ಸಿದ್ದರಾಮಯ್ಯ ಮತ್ತೆ ಸಿಎಂ; ಇಂದಿರಾ ಕ್ಯಾಂಟೀನ್​ಗೆ ಸಿಗಲಿದೆ ಮರುಜೀವ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಗರದೆಲ್ಲೆಡೆ ಆರಂಭಿಸಲಾಗಿದ್ದ, ಅವರ ಕನಸಿನ ಕೂಸಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಮರುಜೀವ ದೊರೆಯುವ ನಿರೀಕ್ಷೆ ಇದೆ.

ಸಿದ್ದರಾಮಯ್ಯ ಮತ್ತೆ ಸಿಎಂ; ಇಂದಿರಾ ಕ್ಯಾಂಟೀನ್​ಗೆ ಸಿಗಲಿದೆ ಮರುಜೀವ
ಇಂದಿರಾ ಕ್ಯಾಂಟೀನ್​ (ಸಂಗ್ರಹ ಚಿತ್ರ)
Follow us
Ganapathi Sharma
|

Updated on:May 18, 2023 | 3:48 PM

ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಗರದೆಲ್ಲೆಡೆ ಆರಂಭಿಸಲಾಗಿದ್ದ, ಅವರ ಕನಸಿನ ಕೂಸಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಮರುಜೀವ ದೊರೆಯುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆಯೇ ಇಂದಿರಾ ಕ್ಯಾಂಟಿನ್​​​ಗಳಿಗೆ ಮರುಜೀವ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹುತೇಕ ಕ್ಯಾಂಟೀನ್​ಗಳು ಮುಚ್ಚಲ್ಪಟ್ಟಿದ್ದರೆ, ಅನೇಕ ಕ್ಯಾಂಟೀನ್​ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಕೂಸಿಗೆ ಮರುಜೀವ ನೀಡಬೇಕು ಎಂದು ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಕ್ಯಾಂಟಿನ್​ಗಳನ್ನು ಮುಚ್ಚಿಸುವ ಹುನ್ನರ ಮಾಡಲಾಗಿತ್ತು. ಆದರೆ, ಅದನ್ನು ತಡೆಯಲಾಗಿದೆ. ಆದಾಗ್ಯೂ ಕ್ಯಾಂಟೀನ್​ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಬೆಳಿಗ್ಗೆ ತಿಂಡಿ ಮಧ್ಯಾಹ್ನದ ಊಟ ಸಿಗುತ್ತಿತ್ತು. ಕೇವಲ 10 ರೂಪಾಯಿಗೆ ಬಡ ಜನರಿಗೆ ಊಟ ಸಿಗುತ್ತಿತ್ತು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ರಾಜ್ಯದ ಎಲ್ಲಾ ಕ್ಯಾಂಟಿನ್​​ಗಳಿಗೆ ಅನುದಾನ ನೀಡಲಾಗಿತ್ತು. ಅದ್ರೆ ಬಿಜೆಪಿ ಸರ್ಕಾರ ಬಂದ ಕೆಲವೇ ದಿನಗಳಲ್ಲಿ ರಾಜ್ಯದ ಹಲವು ಕಡೆ ಅನುದಾನ ಕೊಡದೆ ಕ್ಯಾಂಟಿನ್ ಬಂದ್ ಮಾಡಲಾಗಿತ್ತು ಎಂದು ಅವರು ದೂರಿದ್ದಾರೆ.

ಈ ಮಧ್ಯೆ, ಮತ್ತೆ ಬಡವರ ಪಾಲಿನ ಇಂದಿರಾ ಕ್ಯಾಂಟಿನ್ ರಾಜ್ಯದೇಲ್ಲೆಡೆ ತೆರೆಯಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಬಿಬಿಎಂಪಿ ಕಾಂಗ್ರೆಸ್ ಕಾರ್ಪೋರೇಟರ್​​​​ಗಳು ಆಗ್ರಹಿಸಿದ್ದಾರೆ. ಸರ್ಕಾರ ರಚನೆಯಾಗುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Thu, 18 May 23