಡೆ ಮಾಡಿಸಿರುವ ಆರೋಪಗಳಿದ್ದರೂ ಈ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: Yuva Nidhi Scheme: ಯುವನಿಧಿ ಯೋಜನೆಗೆ ಮಾನದಂಡ ಪ್ರಕಟಿಸಿದ ರಾಜ್ಯ ಸರ್ಕಾರ: ಯಾರೆಲ್ಲ ಅರ್ಹರು ಗೊತ್ತಾ?

ಹಣ ದುರುಪಯೋಗ ಆರೋಪ

ಪ್ರಭಾವಿ ಹುದ್ದೆಯಲ್ಲಿರುವ ಡಾ. ರಾಮಕೃಷ್ಣ ರೆಡ್ಡಿ ಅವರ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪವೂ ಕೇಳಿಬಂದಿದೆ. ಪ್ಯಾರಾಮೆಡಿಕಲ್ ಬೋರ್ಡ್ ಕುರಿತು Government Audit Department ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಸಂಗತಿ ದೃಢಪಟ್ಟಿದೆ ಎಂದು ಆರೋಪಿಸಲಾಗಿದೆ.

  • ಫಿಕ್ಸೆಡ್ ಡಿಪಾಸಿಟ್ ರಿವಲ್ ಅಕ್ರಮ: 21 ಲಕ್ಷ ರೂ.
  • ಫಿಕ್ಸೆಡ್ ಡಿಪಾಸಿಟ್ ರಿವಲ್ ಅಕ್ರಮ: 41.96 ಕೋಟಿ ರೂ.
  • ಅಕ್ರಮ ನಗದೀಕರಣ: 6.8 ಲಕ್ಷ ರೂ.
  • ಸಿಬ್ಬಂದಿಗೆ ಅಕ್ರಮ ಪಾವತಿ: 69.75 ಲಕ್ಷ ರೂ.
  • ದಾಖಲೆಗಳಿಲ್ಲದೆ ಹಣ ಬಳಕೆ: 1 ಲಕ್ಷ ರೂ.
  • ಪರೀಕ್ಷಾ ಶುಲ್ಕ, ದಂಡ ವಸೂಲಿ ಹಣ: 14.02 ಕೋಟಿ ರೂ.
  • ಕೌನ್ಸೆಲಿಂಗ್​ ಮತ್ತು ಪರೀಕ್ಷೆ ಹೆಸರಲ್ಲಿ ಅಕ್ರಮ ಪಾವತಿ: 3.92 ಲಕ್ಷ ರೂ.
  • ವಿಶೇಷ ಭತ್ಯೆ ಹಾಗೂ ಇತರ ಭತ್ಯೆ: 29.54 ಲಕ್ಷ ರೂ.
  • ಯಾವುದೇ ಬಿಲ್ ಇಲ್ಲದೆ ಪಾವತಿ: 3.53 ಕೋಟಿ ರೂ.

ಇದೀಗ ಸರ್ಕಾರ ಬದಲಾಗಿರುವುದರಿಂದ ಪ್ರೊ.ಡಾ, ರಾಮಕೃಷ್ಣ ರೆಡ್ಡಿ ಅಕ್ರಮಗಳ ವಿರುದ್ಧ ಮತ್ತೊಮ್ಮೆ ದೂರು ಸಲ್ಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:21 pm, Sat, 3 June 23