ವಿಧಾನಸಭೆ ಚುನಾವಣೆಗೆ ಎಎಪಿ ಸಿದ್ಧತೆ; ಮಾ. 4ರಂದು ದಾವಣಗೆರೆಗೆ ಅರವಿಂದ ಕೇಜ್ರಿವಾಲ್
ಕೇಜ್ರಿವಾಲ್ ಜತೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸಹ ಇರಲಿದ್ದಾರೆ. ಅದೃಷ್ಟದ ನೆಲ ಎಂದೇ ಪ್ರಸಿದ್ದಿ ಪಡೆದಿರುವ ದಾವಣಗೆರೆಯನ್ನೇ ಪ್ರಚಾರ ಆರಂಭಿಸಲು ಆಯ್ದುಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಶೋಕ ಶರ್ಮಾ ಹಾಗೂ ದಾವಣಗೆರೆ ಬಹಿರಂಗ ಸಮಾವೇಶದ ಉಸ್ತುವಾರಿ ಡಾ. ವಿಶ್ವನಾಥ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರದ ಅಖಾಡಕ್ಕಿಳಿಯಲು ಆಮ್ ಆದ್ಮಿ ಪಕ್ಷ (AAP) ಕೂಡ ಸಿದ್ಧತೆ ನಡೆಸುತ್ತಿದ್ದು, ಮಾರ್ಚ್ 4ರಂದು ಬೆಣ್ಣೆ ನಗರಿ ದಾವಣಗೆರೆಯಿಂದ (Davanagere) ಪ್ರಚಾರ ಅಭಿಯಾನ ಆರಂಭಿಸಲಿದೆ. ಪಕ್ಷದ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ದಾವಣಗೆರೆಗೆ ಆಗಮಿಸಲಿದ್ದು, ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ. ನಗರದ ಸರ್ಕಾರ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಗೆ ಸಿದ್ಧತೆ ನಡೆಯುತ್ತಿದೆ.
ಸಂಜೆ 4 ಗಂಟೆಗೆ ಸಭೆ ಆರಂಭವಾಗಲಿದೆ. ಕೇಜ್ರಿವಾಲ್ ಜತೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸಹ ಇರಲಿದ್ದಾರೆ. ಅದೃಷ್ಟದ ನೆಲ ಎಂದೇ ಪ್ರಸಿದ್ದಿ ಪಡೆದಿರುವ ದಾವಣಗೆರೆಯನ್ನೇ ಪ್ರಚಾರ ಆರಂಭಿಸಲು ಆಯ್ದುಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಶೋಕ ಶರ್ಮಾ ಹಾಗೂ ದಾವಣಗೆರೆ ಬಹಿರಂಗ ಸಮಾವೇಶದ ಉಸ್ತುವಾರಿ ಡಾ. ವಿಶ್ವನಾಥ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ದೆಹಲಿ ಬಳಿಕ ಪಂಜಾಬ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷ ಈಗಾಗಲೇ ಉತ್ತರ ಕೆಲವು ರಾಜ್ಯಗಳಲ್ಲಿ ಖಾತೆ ತೆರೆದಿದೆ. ಇದೀಗ ದಕ್ಷಿಣದ ರಾಜ್ಯಗಳಲ್ಲೂ ತನ್ನ ನೆಲೆ ವಿಸ್ತರಿಸುವತ್ತ ಚಿತ್ತ ನೆಟ್ಟಿದೆ. ಈ ಹಿಂದೆ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ನಿರೀಕ್ಷಿತ ಯಶಸ್ಸು ಗಳಿಸಿಲ್ಲ.
ಇದನ್ನೂ ಓದಿ: Bhaskar Rao: ಬಿಜೆಪಿ ಸೇರ್ಪಡೆಯಾದ ಮಾಜಿ IPS ಅಧಿಕಾರಿ ಭಾಸ್ಕರ್ ರಾವ್, ಯಾವ ಕ್ಷೇತ್ರದಿಂದ ಕಣಕ್ಕೆ?
ಈ ಮಧ್ಯೆ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಪಕ್ಷ ತೊರೆದು ಬಿಜೆಪಿ ಸೇರಿರುವುದು ಎಎಪಿಗೆ ಆಘಾತ ನೀಡಿದೆ. ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಭಾಸ್ಕರ್ ರಾವ್, ಬುಧವಾರವಷ್ಟೇ ಬಿಜೆಪಿ ಸೇರಿದ್ದಾರೆ. ಎಎಪಿ ಪರ ಭರವಸೆಯ ನಾಯಕನಾಗಿದ್ದ ಅವರು ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಪಕ್ಷ ತೊರೆದಿರುವುದು ಕೇಜ್ರಿವಾಲ್ ಬಳಗಕ್ಕೆ ಸಂಕಷ್ಟ ತಂದೊಡ್ಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಚುನಾವಣಾ ಪ್ರಚಾರಕ್ಕೆ ಎಎಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