Karnataka Breaking Kannada News Highlights: ಸಾಹಿತಿ, ಬರಹಗಾರರು, ಜನಪರ ಸಂಘಟನೆಗಳಿಗೆ ಸಿದ್ದರಾಮಯ್ಯ ಭರವಸೆ
Breaking News Today Highlights Updates: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಎದ್ದಿದ್ದ ಅಸಮಾಧಾನಕ್ಕೆ ತೆರೆ ಬಿದ್ದಿದ್ದು, ತಡರಾತ್ರಿ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ. ಇದರೊಂದಿಗೆ ಇಂದಿನ ರಾಜಕೀಯ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್ನಲ್ಲಿ...

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಎದ್ದಿದ್ದ ಅಸಮಾಧಾನ ಶಮನವಾಗಿದ್ದು, ತಡರಾತ್ರಿ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಒಟ್ಟು 34 ಮಂದಿ ಸಚಿವರು ಈ ಸಂಪುಟದಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿದ್ದರೇ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಖಾತೆಗಳಿವೆ. ಇನ್ನು ಸಾರಿಗೆ ಖಾತೆನ್ನು ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಹಿರಿಯ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಮುಜರಾಯಿ ಇಲಾಖೆಯನ್ನು ಹೆಚ್ಚುವರಿಯಾಗಿ ಕೊಡುವ ಮೂಲಕ ಅವರನ್ನು ಸಮಾಧಾನಗೊಳಿಸಲಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್
LIVE NEWS & UPDATES
-
Karnataka Breaking Kannada News Live: ಮಕ್ಕಳ ಮನಸ್ಸು ಕಲುಷಿತಗೊಳಿಸುವ ಕೃತ್ಯ ಕ್ಷಮಿಸಲ್ಲ
ಪಠ್ಯ, ಪಾಠಗಳ ಮೂಲಕ ಮಕ್ಕಳ ಮನಸ್ಸು ಕಲುಷಿತಗೊಳಿಸುವ ಕೃತ್ಯ ಕ್ಷಮಿಸಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
-
Karnataka Breaking Kannada News Live: ಸಾಹಿತಿ ಬರಹಗಾರರ ಮನವಿ ಪತ್ರ ಗಂಭೀರವಾಗಿ ಪರಿಗಣಿಸುತ್ತೇನೆ: ಸಿಎಂ
ಸಾಹಿತಿ ಬರಹಗಾರರ ಮನವಿ ಪತ್ರ ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಅಗತ್ಯಕ್ಕೆ ತಕ್ಕಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಾಹಿತಿ, ಬರಹಗಾರರು, ಜನಪರ ಸಂಘಟನೆಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದರು.
-
-
Karnataka Breaking Kannada News Live: ದ್ವೇಷದ ರಾಜಕಾರಣವನ್ನು ಕೊನೆಗಾಣಿಸ್ತೀವಿ: ಸಿಎಂ
ದ್ವೇಷದ ರಾಜಕಾರಣವನ್ನು ಕೊನೆಗಾಣಿಸುತ್ತೇವೆ ಎಂದು ಸಾಹಿತಿ ಬರಹಗಾರರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕಾನೂನು ಕೈಗೆತ್ತಿಕೊಂಡು ಕೋಮು ಪುಂಡಾಟ ನಡೆಸುವವರಿಗೆ ತಕ್ಕ ಕಾನೂನು ಶಾಸ್ತ್ರಿ ಆಗುತ್ತದೆ. ಪೊಲೀಸರ ನೈತಿಕ ಬಲ ಕುಗ್ಗಿಸುವ ಅನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ ಮತ್ತು ಪಾಠಗಳಿಗೆ ಅವಕಾಶ ಕೊಡುವುದಿಲ್ಲ. ಭಯದ ವಾತಾವರಣ ಅಳಿಸಿ ನೆಮ್ಮದಿಯ ವಾತಾವರಣ ಸೃಷ್ಟಿಸಲಾಗುವುದು ಎಂದಿದ್ದಾರೆ.
