ಭದ್ರತಾ ಲೋಪ: ಪ್ರಧಾನಿ ಹೆಲಿಕಾಪ್ಟರ್‌ ಹಾರಿದ ಕೂಡಲೇ ಗನ್ನಾವರಂನಲ್ಲಿ ಕಪ್ಪು ಬಲೂನ್ ಹಾರಿಸಿದ ಕಾಂಗ್ರೆಸ್

| Updated By: ರಶ್ಮಿ ಕಲ್ಲಕಟ್ಟ

Updated on: Jul 04, 2022 | 5:01 PM

ಆಂಧ್ರ ಪ್ರದೇಶ ಕಾಂಗ್ರೆಸ್ ಸಮನ್ವಯ ಸಮಿತಿ ಸದಸ್ಯ ಸುನ್ಕರ ಪದ್ಮಶ್ರೀ ಅವರು ಗುನ್ನಾವಂರ ವಿಮಾನ ನಿಲ್ದಾಣದಲ್ಲಿ ಗೋಬ್ಯಾಕ್ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಕಪ್ಪು ಬಲೂನ್ ಮತ್ತು ಪ್ಲೆಕಾರ್ಡ್ ಹಿಡಿದು..

ಭದ್ರತಾ ಲೋಪ: ಪ್ರಧಾನಿ ಹೆಲಿಕಾಪ್ಟರ್‌ ಹಾರಿದ ಕೂಡಲೇ ಗನ್ನಾವರಂನಲ್ಲಿ ಕಪ್ಪು ಬಲೂನ್ ಹಾರಿಸಿದ ಕಾಂಗ್ರೆಸ್
ಕಾಂಗ್ರೆಸ್ ಪ್ರತಿಭಟನೆ
Follow us on

ಆಂಧ್ರ ಪ್ರದೇಶ: ಆಂಧ್ರಪ್ರದೇಶದ ಗನ್ನಾವರಂ ವಿಮಾನ ನಿಲ್ದಾಣದ  (Gannavaram airport)ಬಳಿಯಿರುವ ಕೇಸರ್​​ಪಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹೆಲಿಕಾಪ್ಟರ್ ಹಾರುತ್ತಿದ್ದಂತೆ ಕಪ್ಪು ಬಲೂನ್​​ಗಳು  ಹಾರಿವೆ. ಪ್ರಧಾನಿಯವರ ಹೆಲಿಕಾಪ್ಟರ್ ಹತ್ತಿರದಲ್ಲೇ ಬಲೂನ್ ಹಾರಿದ್ದು ಈ ಭದ್ರತಾ ಲೋಪ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ರಾಜ್ಯ ರಚನೆಯಾದಾಗ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಪೂರೈಸಿಲ್ಲ ಎಂದು ಕಾಂಗ್ರೆಸ್ ಪ್ರತಿಭಟನೆ ಆಯೋಜಿಸಿದೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ರತನ್ ಹೇಳಿದ್ದಾರೆ. ಏತನ್ಮಧ್ಯೆ, ಆಂಧ್ರ ಪ್ರದೇಶ ಕಾಂಗ್ರೆಸ್ ಸಮನ್ವಯ ಸಮಿತಿ ಸದಸ್ಯೆ ಸುನ್ಕರ ಪದ್ಮಶ್ರೀ ಅವರು ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಗೋಬ್ಯಾಕ್ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಕಪ್ಪು ಬಲೂನ್ ಮತ್ತು ಪ್ಲೆಕಾರ್ಡ್ ಹಿಡಿದು ಗೋ ಬ್ಯಾಕ್ ಮೋದಿ ಎಂದು ಕೂಗಿದ ಅವರು ಕೇಂದ್ರ ಸರ್ಕಾರ ರಾಜ್ಯ ರಚನೆ ವೇಳೆ ನೀಡಿದ ಭರವಸೆಗಳನ್ನು ಪೂರೈಸಬೇಕು ಎಂದು ಹೇಳಿದ್ದಾರೆ.

ಈ ವೇಳೆ ಪೊಲೀಸರು ಸುನ್ಕರ ಪದ್ಮಶ್ರೀಯನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದು ಆ ಹೊತ್ತಲ್ಲಿ ಅವರು ಕೈಯಲ್ಲಿರುವ ಬಲೂನ್​ನ್ನು ಹಾರಿಸಿದ್ದಾರೆ. ಪ್ರಧಾನಿ ಮೋದಿಯವರ ವಿಮಾನ ಅಥವಾ ಹೆಲಿಕಾಪ್ಟರ್ ಹಾರುವ ಪ್ರದೇಶವನ್ನು ನೋ ಪ್ಲೈ ಜೋನ್ ಎಂದು ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತದೆ. ಎಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೀವ್ ರತನ್ ಮತ್ತು ಕಾಂಗ್ರೆಸ್ ನಾಯಕರು ಕೇಸರ್​​ಪಲ್ಲಿ ಬಳಿ ಕಪ್ಪು ಬಲೂನ್ ಹಾರಿಸಿದ್ದಾರೆ.

Published On - 5:00 pm, Mon, 4 July 22