ಸೊರಬ: ಸೊರಬ ಬಿಜೆಪಿಯಲ್ಲಿ (soraba BJP) ಪುನಃ ಭಿನ್ನಮತ ಸ್ಫೋಟಗೊಂಡಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಹಾಲಿ ಶಾಸಕ ಕುಮಾರ್ ಬಂಗಾರಪ್ಪ(Kumar Bangarappa) ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಸೊರಬ ತಾಲೂಕಿನ ಮೂಲ ಬಿಜೆಪಿ ಹಾಗೂ ಆರ್ಎಸ್ಎಸ್ (BJP And RSS) ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು. ಯಾವುದೇ ಕಾರಣಕ್ಕೂ ಈ ಬಾರಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡದಂತೆ ನಮೋ ವೇದಿಕೆಯ ಸಾವಿರಾರು ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ (Bike Rally) ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡದಂತೆ ಸಂದೇಶ ರವಾನಿಸಿದರು.
ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಟಿ ರವಿ: ಪಾದಯಾತ್ರೆಯಲ್ಲಿ ಘೋಷಣೆ
ಹೌದು…ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಇಂದು(ಮಾರ್ಚ್ 26) ಸೊರಬದ ಮೂಲಕ ಬಿಜೆಪಿಗರು ಹಾಗೂ ಆರ್ಎಸ್ಎಸ್ ಮುಖಂಡರು ಬೃಹತ್ ಬೈಕ್ ರ್ಯಾಲಿ ಮಾಡಿದರು. ಆನವಟ್ಟಿಯ ಕೋಟಿಪುರ ವೃತ್ತದಿಂದ ಆನವಟ್ಟಿಯ ವರೆಗೂ ಬೈಕ್ ರ್ಯಾಲಿ ಮಾಡಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಘೋಷಣೆ ಕೂಗಿದರು. ನಮೋ ವೇದಿಕೆಯಿಂದ ನಡೆದ ಬೈಕ್ ರ್ಯಾಲಿಯಲ್ಲಿ ಭಾಗಿಯಾದ ಸಾವಿರಾರು ಕಾರ್ಯಕರ್ತರು.
ಬಳಿಕ ನಮೋ ವೇದಿಕೆ ಕಾರ್ಯಕರ್ತರು ಬಹಿರಂಗ ಸಭೆ ನಡೆಸಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡದಂತೆ ಆಗ್ರಹಿಸಿದರು. ಈ ವೇಳೆ ಬಿಜೆಪಿ ಹಿರಿಯ ಮುಖಂಡ ಪದ್ಮನಾಭ ಭಟ್ ಹಾಗೂ ಸೊರಬ ನಮೋ ವೇದಿಕೆಯ ಪಾಣಿ ರಾಜಪ್ಪ ಅವರು ಕುಮಾರ್ ಬಂಗಾರಪ್ಪ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದರು.
ಕುಮಾರ್ ಬಂಗಾರಪ್ಪ ವಿರುದ್ಧ ಸ್ವಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿರವುದು ಇದು ಮೊದಲಲ್ಲ. ಮೊದಲಿನಿಂದಲೂ ಸೊರಬ ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಭಿನ್ನಮತ ಇದೆ. ಕುಮಾರ್ ಬಂಗಾರಪ್ಪ ವಿರುದ್ಧ ನಮೋ ಸೊರಬ ವೇದಿಕೆ ಸ್ಥಾಪನೆಗೊಂಡಿದ್ದು, ಬಿಜೆಪಿ ಬಣ ಸಂಘರ್ಷ ಮತ್ತಷ್ಟು ತಾರಕ್ಕೇರಿದೆ. ನರೇಂದ್ರ ಮೋದಿ ಜನ್ಮದಿನದಂದೇ ಸೊರಬ ಬಿಜೆಪಿಯಲ್ಲಿನ ಭಿನಮ್ಮತ ಬಹಿರಂಗವಾಗಿತ್ತು. ಅಲ್ಲದೇ ಕುಮಾರ್ ಬಂಗಾರಪ್ಪ ಬಣ ಮತ್ತು ಮೂಲ ಬಿಜೆಪಿಗರಿಂದ ಪರಸ್ಪರ ಟೀಕೆ, ಸುದ್ದಿಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು.
ಶಾಸಕ ಕುಮಾರ್ ಬಂಗಾರಪ್ಪ ಆಯ್ಕೆಯಾಗಿನಿಂದಲೂ ಅವರ ವಿರುದ್ಧ ಅದೇ ಪಕ್ಷದ ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕುಮಾರ್ ಬಂಗಾರಪ್ಪ ನಡೆಯ ವಿರುದ್ಧ ಮೂಲ ವಲಸಿಗ ಸಂಘರ್ಷ ನಡೆಯುತ್ತಲೇ ಇದೆ. ಈ ಎರಡು ಬಣಗಳ ನಡುವಿನ ಗುದ್ದಾಟ ಈಗ ಮತ್ತಷ್ಟು ಹೆಚ್ಚಾಗಿದೆ. ಚುನಾವಣೆ ಹೊಸ್ತಿಲಲ್ಲೇ ಬಣ ರಾಜಕೀಯದಿಂದ ಹಿರಿಯ ನಾಯಕರಿಗೆ ದೊಡ್ಡ ತಲೆನೋವಾಗಿದೆ.