-
Karnataka Breaking Kannada News Live: ಜೂ.1ರಂದು ಗ್ಯಾರಂಟಿ ಸ್ಕೀಮ್ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ
ಗ್ಯಾರಂಟಿ ಯೋಜನೆಗಳ ಸಂಬಂಧ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚಿ ಮಾಡಿದ್ದು, ಮೇ 31ರಂದು ಸಮಾಲೋಚನೆ ನಡೆಸಲಿದ್ದಾರೆ. ಜೂ. 1ರಂದು ಗ್ಯಾರಂಟಿ ಸ್ಕೀಮ್ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
-
Karnataka Breaking Kannada News Live: 5 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ಭರವಸೆ ಕೊಟ್ಟಿದ್ದೀವಿ
ಐದು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ಭರವಸೆ ಕೊಟ್ಟಿದ್ದೀವಿ ಎಂದು ಬೆಳಗಾವಿಯಲ್ಲಿ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಆ ಭರವಸೆ ಈಡೇರಿಸುವುದು ಬಹಳ ಪ್ರಮುಖವಾದಂತದ್ದು. ಈಗಾಗಲೇ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ಕೊಟ್ಟಿದ್ದು, ಮಾಹಿತಿ ಸಂಗ್ರಹದಲ್ಲಿ ಬಹಳ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಬಸ್ ಸಂಚಾರ ವೇಳೆ ಎಷ್ಟು ಜನ ಮಹಿಳೆಯರಿದ್ದಾರೆ, ನೌಕರರಿದ್ದಾರೆ ಅನ್ನೋದು ನೋಡ್ತಾರೆ. ಅದರ ಜೊತೆ ಹತ್ತು ಕೆಜಿ ಅಕ್ಕಿ, ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡೋದು ಇರಬಹುದು.
-
-
Karnataka Breaking Kannada News Live: ಗ್ಯಾರಂಟಿ ಯೋಜನೆಗಳು ಜಾರಿ ಬಳಿಕ ಜಿಲ್ಲಾ ಪ್ರವಾಸವೆಂದ ಸಿಎಂ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು, ಮೊದಲು ಗ್ಯಾರಂಟಿ ಯೋಜನೆಗಳು ಜಾರಿ ಆಗಬೇಕು. ನಂತರ ಜಿಲ್ಲಾ ಪ್ರವಾಸ ಎಂದು ಹೇಳಿದರು.
-
Karnataka Breaking Kannada News Live: ಡಿಕೆ ಶಿವಕುಮಾರ್ ಭೇಟಿ ಮಾಡಲು ಬಂದ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ
ಡಿಕೆ ಶಿವಕುಮಾರ್ ಭೇಟಿ ಮಾಡಲು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆಎಸ್ ಅಳಗಿರಿ ಬೆಂಗಳೂರಿಗೆ ಆಗಮಿಸಿದ್ದಾರೆ. ನೂತನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಕೆಎಸ್ ಅಳಗಿರಿ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.
-
Karnataka Breaking Kannada News Live: ಯಾವ ಫ್ಲೆಕ್ಸ್ ಇರಬಾರದು, ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಸೂಚನೆ
ಚಿಕ್ಕಬಳ್ಳಾಪುರ ನಗರದಲ್ಲಿ ನನ್ನದು ಯಾವುದು ಫ್ಲೆಕ್ಸ್ ಇರಬಾರದು ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಸಭೆ ಆಯುಕ್ತರಿಗೆ ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ. ನನ್ನ ಫ್ಲೆಕ್ಸ್ ಇರಬಾರದು ಬೇರೆಯವರ ಫ್ಲೆಕ್ಸ್ ಇರಬಾರದು. ನಗರ ಕ್ಲೀನ್ ಆಗಿರಬೇಕು. ಅಧಿಕಾರಿಗಳೇ ಶಾಸಕರ ಫೋಟೋ ಇದೆ ಅಂತ ಭಯ ಬೀಳಬೇಡಿ. ನಾಳೆಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಯಾವ ಫ್ಲೆಕ್ಸ್ ಇರಬಾರದು ಎಂದು ಹೇಳಿದರು.
