4 ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿದ್ದ ವಿಕಾಸ್ ಬನ್ಸೋಡೆ ಸಿಟಿ ರವಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 13, 2022 | 10:01 PM

ಸುಪ್ರೀಂ ಕೋರ್ಟ್‌ ವಕೀಲ ವಿಕಾಸ್ ಬನ್ಸೋಡೆ ಅವರು ಸಿಟಿ ರವಿ ಸಮ್ಮುಖದಲ್ಲಿ ನವದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

4 ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿದ್ದ ವಿಕಾಸ್ ಬನ್ಸೋಡೆ ಸಿಟಿ ರವಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ
Vikas Bansode Joins BJP
Follow us on

ನವದೆಹಲಿ : ನಾಲ್ಕು ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಸುಪ್ರೀಂ ಕೋರ್ಟ್‌ ವಕೀಲ ವಿಕಾಸ್ ಬನ್ಸೋಡೆ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ವಿಕಾಸ್ ಬನ್ಸೋಡೆ ಅವರನ್ನು ಇಂದು (ನವೆಂಬರ್ 13) ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಸುಪ್ರೀಂ ಕೋರ್ಟ್‌ ವಕೀಲರಾಗಿದ್ದ ವಿಕಾಸ್ ಬನ್ಸೋಡೆ, ಅವರು 4 ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿದ್ದರು.

ಸಿ.ಟಿ.ರವಿ ಅವರು ಮಾತನಾಡಿ, ನಾಯಕ ಹಂಸರಾಜ್ ಭಾರದ್ವಾಜ್ ಸೇರಿದಂತೆ ಮಾಜಿ ರಾಜ್ಯಪಾಲರಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಬನ್ಸೋಡೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಲ ಬಂದಂತಾಗಿದೆ ಎಂದು ಹೇಳಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Sun, 13 November 22