Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನನಷ್ಟ ಪ್ರಕರಣ: ಬಿಹಾರದ ಉಪಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ನ್ಯಾಯಾಲಯ ಸಮನ್ಸ್

ನ್ಯಾಯಾಲಯವು ತೇಜಸ್ವಿ ಯಾದವ್ ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 202 ರ ಅಡಿಯಲ್ಲಿ ವಿಚಾರಣೆ ನಡೆಸಿತು. ಅಹಮದಾಬಾದ್ ಮೂಲದ 69 ವರ್ಷದ ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ ಹರೇಶ್ ಮೆಹ್ತಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಅವರಿಗೆ ಸಮನ್ಸ್ ನೀಡಲು ಸಾಕಷ್ಟು ಆಧಾರಗಳನ್ನು ಕಂಡುಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಮಾನನಷ್ಟ ಪ್ರಕರಣ: ಬಿಹಾರದ ಉಪಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ನ್ಯಾಯಾಲಯ ಸಮನ್ಸ್
ತೇಜಸ್ವಿ ಯಾದವ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 28, 2023 | 7:37 PM

ಅಹಮದಾಬಾದ್‌ ಆಗಸ್ಟ್ 28: ಅಹಮದಾಬಾದ್‌ನ (Ahmedabad) ಮೆಟ್ರೋಪಾಲಿಟನ್ ನ್ಯಾಯಾಲಯವು ಸೋಮವಾರ ಬಿಹಾರದ (Bihar) ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸಮನ್ಸ್ ಜಾರಿ ಮಾಡಿದೆ. ಗುಜರಾತಿಗಳು ವಂಚಕರು ಎಂಬ ಹೇಳಿಕೆಗಾಗಿ ಯಾದವ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸೆಪ್ಟೆಂಬರ್ 22 ರಂದು ರಾಷ್ಟ್ರೀಯ ಜನತಾ ದಳದ (RJD) ನಾಯಕನಿಗೆ ಹಾಜರಾಗುವಂತೆ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ DJ ಪರ್ಮಾರ್ ಸಮನ್ಸ್ ಜಾರಿ ಮಾಡಿದ್ದಾರೆ.

ನ್ಯಾಯಾಲಯವು ಯಾದವ್ ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 202 ರ ಅಡಿಯಲ್ಲಿ ವಿಚಾರಣೆ ನಡೆಸಿತು. ಅಹಮದಾಬಾದ್ ಮೂಲದ 69 ವರ್ಷದ ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ ಹರೇಶ್ ಮೆಹ್ತಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಅವರಿಗೆ ಸಮನ್ಸ್ ನೀಡಲು ಸಾಕಷ್ಟು ಆಧಾರಗಳನ್ನು ಕಂಡುಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಈ ವರ್ಷದ ಮಾರ್ಚ್ 21 ರಂದು ಬಿಹಾರದ ಪಾಟ್ನಾದಲ್ಲಿ ಮಾಧ್ಯಮಗಳ ಮುಂದೆ ಯಾದವ್ ನೀಡಿದ ಹೇಳಿಕೆಯ ಪುರಾವೆಯೊಂದಿಗೆ ಮೆಹ್ತಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈಗಿನ ಪರಿಸ್ಥಿತಿಯಲ್ಲಿ ಗುಜರಾತಿಗಳು ಮಾತ್ರ ಲೂಟಿಕೋರರಾಗಬಹುದು. ಅವರ ವಂಚನೆಯನ್ನು ಕ್ಷಮಿಸಲಾಗುವುದು. ಅವರು ಎಲ್ಐಸಿ ಮತ್ತು ಬ್ಯಾಂಕ್ ಗಳಿಗೆ ಸೇರಿದ ಹಣವನ್ನು ನೀಡಿದ ನಂತರ ಅವರು ಪರಾರಿಯಾದರೆ ಯಾರು ಹೊಣೆ” ಎಂದು ಯಾದವ್ ಕೇಳಿದ್ದರು.