-
Karnataka Breaking Kannada News Live: ಕನಕಗಿರಿ ಜನತೆಯ ಆಶಿರ್ವಾದದಿಂದ ನಾನು ಸಚಿವನಾಗಿದ್ದೇನೆ
ಕೊಪ್ಪಳ: ಕನಕಗಿರಿ ಜನತೆಯ ಆಶಿರ್ವಾದದಿಂದ ನಾನು ಸಚಿವನಾಗಿದ್ದೇನೆ ಎಂದು ನೂತನ ಸಚಿವ ಶಿವರಾಜ ತಂಗಡಗಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಈ ಭಾರಿ ನನ್ನ ಕ್ಷೇತ್ರದ ಜನ ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
-
Karnataka Breaking Kannada News Live: ಬಿಬಿಎಂಪಿ ಚುನಾವಣೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಭ್ರಷ್ಟಾಚಾರ ರಹಿತ ಕಾರ್ಪೊರೇಷನ್ ಆಗಬೇಕೆಂದು ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದೇನೆ ಎಂದು ಬಿಬಿಎಂಪಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬಿಬಿಎಂಪಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡಿ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ಜನಸ್ನೇಹಿ, ಪಾರದರ್ಶಕವಾಗಿ ಆಡಳಿತ ನಡೆಸಬೇಕೆಂದು ಸೂಚನೆ ನೀಡಲಾಗಿದೆ.
-
Karnataka Breaking Kannada News Live: ಹೆಚ್ ಸಿ ಬಾಲಕೃಷ್ಣ ಹೇಳಿಕೆಗೆ ಮಂಜುನಾಥ್ ತಿರುಗೇಟು
ಈಗಾಗಲೇ ಜನ ತೀರ್ಪು ಕೊಟ್ಟಿದ್ದಾರೆ. ನಾವೇನೂ ಅಭಿವೃದ್ಧಿ ಮಾಡಿದ್ದೇವೆ ಎಂದು ಜನರ ಮುಂದೆ ಇದೆ. ತಾತ್ಕಾಲಿಕವಾಗಿ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಬಾಲಕೃಷ್ಣ ಅವರು ಹತ್ತು ವರ್ಷ ಶಾಸಕರಾಗಿದ್ದಾಗ ಏನು ಕೆಲಸ ಮಾಡಿದ್ದೇ ಎಂಬುದನ್ನು ತಿಳಿಸಿಲ್ಲ. ಬಿಡದಿ ಭಾಗದ ಜನ ಗಿಫ್ಟ್ ಕಾರ್ಡಿಗೆ ಬಲಿಯಾಗಿ ಮತ ನೀಡಿದ್ದಾರೆ. ಗಿಫ್ಟ್ ಕಾರ್ಡ್ ಕೊಟ್ಟು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿಕೆಗೆ ಮಾಜಿ ಶಾಸಕ ಎ ಮಂಜುನಾಥ್ ತಿರುಗೇಟು ನೀಡಿದ್ದಾರೆ.
-
Karnataka Breaking Kannada News Live: ಉಚಿತ ಬಸ್ ಪ್ರಯಾಣಕ್ಕೆ ಮಾನದಂಡ ಹಾಕಲು ಸರ್ಕಾರ ಚಿಂತನೆ
ಬೆಂಗಳೂರು: ಉಚಿತ ಬಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣದ ಮಿತಿಗೆ (ಕಿಲೋ ಮೀಟರ್) ಮಾನದಂಡ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಉಚಿತ ಬಸ್ ಪಾಸ್, ಫಲಾನುಭವಿಗಳ ಪಟ್ಟಿ ನೀಡಿ ಎಂದು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
-
Karnataka Breaking Kannada News Live: ಸಿಎಂ ನಗರದ ಖಾತೆ ನಿಭಾಯಿಸುವ ಟಾಸ್ಕ್ ನೀಡಿದ್ದಾರೆ
ನಾನು ಗ್ರಾಮಾಂತರ ಕ್ಷೇತ್ರದ ರಾಜಕಾರಣಿಯಾದ್ರೂ ಓದಿದ್ದು ನಗರದಲ್ಲೇ. ಹಾಗಾಗಿ ನನಗೆ ಸಿಎಂ ನಗರದ ಖಾತೆ ನಿಭಾಯಿಸುವ ಟಾಸ್ಕ್ ನೀಡಿದ್ದಾರೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ರಾಜ್ಯದಲ್ಲಿ ಶೇಕಡಾ 42ರಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು.
