ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿಯಲ್ಲಿ ಆಣೆ ಮಾಡಿ ಹೇಳಲಿ ನಾನು ಪರಮೇಶ್ವರ್ ಸೋಲಿಸಿಲ್ಲ ಅಂತ. ಅದೇ ರೀತಿಯಾಗಿ ಪರಮೇಶ್ವರ ಪ್ರಮಾಣ ಮಾಡಿ ಹೇಳಲಿ ನನ್ನ ಸಿದ್ಧರಾಮಯ್ಯ ಸೋಲಿಸಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದದರು. ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಇವರೇ ಮುಖ್ಯಮಂತ್ರಿ ಘೋಷಣೆ ಮಾಡಿಕೊಂಡ್ರೆ ಚುನಾವಣೆ ಏಕೆ ಎಂದು ಪ್ರಶ್ನಿಸಿದರು. ನಾಳೆ ಚುನಾವಣೆಯಲ್ಲಿ ಕಾಂಗ್ರೆಸ್ನ್ನದು ಇದೆ ಪರಿಸ್ಥಿತಿ. ಇವರು ಅವನನ್ನ ಸೋಲಿಸ್ತಾರೆ. ಇವನು ಇವರನ್ನ ಸೋಲಿಸ್ತಾನೆ. ಇದು ಕಾಂಗ್ರೆಸ್ನ ಇಂದಿನ ಪರಿಸ್ಥಿತಿ. ಬಾದಾಮಿ ಕ್ಷೇತ್ರ ದೂರ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಹಾಗಾದ್ರೆ ಸಿದ್ದರಾಮಯ್ಯ ಸಿಎಂ ಆದ್ರೆ ರಾಜ್ಯ ಸುತ್ತಲ್ವಾ ಎಂದು ಪ್ರಶ್ನಿಸಿದರು. ಬಾ ಮಗನೇ ಸೋಲಿಸ್ತೀವಿ ಅಂತಾ ಕೋಲಾರದ ದಲಿತರು ಹಾಗೂ ಇತರೆ ಸಮುದಾಯದವರು ಕಾಯುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶಕ್ಕಾಗಿ ಪ್ರಾಣ ಕೊಡಲು ನಾವು ತೀರ್ಮಾನ ಮಾಡಿದ್ದೇವೆ. ಸಿದ್ದರಾಮಯ್ಯ, ಜಮೀರ್ ಅಹ್ಮದ್, ಜಿನ್ನಾರದ್ದು ಒಂದೇ ಸಂತತಿ. ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರೇ ನಿಮ್ಮ ಬಳಿ ಪ್ರಾರ್ಥನೆ ಮಾಡುತ್ತೇನೆ. ಅಯೋಧ್ಯೆಯಲ್ಲಿ ಕಟ್ಟಿರುವ ರಾಮಮಂದಿರ ಉದ್ಘಾಟನೆಗೆ ನೀವು ಬನ್ನಿ. ನಿಮ್ಮ ಪಾಪ ತೊಳೆದುಕೊಳ್ಳಿ. ಕಾಶಿ, ಮಥುರಾದಲ್ಲಿ ಮಂದಿರ ಕೆಡವಿ ಮಸೀದಿಯನ್ನು ಕಟ್ಟಿದ್ದಾರೆ. ಮಸೀದಿ ಧ್ವಂಸ ಮಾಡಿ ದೇವಾಲಯ ಕಟ್ಟೇ ಕಟ್ಟುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಬಿಜೆಪಿಗಿಂತ ಕಾಂಗ್ರೆಸ್ನವರೇ ಸೋಲಿಸ್ತಾರೆ: ಈಶ್ವರಪ್ಪ ಬಾಂಬ್
ಇನ್ನು ಇದೇ ವೇಳೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗೈರು ಆಗಿರುವುದಕ್ಕೆ ಪ್ರಕ್ರಿಯಿಸಿದ ಈಶ್ವರಪ್ಪ, ಸೋಮಣ್ಣಗೆ ಆರೋಗ್ಯ ಸರಿ ಇಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬಂದಿಲ್ಲ. ಯಡಿಯೂರಪ್ಪ ಸೋಮಣ್ಣ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ನಾನು ಕೂಡ ಯಡಿಯೂರಪ್ಪರನವರ ಕೆಲ ಕಾರ್ಯಕ್ರಮಕ್ಕೆ ಹೋಗಿಲ್ಲ. ಇದನ್ನು ಮುಸುಕಿನ ಗುದ್ದಾಟ ಎಂದು ಹೇಳೋಕೆ ಆಗುತ್ತಾ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸೇರುವುದು ನಿಜ, ಆದರೆ ಮಾ. 5ಕ್ಕಲ್ಲ; ಶಿವಲಿಂಗೇಗೌಡ ಸ್ಪಷ್ಟನೆ
ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿ ದೇಶದ ಜನತೆ ತಲೆತಗ್ಗಿಸುವ ಕೆಲಸ ಯಾವತ್ತೂ ಮಾಡಿಲ್ಲ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಕೊಟ್ಟಮಾತು ತಪ್ಪಿಲ್ಲ. ಮನಮೋಹನ್ ಸಿಂಗ್ ವಿದೇಶಕ್ಕೆ ಹೋದರೆ ನಮಸ್ಕಾರ ಮಾಡ್ತಿರಲಿಲ್ಲ. ಮೋದಿ ಎಲ್ಲಿಗೇ ಹೋದರೂ ಕೆಂಪು ಹಾಸಿನ ಸ್ವಾಗತ ದೊರೆಯುತ್ತಿದೆ. ಕೊಟ್ಟ ಮಾತಿನಂತೆ ಇವತ್ತು ಮೋದಿ ದೇಶದ ಚಿತ್ರಣ ಬದಲಿಸಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಹಾಡಿ ಹೋಗಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.