ರಾಹುಲ್ ಗಾಂಧಿಗಿಂತ ಮೋದಿ ಜನಪ್ರಿಯ ಎಂದ ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ಶೋಕಾಸ್ ನೋಟಿಸ್

|

Updated on: Jan 09, 2024 | 6:53 PM

ಕಾರ್ತಿ ಚಿದಂಬರಂ ಅವರ ಆಪ್ತ ಮೂಲಗಳು ಸಂಸತ್ ಸದಸ್ಯರಿಗೆ ನೋಟಿಸ್ ನೀಡುವ ಅಧಿಕಾರವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಾತ್ರ ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ತಮಿಳುನಾಡು ಕಾಂಗ್ರೆಸ್ ಈ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿರುವುದು ಮೂಲ ಉದ್ದೇಶಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ರಾಹುಲ್ ಗಾಂಧಿಗಿಂತ ಮೋದಿ ಜನಪ್ರಿಯ ಎಂದ ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ಶೋಕಾಸ್ ನೋಟಿಸ್
ಕಾರ್ತಿ ಚಿದಂಬರಂ
Follow us on

ಚೆನ್ನೈ ಜನವರಿ 09: ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಟೀಕೆ ಮಾಡಿರುವ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ, ಹಿರಿಯ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ(Karti Chidambaram )ಅವರಿಗೆ ಪಕ್ಷ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ಮೋದಿ “ರಾಹುಲ್ ಗಾಂಧಿಗಿಂತ ಹೆಚ್ಚು ಜನಪ್ರಿಯ” ಎಂದು ಕಾರ್ತಿ ಚಿದಂಬರಂ ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದೇ ಸಂದರ್ಶನದಲ್ಲಿ, ಅವರು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ನಂಬಿಕೆಯನ್ನು ವ್ಯಕ್ತಪಡಿಸಿದ್ದರು. ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದೊಂದಿಗೆ ಜಗಳವಾಡುತ್ತಿದೆ.

ಇವಿಎಂಗಳ ಬಳಕೆಯನ್ನು ಕಾಂಗ್ರೆಸ್ ಸಕ್ರಿಯವಾಗಿ ವಿರೋಧಿಸುತ್ತಿದೆ, ಅವುಗಳ ವಿಶ್ವಾಸಾರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಮತ್ತೊಮ್ಮೆ ಪತ್ರ ಬರೆದು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಪಕ್ಷದ ನಿಲುವಿಗಿಂತ ಬೇರೆ ಅಭಿಪ್ರಾಯವನ್ನು ಕಾರ್ತಿ ಚಿದಂಬರಂ ಇಲ್ಲಿ ವ್ಯಕ್ತಪಡಿಸಿದ್ದಾರೆ. ಶಿಸ್ತು ಸಮಿತಿಯ ಭಾಗವಾಗಿ ಮಾಜಿ ಶಾಸಕ ಕೆ ಆರ್ ರಾಮಸಾಮಿ ಅವರು ನೋಟಿಸ್ ಜಾರಿ ಮಾಡಿದ್ದು, 10 ದಿನಗಳಲ್ಲಿ ಅವರ ಪ್ರತಿಕ್ರಿಯೆ ನೀಡುವಂತೆ ಹೇಳಿದೆ.

ಕಾರ್ತಿ ಚಿದಂಬರಂ ಅವರ ಆಪ್ತ ಮೂಲಗಳು ಸಂಸತ್ ಸದಸ್ಯರಿಗೆ ನೋಟಿಸ್ ನೀಡುವ ಅಧಿಕಾರವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಾತ್ರ ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ತಮಿಳುನಾಡು ಕಾಂಗ್ರೆಸ್ ಈ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿರುವುದು ಮೂಲ ಉದ್ದೇಶಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಸೀಟು ಹಂಚಿಕೆ ವಿಚಾರ: ಕಾಂಗ್ರೆಸ್-ಆಮ್ ಆದ್ಮಿ ಪಕ್ಷ ಸಭೆ, ಆಪ್ ಬೇಡಿಕೆ ಏನು?

ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥರಾಗಿ ಕಾರ್ತಿ ಚಿದಂಬರಂ ಅವರ ಸಂಭಾವ್ಯ ಉನ್ನತಿಯನ್ನು ತಡೆಯಲು ಶೋಕಾಸ್ ನೋಟಿಸ್ ಕಾರ್ಯತಂತ್ರದ ಗುರಿಯನ್ನು ಹೊಂದಿರಬಹುದು ಎಂಬ ಮಾತೂ ಕೇಳಿಬರುತ್ತಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಈ ಕ್ರಮವು ಪಕ್ಷದೊಳಗಿನ ಆಂತರಿಕ ಉದ್ವಿಗ್ನತೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತದೆ. ಅಂದಹಾಗೆ ಇಂಥಾ ಭಿನ್ನಾಭಿಪ್ರಾಯಗಳು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ರಾಜ್ಯದ ರಾಜಕೀಯದಲ್ಲಿ ಪರಿಣಾಮ ಬೀರಬಹುದು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