-
Karnataka Breaking Kannada News Live: ಬಿಜೆಪಿ, ಜೆಡಿಎಸ್ ನಾಯಕರು ಸಮಾಧಾನವಾಗಿ ಇರಬೇಕು
ಐದು ಗ್ಯಾರಂಟಿ ಜಾರಿ ಮಾಡಲ್ಲ ಅಂತ ನಾವು ಹೇಳಿಲ್ಲವಲ್ಲ. ಜೂನ್ 1ರಂದು ಜಾರಿ ಮಾಡುವುದಾಗಿ ಹೇಳಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಕಮಿಟ್ ಮೆಂಟ್ ಇದೆ. ಬಿಜೆಪಿ, ಜೆಡಿಎಸ್ ನಾಯಕರು ಸಮಾಧಾನವಾಗಿ ಇರಬೇಕು. ಹುಟ್ಟಿದ ಮಗು ಏಕಾಏಕಿ ಓಡಾಡಲು ಆಗದು. ಕಾಂಗ್ರೆಸ್ ಗ್ಯಾರಂಟಿ ಕೊಟ್ಟಂತೆ ನಡೆದುಕೊಳ್ಳುತ್ತದೆ. ಕಾಂಗ್ರೆಸ್ ಅಂದ್ರೆ ಗ್ಯಾರಂಟಿ, ಬಿಜೆಪಿಯಂತೆ ಭೋಗಸ್ ಅಲ್ಲ ಎಂದರು.
-
Karnataka Breaking Kannada News Live: ಹಾರಿಕೆ ಉತ್ತರ ನೀಡಿದರೆ ಜನರ ಮನಸಿನಲ್ಲಿ ಗೊಂದಲ ಮೂಡುತ್ತದೆ
ಬೆಂಗಳೂರು: ಗ್ಯಾರಂಟಿ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಆಗಬೇಕು ಎಂದು ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಸಂಪನ್ಮೂಲ ಕ್ರೋಡೀಕರಿಸಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನಿರ್ಧಾರಕ್ಕೆ ಬರುವವರೆಗೂ ಸಚಿವರು ವಿಶ್ಲೇಷಣೆ ಮಾಡುವುದು ತಪ್ಪು. ಹಾರಿಕೆ ಉತ್ತರ ನೀಡಿದರೆ ಜನರ ಮನಸಿನಲ್ಲಿ ಗೊಂದಲ ಮೂಡುತ್ತದೆ. ಹಾಗಾಗಿ ಮಂತ್ರಿಗಳು ಮಾತನಾಡಬಾರದು ಎಂದಿದ್ದಾರೆ.
-
Karnataka Breaking News Live: ಗ್ಯಾರಂಟಿ ಜಾರಿ, ಮಂತ್ರಿಗಳು ಹಾರಿಕೆ ಉತ್ತರ ನೀಡಬಾರದು; ಟಿಬಿ ಜಯಚಂದ್ರ
ಬೆಂಗಳೂರು: ಗ್ಯಾರಂಟಿ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಆಗಬೇಕು. ಸಂಪನ್ಮೂಲ ಕ್ರೋಡೀಕರಿಸಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನಿರ್ಧಾರಕ್ಕೆ ಬರುವವರೆಗೂ ಸಚಿವರು ವಿಶ್ಲೇಷಣೆ ಮೂಡುವುದು ತಪ್ಪು. ಹಾರಿಕೆ ಉತ್ತರ ನೀಡಿದರೆ ಜನರ ಮನಸಿನಲ್ಲಿ ಗೊಂದಲ ಮಾಡುತ್ತದೆ. ಹಾಗಾಗಿ ಮಂತ್ರಿಗಳು ಮಾತನಾಡಬಾರದು ಎಂದು ಬೆಂಗಳೂರಿನಲ್ಲಿ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
-
Karnataka Breaking News Live: ಕೇಂದ್ರ ಸರ್ಕಾರದ ಸಾಧನೆಗಳನ್ನ ತಿಳಿಸಿದ ಸಚಿವೆ ಮೀನಾಕ್ಷಿ ಲೇಖಿ
ಬೆಂಗಳೂರು: ಪ್ರಮುಖ ಮೂರು ಉದ್ದೇಶಗಳೊಂದಿಗೆ ರಾಷ್ಟ್ರ ಪ್ರಗತಿ ಕಂಡಿದೆ. ಕಳೆದ 9 ವರ್ಷದಲ್ಲಿ ಅನೇಕ ಬದಲಾವಣೆ ಕಂಡಿದೆ. ಯಾವುದೇ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸಿದ್ದೇವೆ. ಅನೇಕ ಸುಧಾರಣೆ ಕಂಡಿದೆ. ಭಗೀರಥ ಪ್ರಯತ್ನದ ರೀತಿ ಪ್ರಧಾನಿ ಮೋದಿಯವರು ಅಭಿವೃದ್ಧಿಗಾಗಿ ಪ್ರಯತ್ನಿಸಿದ್ದಾರೆ. ಶಕ್ತಿಶಾಲಿಗಿಂತ, ನಿರಂತರ ಪ್ರಯತ್ನದಿಂದ ಅಭಿವೃದ್ಧಿ ಸಾಧ್ಯ. ಮಾತು ಕಡಿಮೆ ಮಾಡಿ, ಕೆಲಸದ ಮೂಲಕ ಅಭಿವೃದ್ಧಿ ಮಾಡಲಾಗಿದೆ. ಈ ಮೂಲಕ ಸಾಮಾಜಿಕ ಅಭಿವೃದ್ಧಿ ಮಾಡಲಾಗಿದೆ. ಅನೇಕ ದೇಶಗಳು ಸತ್ತಂತಿವೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
