ಕಾಂಗ್ರೆಸ್​​ನವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ: ಸಿಟಿ ರವಿ

| Updated By: Rakesh Nayak Manchi

Updated on: Feb 24, 2024 | 3:58 PM

ಹಿಂದೂ ಧರ್ಮದಾಯಿ ದತ್ತಿ ವಿಧೇಯಕ ಮಂಡನೆ ವಿಧಾನ ಪರಿಷತ್​ನಲ್ಲಿ ತಿರಸ್ಕೃತವಾಗಿದ್ದರೂ ದೇವಾಲಯದ ಆದಾಯ ಇತರೆ ಧರ್ಮಗಳಿಗೆ ಬಳಕೆಯಾಗುತ್ತಿರುವ ಬಗ್ಗೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ. ಕಾಂಗ್ರೆಸ್​ ಪಕ್ಷವನ್ನ ಕಮ್ಯೂನಲ್ ಆ್ಯಂಡ್ ಕ್ರಿಮಿನಲ್ ಪಾರ್ಟಿ ಎಂದು ವಾಗ್ದಾಳಿ ನಡೆಸಿದ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷದವರು ನಿಜವಾದ ಜಾತ್ಯತೀತರಾಗಿದ್ದರೆ ಮಸೀದಿ, ಚರ್ಚ್ ಹುಂಡಿಗೂ ಕೈಹಾಕುತ್ತಿದ್ದರು ಎಂದರು.

ಕಾಂಗ್ರೆಸ್​​ನವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ: ಸಿಟಿ ರವಿ
ಕಾಂಗ್ರೆಸ್​​ನವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದ ಸಿಟಿ ರವಿ
Follow us on

ಚಿಕ್ಕಮಗಳೂರು, ಫೆ.24: ಕಾಂಗ್ರೆಸ್ (Congress)​ ಪಕ್ಷವನ್ನ ಕಮ್ಯೂನಲ್ ಮತ್ತು ಕ್ರಿಮಿನಲ್ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯ ಮಾತ್ರವಲ್ಲದೆ, ಮಸೀದಿ, ಚರ್ಚ್​ ಹುಂಡಿಗೂ ಕೈಹಾಕುತ್ತಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ (Chikkamagalur) ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದವರು ನಿಜವಾಗಲೂ ಜಾತ್ಯತೀತರಾ? ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದರು.

ಹೆಸರಿನಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಎಂದು ಹೇಳುತ್ತಾರೆ. ಹೆಸರಿನಲ್ಲಿ ದೇವರಿದ್ದರೆ ಭಕ್ತರ ಹುಂಡಿಗೆ ಕೈಹಾಕುತ್ತಿರಲಿಲ್ಲ. ಇವರು ದೇವರ ಹುಂಡಿ ಹಣಕ್ಕೂ ಕೈ ಹಾಕುತ್ತಿದ್ದಾರೆ. ಜಾತ್ಯತೀತತೆ ಅಂದರೆ ದೇವಸ್ಥಾನದ ಹುಂಡಿಗೆ ಕೈಹಾಕುವುದಾ? ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ ಮತ್ತು ಕ್ರಿಮಿನಲ್ ಪಾರ್ಟಿ. ಜಾತ್ಯತೀತರಾಗಿದ್ದರೆ ಮಸೀದಿ-ಚರ್ಚ್ ಹಣಕ್ಕೂ ಕೈಹಾಕುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಮಂತ್ರಿಗಳ ಮಕ್ಕಳು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು

ಸೋಲು ಕಟ್ಟಿಟ್ಟಬುತ್ತಿ ಅಂತ ಕಾಂಗ್ರೆಸ್​​ನವರಿಗೆ ಗೊತ್ತಿದೆ. ಸೋಲುತ್ತೇವೆ ಅಂತ ಗೊತ್ತು, ಸೋಲುವುದಕ್ಕೆ ಏಕೆ ಸ್ಪರ್ಧಿಸುತ್ತಾರೆ ಎಂದು ಲೇವಡಿ ಮಾಡಿದ ಸಿಟಿ ರವಿ, ಮೊದಲು ಮಕ್ಕಳು-ಮಂತ್ರಿಗಳನ್ನ ನಿಲ್ಲಿಸಲು ಯೋಚನೆ ಮಾಡುತ್ತಿದ್ದರು. ಈಗ ಮಕ್ಕಳು-ಮಂತ್ರಿಗಳು ಹಿಂದೇಟು ಹಾಕುತ್ತಿದ್ದಾರೆ. ನಾವು ರಾಜ್ಯ ಬಿಟ್ಟು ಹೋಗಲ್ಲ ಅಂತಿದ್ದಾರೆ. ಅವರಿಗೆ ಸೋಲುತ್ತೇವೆ ಎಂದು ಗೊತ್ತಾಗಿದೆ ಎಂದರು.

ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡದಂತೆ ಸುಟ್ಟುಹಾಕ್ತೀವಿ ಅಂತ ಹೇಳುವ ಮನಸ್ಥಿತಿ ಏಕಾಏಕಿ ಹುಟ್ಟಿರಲಾರದು: ಸಿಟಿ ರವಿ, ಬಿಜೆಪಿ ನಾಯಕ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಮೇಜಾರಿಟಿ ಇದೆ, ಯಾರನ್ನಾಬೇಕಾದರೂ ಮಾಡಿಕೊಳ್ಳಿ. ಮುಖ್ಯಮಂತ್ರಿ ಕಾಲೆಳೆಯುತ್ತಿರುವುದು ಯಾರು, ನಾವಾ? ದಲಿತಿ ಸಿಎಂ ಹುಟ್ಟುಹಾಕಿದ್ದು, ಮುಂದಿನ ಸಿಎಂ ಡಿಕೆ ಶಿವಕುಮಾರ್ ಅಂದವರು ಯಾರು? ಹೀಗೆ ಹೇಳಿದವರೆಲ್ಲೂ ಕಾಂಗ್ರೆಸ್​ನವರೇ ತಾನೆ. ರಾಜ್ಯದಲ್ಲಿ ಬರ ಇದೆ, ಬರದಿಂದ ಜನ ಕಂಗಾಲಾಗಿದ್ದಾರೆ, ಕುಡಿಯಲು ನೀರಿಲ್ಲ. ಅವನು ಸಿಎಂ, ಇವನು ಸಿಎಂ ಎಂದು ಹೇಳುವುದನ್ನು ಬಿಟ್ಟು ಜನರಿಗೆ ಕುಡಿಯಲು ನೀರು ಕೊಡಿ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ, ಮೊದಲು ಅದನ್ನ ತಡೆಯಿರಿ. ದನಕರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ. ಮೊದಲು ಆ ಕೆಲಸ ಮಾಡಿ ಎಂದರು.

ಅಂಬೇಡ್ಕರ್ ಬದುಕಿದ್ದಾಗಲೂ ಅಪಮಾನ ಮಾಡಿದ್ದ ಕಾಂಗ್ರೆಸ್

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಅಂಬೇಡ್ಕರ್ ಬದುಕಿದ್ದಾಗಲೂ ಅಪಮಾನ ಮಾಡಿತ್ತು. ಅಂಬೇಡ್ಕರ್ ಅವರನ್ನ ಸೋಲಿಸಿ, ಸತ್ತಾಗಲು ಅಪಮಾನ ಮಾಡಿದ ಜನರು ಇವತ್ತು ಅಂಬೇಡ್ಕರ್ ಹೆಸರಿನಲ್ಲಿ ವಶೀಕರಣ ಮಾಡುವ ಪ್ಲಾನ್ ಮಾಡುತ್ತಿದ್ದಾರೆ ಎಂದರು.

ಯಾವ ಪಕ್ಷದೊಳಗೆ ಪ್ರಜಾಪ್ರಭುತ್ವ ಇಲ್ಲ ಅಂತಹ ಪಕ್ಷಕ್ಕೆ ಪ್ರಜಾಪ್ರಭುತ್ವದ ನಂಬಿಕೆ ಇರಲು ಸಾಧ್ಯನಾ? ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯೇ ಇಲ್ಲ. ಕಾಂಗ್ರೆಸ್​​ಗೆ ಏನಿದ್ದರೂ ವಂಶ ಪಾರಂಪರ್ಯ. ನೆಹರು ಅವರಿಂದ ರಾಹುಲ್ ಗಾಂಧಿವರೆಗೂ ಇವರದ್ದು ವಂಶ ಪಾರಂಪರ್ಯ. ಮೀಸಲಾತಿಯನ್ನು ಬಲವಾಗಿ ಪ್ರತಿಪಾದಿಸಿದ್ದು ಅಂಬೇಡ್ಕರ್. ಆದರೆ ಮೀಸಲಾತಿ ವಿರೋಧವಾಗಿ ಪತ್ರ ಬರೆದಿದ್ದು ಕಾಂಗ್ರೆಸ್. ದೇಶದ ಮೊದಲ ಪ್ರಧಾನಿ ನೆಹರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದರು. ಇದಕ್ಕೆ ಪತ್ರದ ದಾಖಲೆ ಇಂದಿಗೂ ಇದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