ಬೆಂಗಳೂರು: ಸಾರಿಗೆ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಸಚಿವ ರಾಮಲಿಂಗಾರೆಡ್ಡಿ(ramalinga reddy) ಅವರನ್ನು ಮನವೊಲಿಸುವಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಯಶಸ್ವಿಯಾಗಿದ್ದಾರೆ. ಇನ್ನು ರಾಮಲಿಂಗರೆಡ್ಡಿ ಅವರಿಗೆ ಸಾರಿಗೆ ಜೊತೆ ಮುಜರಾಯಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ವತಃ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದು, ಸಮಾಧಾನ,ಅಸಮಾಧಾನ ಪ್ರಶ್ನೆ ಇಲ್ಲ. ಯಾವ ಖಾತೆ ಕೊಟ್ಟರು ಕೆಲಸ ಮಾಡಬೇಕು. ಸಚಿವ ಸ್ಥಾನ, ಖಾತೆ ಎನ್ನುವುದು ಶಾಶ್ವತ ಅಲ್ಲ. ಮಂತ್ರಿಗಳು ಕೂಡ ಬದಲಾಗುತ್ತಾರೆ. ಖಾತೆ ಕೂಡ ಬದಲಾಗುತ್ತೆ. ಸಚಿವ ಸ್ಥಾನಕ್ಕೆ ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಬೇಕಿದ್ರೆ ಸಿದ್ದರಾಮಯ್ಯರವರನ್ನೇ ಕೇಳಿ. ಈ ಹಿಂದೆ ನಾಲ್ಕು ತಿಂಗಳು ಸಾರಿಗೆ ಇಲಾಖೆಯ ಸಚಿವನಾಗಿದ್ದೆ. ಹಲವು ಪ್ರಶಸ್ತಿ ನಮ್ಮ ಸಂಸ್ಥೆಗೆ ಬಂದಿದ್ದವು ಎಂದು ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ತೀರ್ಮಾನಿಸಲಾಗಿದೆ. ಎಷ್ಟು ಜನ ಪ್ರಯಾಣ ಮಾಡುತ್ತಾರೆ ಎನ್ನುವುದಕ್ಕೆ ಸರ್ಕಾರ ಕೆಆರ್ಟಿಸಿಗೆ ಹಣ ಕೊಡಬೇಕು. ಸೋಮವಾರ ಸಭೆ ಇದ್ದು, ಎಲ್ಲಾ ತೀರ್ಮಾನಿಸಲಾಗುತ್ತೆ/ ವಿರೋಧ ಪಕ್ಷದವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ನಿಂದ ಐದು ಗ್ಯಾರಂಟಿ ಜಾರಿ ಬಗ್ಗೆ ಮಾತನಾಡಿ, ಮಂತ್ರಿಮಂಡಲದಲ್ಲಿ ಏನು ತೀರ್ಮಾನ ಆಗತ್ತೋ ಅದೇ ಫೈನಲ್. ಗೃಹಿಣಿಯರಿಗೆ 2 ಸಾವಿರ ಕೊಡೋದಾಗಿ ಹೇಳಿದ್ದಾರೆ. ಕೆಲವರು ಅಕೌಂಟ್ ಹೊಂದಿದ್ದರೆ. ಇನ್ನೂ ಅಕೌಂಟ್ ಇಲ್ಲದವರಿಗೆ ಅಕೌಂಟ್ ಮಾಡಿಸಬೇಕು. ವಿರೋಧ ಪಕ್ಷದವರಿಗೆ ಹೊಟ್ಟೆ ಉರಿ. ಅದಕ್ಕಾಗಿ ಹೀಗೆ ಮಾಡ್ತಿದ್ದಾರೆ. ಬಿಜೆಪಿ ಅನ್ನೋದು ಬುರುಡೆ ಪಕ್ಷ. 2018 ರಲ್ಲಿ 600 ಆಶ್ವಾಸನೆ ಕೊಟ್ಟಿದ್ದರು. ಆದರೆ ಅದನ್ನ ಈಡೇರಿಸಲು ಸಾಧ್ಯವಾಗಿಲ್ಲ. ವಿರೋಧ ಪಕ್ಷದವರು ಕಷ್ಟ ಪಡೋದು ಬೇಕಿಲ್ಲ. ನಾವು ನಮ್ಮ ಗ್ಯಾರಂಟಿ ಜಾರಿಗೆ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಅಕೌಂಟ್ ಗೆ 15 ಲಕ್ಷ ಹಾಕೋದಾಗಿ ಹೇಳಿದ್ದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಮೊದಲು ಅದನ್ನ ಈಡೇರಿಸಲಿ ಎಂದು ರಾಮಲಿಂಗಾರೆಡ್ಡಿ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Published On - 9:29 am, Mon, 29 May 23