ಬಿಜೆಪಿ ಅಧ್ಯಕ್ಷ ಬದಲಾವಣೆ ಸುದ್ದಿ: ಸೋಮಣ್ಣ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟ ರಾಜೂಗೌಡ

| Updated By: ರಮೇಶ್ ಬಿ. ಜವಳಗೇರಾ

Updated on: Aug 28, 2023 | 10:19 PM

ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದೆ. ಇದರಿಂದ ಯಾರನ್ನು ಆಯ್ಕೆ ಮಾಡಬೇಕೆಂದು ಬಿಜೆಪಿ ಹೈಕಮಾಂಡ್​ ಗೊಂದಲಕ್ಕೀಡಾಗಿದೆ. ಮುಂಬರುವ ಲೋಕಸಭಾ ಚುನಾವನೆ ಗಮನದಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷ ಆಯ್ಕೆ ಮಾಡುವ ಬಗ್ಗೆ ಹೈಕಾಮಾಂಡ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದರ ಮಧ್ಯೆ ಮತ್ತೋರ್ವ ನಾಯಕ ಅಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿ ಅಧ್ಯಕ್ಷ ಬದಲಾವಣೆ ಸುದ್ದಿ: ಸೋಮಣ್ಣ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟ ರಾಜೂಗೌಡ
ರಾಜೂಗೌಡ
Follow us on

ಯಾದಗಿರಿ, (ಆಗಸ್ಟ್ 28): ಕರ್ನಾಟಕ ಬಿಜೆಪಿಯಲ್ಲಿ(BJP) ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳಾದರೂ ಇದುವರೆಗೂ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಮತ್ತೊಂದೆಡೆ ನಳಿನ್ ಕುಮಾರ್ ಕಟೀಲ್ ಅವರ ಬಿಜೆಪಿ ರಾಜ್ಯಾಧ್ಯಕ್ಷ ಅವಧಿ ಮುಗಿದ್ದಿದ್ದು, ಹೊಸಬರನ್ನು ನೇಮಕ ಮಾಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದ್ದು, ಈಗಾಗಲೇ ಈ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಹಲವರ ಕಣ್ಣು ಬಿದ್ದಿದೆ. ಮಾಜಿ ಸಚಿವ ವಿ ಸೋಮಣ್ಣ ತಮಗೆ ರಾಜ್ಯಾಧ್ಷ ಹುದ್ದೆ ಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದರ ಮಧ್ಯೆ ಇದೀಗ ಮತ್ತೋರ್ವ ಬಿಜೆಪಿ ನಾಯಕ ರಾಜೂಗೌಡ ತಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಯಾದಗಿರಿಯಲ್ಲಿ ಇಂದು (ಆಗಸ್ಟ್ 28) ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ರಾಜ್ಯ ನಾಯಕರ ಮೇಲೆ ಹೈಕಮಾಂಡಗೆ ನಂಬಿಕೆ ಇದೆ ಇಲ್ಲಾ ಅಂತ ಅಲ್ಲ. ಲೇಟ್ ಆದ್ರು ಪರವಾಗಿಲ್ಲ ಲೇಟೆಸ್ಟ್ ಆಗಿ ಮಾಡುತ್ತಾರೆ. ಇನ್ನೇರಡು ತಿಂಗಳಲ್ಲಿ ಆಯ್ಕೆ ಮಾಡಬಹುದು. ನಾನು ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಾನು ರಾಜ್ಯಾಧ್ಯಕ್ಷ ಹುದ್ದೆಗೆ ಯೋಗ್ಯರಲ್ವಾ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮಗೂ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದರು.

