Ayodhya Ram Mandir: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಹೇಗಿದೆ ಭದ್ರತೆ? ದರ್ಶನ ಹೇಗೆ? ಇಲ್ಲಿದೆ ಮಾಹಿತಿ
ಅಯ್ಯೋಧೆ ರಾಮಮಂದಿರ ನಿರ್ಮಾಣ ಅಂತಿಮ ಹಂತದಲ್ಲಿದ್ದು, 2024 ಜನವರಿಯಲ್ಲಿ ಮಂದಿರವನ್ನು ಲೋಕಾರ್ಪಣೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇನ್ನು ಅದರ ಉದ್ಘಾಟನೆ ಯಾವಾಗ? ಹೇಗಿದೆ ಭದ್ರತೆ? ದರ್ಶನ ಹೇಗೆ? ಎಂಬ ಮಾಹಿತಿ ಇಲ್ಲಿದೆ.
ದೆಹಲಿ, ಆ.28: ಅಯ್ಯೋಧೆ ರಾಮಮಂದಿರ (Ayodhya Ram Mandir) ನಿರ್ಮಾಣ ಅಂತಿಮ ಹಂತದಲ್ಲಿದ್ದು, 2024 ಜನವರಿಯಲ್ಲಿ ಮಂದಿರವನ್ನು ಲೋಕಾರ್ಪಣೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇನ್ನು ಸಹಸ್ರ ಕರಸೇವಕರ ಹೋರಾಟದ ಫಲವಾಗಿ ಮತ್ತು ಅದೆಷ್ಟೋ ಜನ ಬಲಿದಾನದಿಂದ ರಾಮಮಂದಿರ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುತ್ತಿದೆ. ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್ನಲ್ಲಿದ್ದ ರಾಮ ಮಂದಿರದ ಪ್ರಕರಣ 2014ರಲ್ಲಿ ಅಂತಿಮ ತೀರ್ಪು ಹೊರಬಿದ್ದ ನಂತರ, ರಾಮಮಂದಿರ ಮರುನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಅಡಿಗಲ್ಲು ಹಾಕಿದ್ದರು. ಇದೀಗ ರಾಮ ಮಂದಿರ ನಿರ್ಮಾಣ ಹಂತ ಅಂತಿಮ ಘಟ್ಟಕ್ಕೆ ಬಂದಿದ್ದು, ಇದರಲ್ಲಿ ಹಲವು ವಿಶೇಷಗಳನ್ನು ಒಳಗೊಂಡಿದೆ.
ಇತ್ತೀಚೆಗೆ ರಾಮಮಂದಿರ ಬಗ್ಗೆ ಮಾಧ್ಯಗಳಿಗೆ ಮಾಹಿತಿ ನೀಡಿದ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, ಈ ವರ್ಷದ ಡಿಸೆಂಬರ್‌ನಲ್ಲಿ ದೇವಾಲಯದ ನೆಲ ಅಂತಸ್ತು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ ರಾಮಲಲ್ಲಾನ್ನು ಪ್ರತಿಷ್ಠಾಪಿಸುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಮುಂದಿನ ವರ್ಷ ಜನವರಿ ಕೊನೆಯ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:2024ರ ಜನವರಿ 1ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಅಮಿತ್ ಶಾ ಮಹತ್ವದ ಘೋಷಣೆ
ರಾಮಮಂದಿರದಲ್ಲಿ ಭದ್ರತೆ ಹೇಗಿರಲಿದೆ?
ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯವು ದೇವಾಲಯದ ಸಂಕೀರ್ಣದ ಭದ್ರತೆಯ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಮಿಶ್ರಾ ತಿಳಿಸಿದ್ದಾರೆ. ಪ್ರದೇಶವನ್ನು ಸುರಕ್ಷಿತವಾಗಿಡಲು ಮಾಹಿತಿ ಮತ್ತು ಗುಪ್ತಚರ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನು ಇಲ್ಲಿ ಕ್ರೌಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಬ್ಲೂಪ್ರಿಂಟ್ (Crowd Management System Blueprint) ತಯಾರಿಸಲಾಗಿದ್ದು, ಇಡೀ ಪ್ರದೇಶಕ್ಕೆ ಸಮಗ್ರ ಭದ್ರತಾ ಯೋಜನೆಯನ್ನು ರೂಪಿಸಲಾಗಿದೆ. 50,000, 1 ಲಕ್ಷ, 5 ಲಕ್ಷ ಮತ್ತು 10 ಲಕ್ಷದಷ್ಟು ಸಂದರ್ಶಕರಿಗೆ ಅವಕಾಶ ಕಲ್ಪಿಸಲು ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ರಾಮಲಲ್ಲಾನ ದರ್ಶನ ಹೇಗೆ?
ರಾಮಲಲ್ಲಾನ ದರ್ಶನದ ಬಗ್ಗೆ ಮಿಶ್ರಾ ಅವರು ಮಾಹಿತಿ ನೀಡಿದ್ದು, ಒಬ್ಬ ಭಕ್ತ 25 ಅಡಿ ದೂರದಿಂದ ದೇವರ ದರ್ಶನ ಪಡೆಯಬಹುದು, ಅದಕ್ಕೆ ಗರಿಷ್ಠ 20 ಸೆಕೆಂಡುಗಳು ಬೇಕಾಗುತ್ತದೆ. ದೇವಾಲಯದ ಆವರಣದೊಳಗೆ ರಾಮನ ದರ್ಶನವನ್ನು ಬಯಸುವ ಸಂದರ್ಶಕರು ಈ ಬಗ್ಗೆ ಅನುಭವವನ್ನು ಪಡೆಯಲು, ಕನಿಷ್ಠ ಒಂದು ಗಂಟೆಯನ್ನು ಮೀಸಲಿಡಲಾಗುವುದು. ಆರಂಭಿಕ ಮಂಟಪದಿಂದ ಒಳಗಿನ ಗರ್ಭಗುಡಿಯವರೆಗಿನ ಪ್ರಯಾಣಕ್ಕೆ ಸರಿಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