ಮೆಹ್ತಾ ಅವರು ತಮ್ಮ ದೂರಿನಲ್ಲಿ, ತೇಜಸ್ವಿ ಯಾದವ್ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯು ಗುಜರಾತಿಗಳಿಗೆ ಮಾನಹಾನಿ ಮತ್ತು ಅವಮಾನವುಂಟು ಮಾಡುವಂಥದ್ದು ಎಂದಿದ್ದಾರೆ. “ವಂಚಕರು” ಎಂಬ ಪದವು ದುಷ್ಟ, ಮೋಸಗಾರ ಮತ್ತು ಕ್ರಿಮಿನಲ್ ವ್ಯಕ್ತಿಯನ್ನು ಸೂಚಿಸುತ್ತದೆ. ಅಂತಹ ಹೋಲಿಕೆಯು ಗುಜರಾತಿಗಳಲ್ಲದವರು ಗುಜರಾತಿಗಳನ್ನು ಅನುಮಾನದಿಂದ ನೋಡುವಂತೆ ಮಾಡುತ್ತದೆ ಎಂದು ಮೆಹ್ತಾ ತಮ್ಮ ದೂರಿನಲ್ಲಿ ಹೇಳಿದ್ದು , ಯಾದವ್‌ಗೆ ಗರಿಷ್ಠ ಶಿಕ್ಷೆಯನ್ನು ಕೋರಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ, ಸೂರತ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅವರ ‘ಮೋದಿ ಉಪನಾಮ’ ಹೇಳಿಕೆಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು, ಇದು ಅವರನ್ನು ಲೋಕಸಭಾ ಸದಸ್ಯರಾಗಿ ಅನರ್ಹಗೊಳಿಸಲು ಕಾರಣವಾಯಿತು. ಆದರೆ ಸುಪ್ರೀಂಕೋರ್ಟ್‌ ದೋಷಾರೋಪಣೆಗೆ ತಡೆ ನೀಡಿದ್ದರಿಂದದು ಆಗಸ್ಟ್ 4 ರಂದು  ವಯನಾಡ್ ಸಂಸದರಾಗಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಯಿತು.

ಇದನ್ನೂ ಓದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ: ಜಗದೀಶ್ ಶೆಟ್ಟರ್, ಕಾಂಗ್ರೆಸ್ ನಾಯಕ

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಕುರಿತ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾನಿಲಯವು ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷದ ಸಹೋದ್ಯೋಗಿ ಸಂಜಯ್ ಸಿಂಗ್ ಅವರಿಗೆ ಅಹಮದಾಬಾದ್‌ನ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಇಬ್ಬರು ಎಎಪಿ ನಾಯಕರಿಗೆ ಆಗಸ್ಟ್ 31 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್
ಮನೆಯಲ್ಲಿ ಪದೇ ಪದೇ ಕೂದಲು ಬಿದ್ದರೆ ಅಪಶಕುನವೇ
ಮನೆಯಲ್ಲಿ ಪದೇ ಪದೇ ಕೂದಲು ಬಿದ್ದರೆ ಅಪಶಕುನವೇ
Daily Horoscope: ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿದೆ
Daily Horoscope: ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿದೆ
‘ಟಾಕ್ಸಿಕ್’​​ ಬಗ್ಗೆ ಅಪ್ಡೇಟ್ ಕೊಡ್ತೀನಿ ಎಂದ ನಟ ಯಶ್​
‘ಟಾಕ್ಸಿಕ್’​​ ಬಗ್ಗೆ ಅಪ್ಡೇಟ್ ಕೊಡ್ತೀನಿ ಎಂದ ನಟ ಯಶ್​
43ನೇ ವಯಸ್ಸಿನಲ್ಲೂ ಧೋನಿಯ ಮಿಂಚಿನ ಸ್ಟಂಪಿಂಗ್; ಪೆವಿಲಿಯನ್ ಸೇರಿದ ಸೂರ್ಯ
43ನೇ ವಯಸ್ಸಿನಲ್ಲೂ ಧೋನಿಯ ಮಿಂಚಿನ ಸ್ಟಂಪಿಂಗ್; ಪೆವಿಲಿಯನ್ ಸೇರಿದ ಸೂರ್ಯ
ಸೊನ್ನೆ ಸುತ್ತುವುದರಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್ ಶರ್ಮಾ
ಸೊನ್ನೆ ಸುತ್ತುವುದರಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್ ಶರ್ಮಾ