ಒಳ್ಳಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಿ ಎಂದು ಹೈಕಮಾಂಡಗೆ ಒತ್ತಾಯ ಮಾಡಿದ್ದೇವೆ. ಆದಷ್ಟು ಬೇಗ ಆದ್ರೆ ಕಾರ್ಯಕರ್ತರಿಗೆ ಹೊಸ ಹುರುಪು ಬರುತ್ತೆ. ಕಾಂಗ್ರೆಸ್ ಹಲವು ಲೋಪದೋಷಗಳಿವೆ. ಹಾಗಾಗಿ ವಿರೋಧ ಪಕ್ಷ ಕನ್ನಡಿ ತರ ಇರಬೇಕು. ಆಡಳಿತಾರೂಢ ಪಕ್ಷದ ತಪ್ಪುಗಳನ್ನ ತಿದ್ದುವ ಕೆಲಸ ಮಾಡಬೇಕು. ಇಲ್ಲ ಅಂದ್ರೆ ಬಹಳ ಕಷ್ಟ ಆಗುತ್ತೆ. ಅವರಿವರು ಹೇಳಿಕೆ ಕೊಡುವುದಕ್ಕಿಂತ ವಿರೋಧ ಪಕ್ಷದ ನಾಯಕನ ಹೇಳಿಕೆ ಸ್ಟ್ರಾಂಗ್ ಆಗಿರುತ್ತೆ‌‌. ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿಲ್ಲ ಅಂದ್ರೆ ನಾವು ಕಾಂಗ್ರೆಸ್ ನವರ ಬಾಯಿಗೆ ಆಹಾರ ಆಗುತ್ತೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಬಳಿ ನಿಂತಿರುವುದಕ್ಕೆ ಪ್ರತಿಕ್ರಿಯಿಸಿದ ರಾಜೂಗೌಡ, ನಮ್ಮ ಅಧ್ಯಕ್ಷರು, ಮಾಜಿ ಡಿಸಿಎಂ ಹಾಗೂ ಮಾಜಿ ಸಚಿವರು ಸಾಮಾನ್ಯ ಕಾರ್ಯಕರ್ತರಂತೆ ನಿಂತು ಸ್ವಾಗತಿಸಿದ್ದಾರೆ. ವಿದೇಶದಿಂದ ಮೋದಿ ಅವರು ನೇರವಾಗಿ ಬಂದು ಅಭಿನಂಧಿಸಿದ್ದಾರೆ. ನಾವು ಕೂಡ ಸಾಮಾನ್ಯ ಕಾರ್ಯಕರ್ತರಂತೆ ನಮಗೇನು ವಿಶೇಷ ಇರುತ್ತಾ‌.? ಎಂದು ಸಮಜಾಯಿಷಿ ನೀಡಿದರು.

ರಮೇಶ್ ಜಾರಕಿಹೊಳಿ ಅವರು ಹೇಗೆ ಕಾಂಗ್ರೆಸ್ ಗೆ ಹೋಗಲು ಸಾಧ್ಯ. ರಮೇಶ್ ಅಣ್ಣ ಕಾಂಗ್ರೆಸ್ ಹೋಗಿ ಏನ್ ಮಾಡುತ್ತಾನೆ. ಡಿಕೆ ಅಣ್ಣ ರಮೇಶ್ ಅಣ್ಣನಿಗೆ ಹೇಗೆ ಕರೆದುಕೊಳ್ಳುತ್ತಾರೆ. ಬಿಜೆಪಿ ರಮೇಶ್ ಅವರಿಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದೆ. ಅವರು ಹೇಳಿದವರಿಗೆ ಟಿಕೆಟ್ ಕೊಟ್ಟಿದೆ ಎಂದು ಹೇಳಿದ ಅವರು ಎಸ್‌ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ಅವರು ಪಕ್ಷ ಬಿಟ್ಟು ಹೋಗಲ್ಲ. ಪಕ್ಷ ಬಿಟ್ಟು ಹೋಗುವವರು ಯಾರು ಹೋಗುತ್ತೇನೆ ಅಂತ ಹೇಳಲ್ಲ. ಪಕ್ಷದಲ್ಲಿ ಕೆಲ ಸಮಸ್ಯೆ ಆಗಿದಂತೂ ನೀಜ ಎಂದು ಒಪ್ಪಿಕೊಂಡರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