ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ರಾಜಕೀಯ ಬದ್ಧವೈರಿಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೌದು…ಇಂದು (ಜುಲೈ 02) ಬೆಂಗಳೂರಿನ (Bengaluru) ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಕುರುಬ ಸಮುದಾಯದ ಎಲ್ಲಾ ಪ್ರಮುಖ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಆದ್ರೆ, ಈ ವೇಳೆ ಈಶ್ವರಪ್ಪನವರಿಗೆ ಸನ್ಮಾನಿಸಲು ಸಿದ್ದರಾಮಯ್ಯ ನಿರಾಕರಿಸಿರುವ ಪ್ರಸಂಗ ನಡೆದಿದೆ.
ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ (niranjanananda Puri Swamiji) ಅವರು ಕೆಎಸ್ ಈಶ್ವರಪ್ಪ ಅವರಿಗೆ ಸನ್ಮಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ, ನೀವೇ ಸನ್ಮಾನಿಸಿ ಎಂದು ಕೈಸನ್ನೇ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಿದ್ದರಾಮಯ್ಯ ಅವರು ಈಶ್ವರಪ್ಪನವರನ್ನು ಸನ್ಮಾನಿಸಿಸಲು ಬೇಕಂತಲೇ ಹಿಂಜರಿದಿದ್ದಾರೋ ಅಥವಾ ಸಾಮಾನ್ಯವಾಗಿ ನೀವೇ ಮಾಡಿ ಮುಗಿಸಿ ಎನ್ನುವ ಅರ್ಥದಲ್ಲಿ ಕೈಸನ್ನೇ ಮಾಡಿ ಹೇಳಿದ್ದಾರೋ ಗೊತ್ತಿಲ್ಲ.
ಈಶ್ವರಪ್ಪನವರು ಮಠದ ಶ್ರೀರಕ್ಷೆ ಸ್ವೀಕರಿಸುವಂತೆ ನಿರೂಪಕರು ಮೈಕ್ನಲ್ಲಿ ಹೇಳಿದ್ದಾರೆ. ಅದರಂತೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಈಶ್ವರಪ್ಪ ಅವರಿಗೆ ಸನ್ಮಾನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಲು ನೀಡಲು ಮುಂದಾಗಿದ್ದಾರೆ. ಆದ್ರೆ, ಸಿದ್ದರಾಮಯ್ಯ ಸನ್ಮಾನಿಸಲು ನಿರಾಕರಿಸಿ, ನೀವೆ ಮಾಡಿ ಎಂದಿದ್ದಾರೆ. ಕೊನೆಗೆ ಶ್ರೀಗಳೇ ಈಶ್ವರಪ್ಪರನ್ನು ಸನ್ಮಾನಿಸಿದರು. ಈ ಮೂಲಕ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ನಡುವಿನ ರಾಜಕೀಯ ಗುದ್ದಾಟ ಸಮುದಾಯದ ವೇದಿಕೆ ಮೇಲೆ ಬಹಿರಂಗವಾದಂತಾಯ್ತು.
ಈಶ್ವರಪ್ಪ ಹೋದಲ್ಲಿ ಬಂದಲೆಲ್ಲ ಸಿದ್ದರಾಮಯ್ಯ ವಿರುದ್ಧ ಮಾತನಾಡದೇ ಇರುವುದಿಲ್ಲ. ಏನಾದರೂ ಒಂದು ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ಧ ತೆಗಳುತ್ತಲೇ ಇರುತ್ತಾರೆ.