-
Karnataka Breaking News Live: ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಡಿ ಹೊಗಳಿದ ಬೊಮ್ಮಾಯಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮ ಜನಪರ ಆಡಳಿತ ನೀಡುತ್ತಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದೆ. ದೇಶದಲ್ಲಿ ಶಾಂತಿ ನೆಲೆಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಜಿಎಸ್ಟಿ ಮೂಲಕ ಆದಾಯ ಸಂಗ್ರಹ ಮಾಡಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಕರ್ನಾಟಕ ರಾಜ್ಯಕ್ಕೆ ಮೋದಿ ಸರ್ಕಾರ ಸಾಕಷ್ಟು ಯೋಜನೆ ನೀಡಿದೆ. ನಮ್ಮ ಮೆಟ್ರೋ ಸೇರಿದಂತೆ ಹಲವು ರೈಲು ಯೋಜನೆಗಳಿಗೆ ಅನುದಾನ ನೀಡಿದೆ. ಬೆಂಗಳೂರಿನ ಸಬ್ಅರ್ಬನ್ ರೈಲು ಯೋಜನೆಗೆ ವಿಶೇಷ ಅನುದಾನ ನೀಡಲಾಗಿದೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಗೆ ಅನುದಾನ ನೀಡಲಾಗಿದೆ. ಸಾಗರಮಾಲಾ ಯೋಜನೆ, ಪ್ರವಾಸೋದ್ಯಮ ವೃದ್ಧಿಗೆ ಹಣ ಬಂದಿದೆ ಎಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
-
Karnataka Breaking News Live: ರಾಜ್ಯ ಬಿಜೆಪಿ ನಾಯಕರಿಂದ ಸುದ್ದಿಗೋಷ್ಠಿ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಕೋಟಾ ಶ್ರೀನಿವಾಸ್ ಪೂಜಾರಿ, ಎಂಎಲ್ಸಿ ರವಿಕುಮಾರ್ ಉಪಸ್ಥಿತರಿದ್ದಾರೆ.
-
Karnataka Breaking News Live: ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ, ಊಹಾಪೋಹಗಳಿಗೆ ಕಿವಿಗೊಡಬೇಡಿ
ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಊಹಾಪೋಹಗಳಿಗೆ ಕಿವಿಗೊಡಬೇಡಿ, ಗಾಬರಿಯಾಗಬೇಡಿ ಯಾರು ಬೇಕಾದರೂ ಟೀಕೆ ಮಾಡಲಿ ಅದಕ್ಕೆ ನಾವು ಬೇಡ ಅನ್ನಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಮಾತನಾಡುವವರು ನಮ್ಮನ್ನು ತಿದ್ದಲಿ, ನಾವು ಮಾಡಿ ತೋರಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
-
Karnataka Breaking News Live: ಸಿದ್ದರಾಮಯ್ಯ ಸಂಪುಟದ ಸಚಿವರ ಆಸ್ತಿ ವಿವರ ಬಹಿರಂಗ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ತಡರಾತ್ರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಸಂಪುಟದಲ್ಲಿ ಅತಿ ಶ್ರೀಮಂತ ಸಚಿವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಇವರು 1,413.80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು ಮುಧೋಳ (ಎಸ್‌ಸಿ) ಕ್ಷೇತ್ರದ ತಿಮ್ಮಾಪುರ ರಾಮಪ್ಪ ಬಾಳಪ್ಪ ಅವರು 58.56 ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಬಡ ಸಚಿವ ಎನಿಸಿಕೊಂಡಿದ್ದಾರೆ.
