ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಗುರುವಾರ ತಡರಾತ್ರಿ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾದ ನಂತರ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರವೇ ಖರ್ಗೆ ತಮ್ಮ ಉಮೇದುವಾರಿಕೆ ಬಹಿರಂಗ ಮಾಡಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ತಮ್ಮ ಉಮೇದುವಾರಿಕೆಯನ್ನು ಖಚಿತಪಡಿಸಿದ ಒಂದು ದಿನದ ನಂತರ ನಿರ್ಣಾಯಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶುಕ್ರವಾರ ಬೆಳಗ್ಗೆ ಹೇಳಿದ್ದರು. ಅಕ್ಟೋಬರ್ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಶಶಿ ತರೂರ್ ಮತ್ತು ಖರ್ಗೆ ನಡುವೆ ಪೈಪೋಟಿ ನಡೆಯಲಿದೆ. ಶಶಿ ತರೂರ್ ನಾಮಪತ್ರ ಸಲ್ಲಿಸಿದ ಸುಮಾರು ಒಂದು ಗಂಟೆಯ ನಂತರ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ನಾನು ಅವರ ಪರವಾಗಿ ನಿಲ್ಲುತ್ತೇನೆ ಮತ್ತು ಅವನ ವಿರುದ್ಧ ಸ್ಪರ್ಧಿಸುವ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಶುಕ್ರವಾರ ಬೆಳಗ್ಗೆ ಖರ್ಗೆ ಅವರ ನಿವಾಸದಲ್ಲಿ ಭೇಟಿಯಾದ ನಂತರ ದಿಗ್ವಿಜಯ ಸಿಂಗ್ ಹೇಳಿದ್ದರು. ನಾನು ನನ್ನ ಜೀವನದುದ್ದಕ್ಕೂ ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ್ದೇನೆ. ನಾನು ಅದನ್ನು ಮುಂದುವರಿಸುತ್ತೇನೆ. ದಲಿತ, ಬುಡಕಟ್ಟು ಮತ್ತು ಬಡವರ ಪರ ನಿಲ್ಲುವುದು, ಕೋಮು ಸೌಹಾರ್ದತೆ ಕದಡುವವರ ವಿರುದ್ಧ ಹೋರಾಡುವುದು ಮತ್ತು ಕಾಂಗ್ರೆಸ್ ಮತ್ತು ನೆಹರು-ಗಾಂಧಿ ಕುಟುಂಬಕ್ಕೆ ನನ್ನ ಬದ್ಧತೆ ಎಂಬ ಮೂರು ವಿಷಯಗಳಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಸಚಿನ್ ಪೈಲಟ್ ಅವರ ಉತ್ತರಾಧಿಕಾರಿಯಾಗಬಹುದು ಎಂದು ಗೆಹ್ಲೋಟ್ ಬೆಂಬಲಿಗರು ಬಂಡಾವೆದ್ದನಂತರ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು
ಖರ್ಗೆ ಅವರು ನಾಮಪತ್ರ ಸಲ್ಲಿಸುವ ಮುನ್ನ ಟ್ವೀಟ್ ಮಾಡಿದ ಗೆಹ್ಲೋಟ್, ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ಅಂಬಿಕಾ ಸೋನಿ ಜಿ, ಪವನ್ ಬನ್ಸಾಲ್ ಜಿ, ಆನಂದ್ ಶರ್ಮಾ ಜಿ, ಭೂಪೇಂದ್ರ ಸಿಂಗ್ ಹೂಡಾ ಜಿ, ಮುಕುಲ್ ವಾಸ್ನಿಕ್ ಜಿ, ಪೃಥ್ವಿರಾಜ್ ಚವಾನ್ ಜಿ, ಅವಿನಾಶ್ ಪಾಂಡೆ ಜಿ, ಮನೀಶ್ ತಿವಾರಿ ಜಿ, ರಾಜೀವ್ ಶುಕ್ಲಾ ಜಿ, ರಘುವೀರ್ ಮೀನಾ ಜಿ ಅವರೊಂದಿಗೆ ಎಂದು ಫೋಟೋ ಶೇರ್ ಮಾಡಿದ್ದಾರೆ.
#CongressPresidentElection | Senior Congress leader & LoP Rajya Sabha Mallikarjun Kharge files his nomination for the post of Congress president pic.twitter.com/ru2iWNMmzR
— ANI (@ANI) September 30, 2022
ಕಾಂಗ್ರೆಸ್ ಪಕ್ಷದ 30 ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸಿದ್ದಾರೆ. ಎ.ಕೆ ಆಂಟನಿ, ಅಶೋಕ್ ಗೆಹ್ಲೋಟ್, ಅಂಬಿಕಾ ಸೋನಿ,ಮುಕುಲ್ ವಾಸ್ನಿಕ್, ಆನಂದ್ ಶರ್ಮಾ, ಅಭಿಷೇಕ್ ಸಿಂಘ್ವಿ, ಅಜಯ್ ಮಾಕೇನ್, ಭುಪಿಂದರ್ ಎಸ್ ಹೂಡ,ದಿಗ್ವಿಜಯ್ ಸಿಂಗ್ , ತಾರೀಖ್ ಅಲ್ವರ್ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.
Total 30 Congress leaders have proposed Mallikarjun Kharge's name for the election of the president of the Indian National Congress pic.twitter.com/1M65uYhjWc
— ANI (@ANI) September 30, 2022
ಕುತೂಹಲದ ಸಂಗತಿ ಎಂದರೆ ಮನೀಶ್ ತಿವಾರಿ ಮತ್ತು ಆನಂದ್ ಶರ್ಮಾ G-23 ಬಂಡಾಯ ಗುಂಪಿನ ಭಾಗವಾಗಿದ್ದವರ. ಅವರೂ ಖರ್ಗೆಗೆ ಬೆಂಬಲ ಸೂಚಿಸಿದ್ದಾರೆ.
51 ವರ್ಷಗಳ ನಂತರ ದಲಿತ ನಾಯಕ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಬಹುದು. 9000 ಪಿಸಿಸಿ ಸದಸ್ಯರು ಅಕ್ಟೋಬರ್ 17 ರಂದು ಅದನ್ನು ನಿರ್ಧರಿಸುತ್ತಾರೆ. ಮತದಾನ ಮತ್ತು ಚುನಾವಣೆಗಳು ಕೇವಲ ಒಂದು ಪಕ್ಷದಲ್ಲಿ ನಡೆಯುತ್ತದೆ ಅದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಖರ್ಗೆ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದ ಜತೆ ನಂಟು ಹೊಂದಿದ್ದೇನೆ ಎಂದು ನಾಮಪತ್ರ ಸಲ್ಲಿಕೆ ಬಳಿಕ ‘ಕೈ’ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದು ಪ್ರತಿಸ್ಪರ್ಧಿಶಶಿ ತರೂರ್ ಬಗ್ಗೆ ಮಾತನಾಡಲು ನಿರಾಕರಿಸಿದರು.
Published On - 2:19 pm, Fri, 30 September 22