ಜೆಡಿಎಸ್​ನಲ್ಲಿ ಅಪ್ಪ, ಮಕ್ಕಳ ಮಾತು ಕೇಳದಿದರೆ ಹೊರ ಹಾಕುತ್ತಾರೆ: ಸಿದ್ಧರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಆಕ್ರೋಶ

ಜೆಡಿಎಸ್​ನಲ್ಲಿ ಅಪ್ಪ, ಮಕ್ಕಳ ಮಾತು ಕೇಳದಿದರೆ ಹೊರ ಹಾಕುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯನವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ ಎಂದಿದ್ದಾರೆ.

ಜೆಡಿಎಸ್​ನಲ್ಲಿ ಅಪ್ಪ, ಮಕ್ಕಳ ಮಾತು ಕೇಳದಿದರೆ ಹೊರ ಹಾಕುತ್ತಾರೆ: ಸಿದ್ಧರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಆಕ್ರೋಶ
ಹೆಚ್​.ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ
Follow us
|

Updated on:Mar 30, 2023 | 3:19 PM

ಬೆಂಗಳೂರು: ಜೆಡಿಎಸ್​ನಲ್ಲಿ ಅಪ್ಪ, ಮಕ್ಕಳ ಮಾತು ಕೇಳದಿದರೆ ಹೊರ ಹಾಕುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್​.ಡಿ ಕುಮಾರಸ್ವಾಮಿ (Kumaraswamy) ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯನವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ನಾವು ಸ್ಟೇಜ್ ಹಾಕಿ ಜನ ಸೇರಿಸಿದರೆ ಅವರು ಬಂದು ಕೂರುತ್ತಿದ್ದರು. ಕಾಲ್ಮೇಲೆ ಕಾಲು ಹಾಕಿ ದೇವೇಗೌಡರನ್ನು ಒದ್ಕೊಂಡು ಕೂರುತ್ತಿದ್ದರು. ಸಿದ್ದರಾಮಯ್ಯ ಪಾಳೆಗಾರಿಕೆ ಮಾಡುತ್ತಾ ದೇವೇಗೌಡರನ್ನು ಹೆದರಿಸಿಕೊಂಡು ಇದ್ದರು. ಬ್ಯಾನರ್‌ನಲ್ಲಿ ಫೋಟೋ ಇಲ್ಲದಿದ್ದರೆ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ. ಕಾಂಗ್ರೆಸ್ ಬಿಟ್ಟು ಹೊಸ ಪಕ್ಷ ಕಟ್ಟಿ 2 ಸೀಟು ಗೆಲ್ಲಲಿ ನೋಡೋಣ. JDS ಬೆಳೆಸದಿದ್ದರೆ ಅವರನ್ನು ಕಾಂಗ್ರೆಸ್ಸಿಗರು ಎಲ್ಲಿ ಕರೆಯುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್​ ವಿರುದ್ಧವೂ ಹೆಚ್​ಡಿಕೆ ವಾಗ್ದಾಳಿ ಮಾಡಿದ್ದು, ಎಸ್.ಆರ್.ಶ್ರೀನಿವಾಸ್‌ಗೆ ಮಂತ್ರಿ ಮಾಡಿದ್ದು ಹಿಂಸೆನಾ. ಶ್ರೀನಿವಾಸ್​​ ಹೇಳಿಕೆ ಬಗ್ಗೆ ಯಾಕೆ ಸುಮ್ಮನೇ ಚರ್ಚೆ ಮಾಡುತ್ತೀರಾ ಎಂದರು.

2006ರಲ್ಲಿ ಪಕ್ಷ ತೊರೆದಾಗ ಮೈಸೂರು ಭಾಗದ ಶಾಸಕರನ್ನು ಹೈಜಾಕ್​ ಮಾಡಿ ಕರೆದೊಯ್ದರು. ವೀರಾವೇಶದಿಂದ ಮಾತನಾಡಿದ ಇವರು 257 ಮತಗಳಿಂದ ಗೆದ್ದರು. ಇವರನ್ನು ಬೆಳೆಸಿದ್ದು JDS, ಇಲ್ಲದಿದ್ದರೆ ಇವರನ್ನು ಕೇಳುತ್ತಿರಲಿಲ್ಲ. ಜೆಡಿಎಸ್​​​ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತಾಡುವುದು ಬೇಡ ಎಂದು ಹೇಳಿದರು.

ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆಯೇ ಜೆಡಿಎಸ್​ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಗುಬ್ಬಿ ಶ್ರೀನಿವಾಸ್

ಕಾಂಗ್ರೆಸ್, ಬಿಜೆಪಿಯವರು ನಿಮ್ಮ ದುಡಿಮೆ ಬಗ್ಗೆ ಮಾತ್ರ ಮಾತನಾಡಿ

ಜೆಡಿಎಸ್​​ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಬಿಜೆಪಿ, ಕಾಂಗ್ರೆಸ್​ನವರು ಜೆಡಿಎಸ್ ವಿರುದ್ಧ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಜತೆ ಜೆಡಿಎಸ್​​​ ಒಳಒಪ್ಪಂದವಾಗಿದೆ ಎಂದು ಸಿಎಂ ಹೇಳುತ್ತಾರೆ. ಜೆಡಿಎಸ್​ ವಿರುದ್ಧ ಮೈಸೂರಿನಲ್ಲಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿಯವರು ನಿಮ್ಮ ದುಡಿಮೆ ಬಗ್ಗೆ ಮಾತ್ರ ಮಾತನಾಡಿ. ನಮ್ಮ ಪಕ್ಷದ ವಿರುದ್ಧ ಮಾತನಾಡಬೇಡಿ. ಹಣ ನೀಡಿ ತಮ್ಮ ಪರ ಸಮೀಕ್ಷೆ ಮಾಡಿಸಿಕೊಂಡು ಯಾವುದೋ ಒಂದು ಕಂಪನಿ ಹೆಸರಿನಲ್ಲಿ ನಿನ್ನೆ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.

ಜನತಾ ಜಲಧಾರೆ, ಪಂಚರತ್ನ ಸಮಾರೋಪ ಯಶಸ್ವಿಯಾಗಿದೆ

ನಾನು ಈ ಬಾರಿ 123 ಗುರಿಯಿಟ್ಟು ಹೊರಟಿದ್ದೇವೆ. ಇದು ನಿಮಗೆ ಹಾಸ್ಯವಾಗಿ ಲಘುವಾಗಿ ಕಾಣಬಹದು. ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ತಲುಪಿದ್ದೇನೆ. ಜನತಾ ಜಲಧಾರೆ, ಪಂಚರತ್ನ ಸಮಾರೋಪ ಯಶಸ್ವಿಯಾಗಿದೆ. ನನ್ನೆ ನೋಡಿದೆ ನಾಲ್ಕೈದು ಸರ್ವೆ ರಿಪೋರ್ಟ್‌ಗಳನ್ನ ನನಗೆ ಆ ಸರ್ವೇಗಳ ಬಗ್ಗೆ ಆತಂಕವಿಲ್ಲ. ಅದೇ ಸಿ ವೋಟರ್ ಹಿಂದೆ ಕಾಂಗ್ರೆಸ್ 120 ಅಂತ ಹೇಳಿತ್ತು, ಕಾಂಗ್ರೆಸ್ ಗೆಲ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಒಳ ಮೀಸಲಾತಿಯಿಂದ ಲಂಬಾಣಿ ಸಮಾಜ ಆಕ್ರೋಶ: ಈ ಬಗ್ಗೆ ಸಂಸದ ಉಮೇಶ್ ಜಾಧವ್ ಹೇಳಿದ್ದಿಷ್ಟು

ಪದೇ ಪದೇ ಒಳ ಒಪ್ಪಂದ ಅಂತ ಹೇಳಿಕೆ ನೀಡಿ ಹಾಸ್ಯಾಸ್ಪದಕ್ಕೆ ಒಳಗಾಗಬೇಡಿ. ನಾನೇನು ಸುಳ್ಳು ಹೇಳೋನಲ್ಲ, ನನ್ನನ್ನ ಸಂಪರ್ಕ ಮಾಡಿದ್ದಾರೆ. ಎರಡೂ ಪಕ್ಷಗಳಲ್ಲಿ ಹೇಗಪ್ಪ ಜೆಡಿಎಸ್‌ನ ವಿಶ್ವಾಸಕ್ಕೆ ಪಡೆಯೋದು ಅಂತ ಸ್ಪರ್ಧೆ ಶುರುವಾಗಿದೆ. ಈ ಸಲ ನನ್ನ ಪಕ್ಷ ಮುಗಿಸಲು ಸಾಧ್ಯವಿಲ್ಲ. ಹದಿನೈದು ವರ್ಷದಿಂದ ನಾನು ಟ್ರ್ಯಾಪ್ ಆಗಿ ಸಾಕಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:19 pm, Thu, 30 March 23