-
Karnataka Breaking News Live: ಗ್ಯಾರಂಟಿ ಯೋಜನೆಗೆಗಳ ಜಾರಿಗೆಗೆ ಸಿದ್ಧತೆ ನಡೆಸಿದ ಸಿಎಂ, ಅಧಿಕಾರಿಗಳ ಜತೆ ಸಭೆ
ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಇಂದು (ಮೇ.28) ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಿದ್ದರಾಮಯ್ಯ 5 ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಆಹಾರ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಗ್ಯಾರಂಟಿಗಳ ಬ್ಲೂಪ್ರಿಂಟ್ ಸಿದ್ಧತೆ ಬಗ್ಗೆ ಚರ್ಚೆಯಾಗಲಿದೆ.
-
Karnataka Breaking News Live: ಸಿದ್ದರಾಮಯ್ಯ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಇಲ್ಲಿದೆ ಪಟ್ಟಿ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಳಗೊಂಡು 34 ಮಂದಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟವಾಗಿದೆ.
ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ
- ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ
- ಡಿಸಿಎಂ ಡಿಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
- ಡಾ. ಜಿ.ಪರಮೇಶ್ವರ್- ಗೃಹ
- ಹೆಚ್ ಕೆ ಪಾಟೀಲ್- ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
- ಕೆ.ಹೆಚ್.ಮುನಿಯಪ್ಪ- ಆಹಾರ & ನಾಗರಿಕ ಸರಬರಾಜು ವ್ಯವಹಾರ
- ರಾಮಲಿಂಗರೆಡ್ಡಿ- ಸಾರಿಗೆ & ಮುಜರಾಯಿ
- ಎಂ.ಬಿ.ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಕೆ.ಜೆ.ಜಾರ್ಜ್- ಇಂಧನ
- ದಿನೇಶ್ ಗುಂಡೂರಾವ್: ಆರೋಗ್ಯ & ಕುಟುಂಬ ಕಲ್ಯಾಣ
- ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ
- ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
- ಕೃಷ್ಣ ಬೈರೇಗೌಡ- ಕಂದಾಯ
- ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್
- ಶಿವಾನಂದ ಪಾಟೀಲ್-ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ
- ಜಮೀರ್ ಅಹಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು
- ಶರಣುಬಸಪ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
- ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ ಖಾತೆ
- ಚಲುವರಾಯಸ್ವಾಮಿ- ಕೃಷಿ
- ಎಸ್.ಎಸ್.ಮಲ್ಲಿಕಾರ್ಜುನ- ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ
- ರಹೀಂ ಖಾನ್: ಪೌರಾಡಳಿತ, ಹಜ್ ಖಾತೆ
- ಸಂತೋಷ ಲಾಡ್- ಕಾರ್ಮಿಕ
- ಡಾ.ಶರಣುಪ್ರಕಾಶ್ ಪಾಟೀಲ್-ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ
- ಆರ್.ಬಿ.ತಿಮ್ಮಾಪುರ- ಅಬಕಾರಿ
- ಕೆ.ವೆಂಕಟೇಶ್- ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
- ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ , ಕನ್ನಡ ಮತ್ತು ಸಂಸ್ಕೃತಿ
- ಡಿ.ಸುಧಾಕರ್: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
- ಬಿ.ನಾಗೇಂದ್ರ: ಯುವಜನ ಸೇವೆ & ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ
- ಕೆ.ಎನ್.ರಾಜಣ್ಣ: ಸಹಕಾರ
- ಬೈರತಿ ಸುರೇಶ್- ನಗರಾಭಿವೃದ್ಧಿ, ಪಟ್ಟಣ ಯೋಜನೆ(ಬೆಂಗಳೂರು ಹೊರತು ಪಡಿಸಿ)
- ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ
- ಮಂಕಾಳ್ ವೈದ್ಯ- ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ
- ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
- ಡಾ.ಎಂ.ಸಿ.ಸುಧಾಕರ್- ಉನ್ನತ ಶಿಕ್ಷಣ
- ಎನ್,ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ & ತಂತ್ರಜ್ಞಾನ
Published On - May 29,2023 10:02 AM