ಮೈಸೂರು: ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ಒಂದು ವರ್ಷದಲ್ಲಿ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು? ಇದು ದುರುಪಯೋಗ ಅಲ್ವಾ? ಅಂತಾ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ. ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು 190, 180, 70 ಯುನಿಟ್ ಬಳಸುತ್ತಾರ) ಅವರಿಗೆ ಫ್ರೀ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರಲ್ಲಿ ಶೇ 10 ಹೆಚ್ಚುವರಿ ನೀಡುತ್ತೇವೆ. ಯಾರು 200 ಯೂನಿಟ್ ಬಳಸುತ್ತಾರೋ ಅಂತಹವರೆಲ್ಲರಿಗೂ ಉಚಿತ ಎಂದರು.
ಗೃಹ ಜ್ಯೋತಿ ಕರ್ನಾಟಕದಲ್ಲಿ ಸುಮಾರು 1 ಕೋಟಿ 28 ಲಕ್ಷ ಕುಟುಂಬದ ಇದೆ. ಈ ಎಲ್ಲಾ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ಕೊಡುತ್ತೇವೆ. ಅತ್ತೆ ಯಜಮಾನಿಯಾದರೆ ಅತ್ತೆಗೆ ಕೊಡುತ್ತೇವೆ. ಸೊಸೆ ಯಜಮಾನಿಯಾದರೆ ಸೊಸೆಗೆ ಕೊಡುತ್ತೇವೆ. ಅದರಲ್ಲಿ ಐಟಿ, ಜಿಎಸ್ಟಿ ಟ್ಯಾಕ್ಸ್ ನೊಂದಣಿ ಮಾಡಿಸಿರುವವರಿಗೆ ಎರಡು ಸಾವಿರ ಇಲ್ಲ. ಪಿಂಚನಿ ತೆಗೆದುಕೊಳ್ಳುತ್ತಿರುವ ಹಿರಿಯರಿಗೆ, ಅಂಗವಿಕಲರಿಗೂ ಕೊಡುತ್ತೇವೆ. ಎಲ್ಲಾ ಎಪಿಎಲ್, ಬಿಪಿಎಲ್ ಕಾರ್ಡ್ದಾರರಿಗೆ ಆಗಸ್ಟ್ 15 ರಿಂದ 2000 ರೂ. ಕೊಡುತ್ತೇವೆ ಎಂದರು.
ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ಬಿಲ್ ಹೆಚ್ಚಳ: ವಿವಿಧ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ
ನಾವು ನುಡಿದಂತೆ ನಡೆಯುತ್ತಿದ್ದೇವೆ. ನಾವು ಹೇಳಿದಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ನಾವು ಬಿಜೆಪಿಯವರಂತೆ ವಚನ ಭ್ರಷ್ಟರಲ್ಲ. ಅನ್ನಭಾಗ್ಯ ಯೋಜನೆಯಡಿ ಜು.1ರಿಂದ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದರು.
ಭಾರತ್ ಜೋಡೊ ಯಾತ್ರೆಯ ಮೂಲಕ ಕರ್ನಾಟಕದಲ್ಲಿ ಪ್ರಚಾರ ಆರಂಭವಾಗಿತ್ತು, ಇದರಿಂದ ಕಾರ್ಯಕರ್ತರಿಗೆ ಹುಮ್ಮಸ್ಸು, ಪ್ರೋತ್ಸಾಹ ಹೆಚ್ಚಾಯ್ತು. ಡಿಕೆ ಶಿವಕುಮಾರ್ ಎಷ್ಟು ಶ್ರಮ ಹಾಕಿದ್ದಾರೋ ಅಷ್ಟೇ ಶ್ರಮ ಕಾರ್ಯಕರ್ತರು ಹಾಕಿದ್ದಾರೆ. ಹೀಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಕ್ಷೇತ್ರಕ್ಕೆ ಮೂರೇ ದಿನ ಪ್ರಚಾರಕ್ಕೆ ಬಂದಿದ್ದು. ಡಾ ಯತೀಂದ್ರ ಸಿದ್ದರಾಮಯ್ಯ ಅವರು ನನಗೆ ಸೀಟು ಬಿಟ್ಟು ಕೊಟ್ಟರು. ಅವರೇ ಅಭ್ಯರ್ಥಿಯಾಗಿದ್ದರು ಇಷ್ಟು ಶ್ರಮ ಹಾಕುತ್ತಿರಲಿಲ್ಲ. ಹೀಗಾಗಿ ಅವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸುತ್ತೇನೆ. ನಾ
ಬಿಜೆಪಿ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನರ ಬೇಸತ್ತಿದ್ದರು. ಹೀಗಾಗಿ ಜನತೆ ಹೊಸ ಬದಲಾವಣೆ ಬಯಸಿ ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಈ ಹಿಂದೆ ವರುಣ ಕ್ಷೇತ್ರದಿಂದ ಗೆದ್ದು ಸಿಎಂ ಆಗಿದ್ದೆ. ಮತ್ತೊಮ್ಮೆ ವರುಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗಿದ್ದೇನೆ. ಇದೆಲ್ಲ ವರುಣ ಕ್ಷೇತ್ರದ ಜನರು ಕೊಟ್ಟಿರುವ ಶಕ್ತಿ. ನಾನು ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ನನ್ನ ಕೊನೆ ಉಸಿರು ಇರುವವರೆಗೂ ಜನರ ಸೇವೆ ಮಾಡುತ್ತೇನೆ ಎಂದರು.
ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 20 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಎಂಪಿ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರ ಸೋಲುತ್ತದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Sat, 10 June 23