ಬೆಂಗಳೂರು: ನಗರದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನಿವಾಸದ ಮುಂದೆ ವಿವಿಧ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಗದ್ದಲ ಮಾಡಲಾಗಿದೆ. ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿ ಯೋಗೀಶ್ ಬಾಬು ಬೆಂಬಲಿಗರಿಂದ ಕೆಪಿಸಿಸಿ ಕಚೇರಿಗೆ ತೆರಳುವಾಗ ಹೈಡ್ರಾಮಾ ಮಾಡಲಾಗಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣಗೆ ಟಿಕೆಟ್ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಿವಾಸದ ಮುಂದೆ ಬೆಂಬಲಿಗರಿಂದ ಗದ್ದಲ ಮಾಡಲಾಗಿದೆ. ಅದೇ ರೀತಿಯಾಗಿ ಗೃಹಸಚಿವರ ಕ್ಷೇತ್ರದಲ್ಲೇ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯ ಹುಂಚದಕಟ್ಟೆ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಹದಗೆಟ್ಟಿದ್ದು, ರಸ್ತೆ ದುರಸ್ತಿ ಮಾಡದ ಹಿನ್ನೆಲೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಮಾಡಲಾಗುತ್ತಿದೆ.
ಕೊಪ್ಪಳ: ರಾಜ್ಯ ಸರ್ಕಾರದಿಂದ ಒಳಮೀಸಲಾರಿ ಜಾರಿ ಖಂಡಿಸಿ ಮತದಾನ ಬಹಿಷ್ಕಾರಕ್ಕೆ ಬಂಜಾರ ಸಮುದಾಯ ಮುಂದಾಗಿದೆ. ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕತಾಂಡಾದಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮೀಸಲಾತಿ ವರ್ಗಿಕರಿಸಿ 101 ಸಮುದಾಯಗಳಿಗೆ ವಂಚನೆ ಆರೋಪ ಮಾಡಲಾಗಿದೆ. ಈ ಹಿನ್ನೆಲೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆಯೇ ಜೆಡಿಎಸ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಗುಬ್ಬಿ ಶ್ರೀನಿವಾಸ್
ವೋಟ್ ಬ್ಯಾಂಕಿಗಾಗಿ ಬಿಜೆಪಿ ಪರಿಶಿಷ್ಟ ಜಾತಿ ವರ್ಗಿಕರಿಸಿದೆ. ಉಳಿದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ವಂಚನೆ ಮಾಡುತ್ತಿದೆ. ಹಾಗಾಗಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಬಹಿಷ್ಕಾರ ನಿರ್ಧಾರ ಎಂದು ತಾಂಡಾದಲ್ಲಿ ಬ್ಯಾನರ್ ಹಾಕಿ ಎಚ್ಚರಿಕೆ ನೀಡಲಾಗಿದೆ.
ಗದಗ: ಚುನಾವಣೆ ಘೋಷಣೆ ಹಿನ್ನೆಲೆ ಚೆಕ್ ಪೋಸ್ಟ್ಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಬಿಜೆಪಿಗೆ ಸೇರಿದ ಟೀ ಶರ್ಟ್, ಫೇಸ್ ಮಾಸ್ಕ್ ಸೇರಿ ವಿವಿಧ ವಸ್ತುಗಳನ್ನು ಜಿಲ್ಲೆಯ ಮುಂಡರಗಿ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಸೀಜ್ ಮಾಡಿದ್ದಾರೆ. ಹೊಸಪೇಟೆಯಿಂದ ಹೂವಿಹಡಗಲಿ ಸಾಗಿಸುತ್ತಿದ್ದ ಕಾರ್ನಲ್ಲಿ ಪತ್ತೆಯಾಗಿದೆ. ಟೀ ಶರ್ಟ್ 100, ಮೋದಿ ಫೇಸ್ ಮಾಸ್ಕ್ 1000, ಬ್ಯಾಡ್ಜ್ 1000, ಸ್ಟಿಕ್ಕರ್ 120, ಶಾಲ್ 80, ಬಿಜೆಪಿ ಭರವಸೆ ಸ್ಟಿಕ್ಕರ್ 420 ಸೀಜ್ ಸೇರಿದಂತೆ ಒಟ್ಟು 2720 ಚುನಾವಣೆ ವಸ್ತುಗಳು ಜಪ್ತಿ ಮಾಡಲಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೆಡಿಎಸ್ನಲ್ಲಿ ಅಪ್ಪ, ಮಕ್ಕಳ ಮಾತು ಕೇಳದಿದರೆ ಹೊರ ಹಾಕುತ್ತಾರೆ: ಸಿದ್ಧರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಆಕ್ರೋಶ
ಚಿಕ್ಕಬಳ್ಳಾಪುರ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ 2 ಲೋಡ್ ಸೀರೆಗಳನ್ನು GST ಅಧಿಕಾರಿಗಳು ನಿನ್ನೆ (ಮಾ.26) ರಂದು ಜಪ್ತಿ ಮಾಡಿಕೊಂಡಿದ್ದರು. ಬೆಂಗಳೂರಿನಿಂದ ಚಿಂತಾಮಣಿಗೆ ಟೆಂಪೋದಲ್ಲಿ ಸಾಗಿಸುತ್ತಿದ್ದಾಗ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ಬಳಿ ದಾಳಿ ಮಾಡಿ ಜಪ್ತಿ ಮಾಡಲಾಗಿತ್ತು. ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರಗೌಡ ಎಂಬುವರಿಗೆ ಸೇರಿದ್ದು ಎನ್ನಲಾಗಿತ್ತು. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿಯನ್ನು ಪೊಲೀಸರು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ಪೋಸ್ಟ್ನಲ್ಲಿ ಜಪ್ತಿ ಮಾಡಿದ್ದರು. ಅಂಕೋಲಾದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರಿನಲ್ಲಿ 15 ಲಕ್ಷ ರೂ. ಹಣ ಪತ್ತೆ ಆಗಿತ್ತು. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಚೆಕ್ ಪೋಸ್ಟ್ ಸಿಬ್ಬಂದಿಗಳು ತಂದಿದ್ದರು. ಸ್ಥಳಕ್ಕೆ ತಹಶಿಲ್ದಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸದ್ಯ ಕಾರು ಚಾಲಕನನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ. 60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳು ಸೀಜ್
ವಿಧಾನಸಭಾ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Thu, 30 March 23