Supriya Sule: ಶರದ್ ಪವಾರ್ ಕರೆದಿರುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸುಪ್ರಿಯಾ ಸುಳೆ ಮನವಿ

ಶರದ್ ಪವಾರ್ ನೇತೃತ್ವದ ಎನ್​​ಸಿಪಿ ಬಣವು ಇಂದು ಎಲ್ಲಾ ಶಾಸಕರ ಸಭೆಯನ್ನು ಮಾಡಲಾಗವುದು ಎಂದು ಸ್ಪಷ್ಟವಾದ ಕರೆ ಬಂದಿದೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಹಾಜರಾಗಬೇಕೆಂಬುದು ಒಂದು ವಿನಮ್ರ ವಿನಂತಿ ಎಂದು ವೀಡಿಯೊ ಮಾಡಿದ ಸುಪ್ರಿಯಾ ಸುಳೆ

Supriya Sule: ಶರದ್ ಪವಾರ್ ಕರೆದಿರುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸುಪ್ರಿಯಾ ಸುಳೆ ಮನವಿ
ಸುಪ್ರಿಯಾ ಸುಳೆ
Follow us
|

Updated on: Jul 05, 2023 | 12:35 PM

ಮುಂಬೈ: ಕಳೆದ ವಾರ ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ಸಂಚಲನಗಳು ನಡೆದಿತ್ತು. ಎನ್​ಸಿಪಿ ಪಕ್ಷದ ನಾಯಕ ಅಜಿತ್​​ ಪವಾರ್​ ಬಿಜೆಪಿ ಮತ್ತು ಸಿಂಧೆ ಶಿವಸೇನೆ ಬೆಂಬಲಿತ ಸರ್ಕಾರಕ್ಕೆ ಬೆಂಬಲ ನೀಡಿ, ಉಪಮುಖ್ಯಮಂತ್ರಿ ಕೂಡ ಆಗಿದ್ದಾರೆ. ಇದೀಗ ಪಕ್ಷದ ಬಹುಪಾಲು ಶಾಸಕರು ತಮ್ಮೊಂದಿಗಿದ್ದಾರೆ ಎಂಬುದನ್ನು ನಿರೂಪಿಸಲು ಎನ್​ಸಿಪಿಯ ಎರಡು ಬಣಗಳು ಇಂದು ಮುಂಬೈನಲ್ಲಿ ಸಭೆ ಕರೆದಿವೆ. ಈ ಬಗ್ಗೆ ಶರದ್ ಪವಾರ್ ಅವರು ಇಂದು ಕರೆದಿರುವ ಸಭೆಗೆ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಹಾಜರಾಗುವಂತೆ ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ (Supriya Sule) ಟ್ವೀಟ್​​ ಮೂಲಕ ಮನವಿ ಮಾಡಿದ್ದಾರೆ.

ಶರದ್ ಪವಾರ್ ನೇತೃತ್ವದ ಎನ್​​ಸಿಪಿ ಬಣವು ಇಂದು ಎಲ್ಲಾ ಶಾಸಕರ ಸಭೆಯನ್ನು ಮಾಡಲಾಗವುದು ಎಂದು ಸ್ಪಷ್ಟವಾದ ಕರೆ ಬಂದಿದೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಹಾಜರಾಗಬೇಕೆಂಬುದು ಒಂದು ವಿನಮ್ರ ವಿನಂತಿ. ಪ್ರಸ್ತುತ ಪರಿಸ್ಥಿತಿಯಲ್ಲಿ, 83 ವರ್ಷದ ಯುವ ಯೋಧ ಅಂದರೆ ನಮ್ಮ ಗೌರವಾನ್ವಿತ ಪವಾರ್ ಸಾಹೇಬರು ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಎಂದು ಸುಪ್ರಿಯಾ ಸುಳೆ ವಿಡಿಯೋ ಮಾಡಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಅಜಿತ್ ಪವಾರ್ ಅವರು ವಿರೋಧ ಪಕ್ಷದ ನಾಯಕತ್ವವನ್ನು ತೊರೆದು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರ್ಕಾರವನ್ನು ಸೇರಿದ ನಂತರ ಈ ಸಭೆಯನ್ನು ಕರೆದಿರುವುದು ಬಹಳ ಕುತೂಹಲ ಮೂಡಿಸಿದೆ. ಇದೀಗ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Supriya Sule: ಶರದ್ ಪವಾರ್ ರಾಜೀನಾಮೆಗೆ ಮರುಗಿದ ಪೌರ ಕಾರ್ಮಿಕ, ವಿಶೇಷ ವ್ಯಕ್ತಿಯ ಜತೆ ಸೆಲ್ಫಿ ಕ್ಲಿಕ್ಕಿಸಿದ ಸುಪ್ರಿಯಾ ಸುಳೆ

ಶರದ್ ಪವಾರ್ ಅವರು ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸುನಿಲ್ ತಟ್ಕರೆ ಅವರನ್ನು “ಪಕ್ಷ ವಿರೋಧಿ” ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಇದು ಅಜಿತ್ ಪವಾರ್ ಅವರ ಬಂಡಾಯದಲ್ಲಿ ಭಾಗಿಯಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.

ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ತೆಗೆದುಹಾಕಿ ಮತ್ತು ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ಅಜಿತ್ ಪವಾರ್ ಬಣಕ್ಕೆ ದೊಡ್ಡ ಪಟ್ಟು ನೀಡಿದೆ. ನಮ್ಮ ಬಣಕ್ಕೆ ಎನ್‌ಸಿಪಿ ಶಾಸಕರ ಬೆಂಬಲವಿದೆ ಎಂದು ಎರಡೂ ಬಣಗಳು ಹೇಳಿಕೊಳ್ಳುತ್ತಿದ್ದು, ಇಂದಿನ ಸಭೆಗಳು ಈ ಬಗ್ಗೆ ತಿಳಿದು ಬರಲಿದೆ.

ಇನ್ನಷ್ಟು  ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು