ಬೊಮ್ಮಾಯಿ ಹೇಳಿದರೆ ವರುಣಾ ತಾಲೂಕು ಕೇಂದ್ರ ಮಾಡಲು ಆಗಲ್ಲ: ಸಿಎಂ ಸಿದ್ದರಾಮಯ್ಯ
ವರುಣಾ ತಾಲುಕು ಕೇಂದ್ರ ಮಾಡಿ ಅಂತ ಬಸವರಾಜ ಬೊಮ್ಮಾಯಿ ಹೇಳಿದರೆ ಮಾಡಲು ಆಗುವುದಿಲ್ಲ. ಜನರು ಕೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು: ವರುಣಾ (Varuna) ತಾಲುಕು ಕೇಂದ್ರ ಮಾಡಿ ಅಂತ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರೆ ಮಾಡಲು ಆಗುವುದಿಲ್ಲ. ಜನರು ಕೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಹೆಲಿಪ್ಯಾಡ್ನಲ್ಲಿ ವರುಣವನ್ನು ತಾಲೂಕು ಕೇಂದ್ರ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬಗ್ಗೆ ಮಾತನಾಡಿದ ಅವರು, ವರುಣವನ್ನು ತಾಲೂಕು ಮಾಡಿ ಎಂದು ಜನರು ಕೇಳಿಲ್ಲ ಎಂದರು.
ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದು. ನಾನು ಪ್ರಚಾರ ಮಾಡುವಾಗಲೂ ತಾಲೂಕು ಮಾಡಿ ಎಂದು ಕೇಳಿಲ್ಲ. ಬಸವರಾಜ ಬೊಮ್ಮಾಯಿ ತಾಲೂಕು ಮಾಡಿ ಎಂದು ಕೇಳಿದರೆ ಮಾಡಲ್ಲ. ಜನ ಕೇಳಿದರೆ ಮಾತ್ರ ವರುಣವನ್ನು ತಾಲೂಕು ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ; ಹೇಳಿದ್ದೇ ಬೇರೆ ಘೋಷಿಸಿದ್ದೇ ಬೇರೆ ಎಂದ ಬಸವರಾಜ ಬೊಮ್ಮಾಯಿ
ನಾವು ನುಡಿದಂತೆ ನಡೆಯುತ್ತಿದ್ದೇವೆ: ಸಿದ್ದರಾಮಯ್ಯ
ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಹೇಳಿದಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ನಾವು ಬಿಜೆಪಿಯವರಂತೆ ವಚನ ಭ್ರಷ್ಟರಲ್ಲ. 200 ಯೂನಿಟ್ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಗೆ 2,000 ಹಣ ನೀಡುತ್ತೇವೆ. ಬಿಪಿಎಲ್, APL ಕಾರ್ಡ್ ಇರುವ ಮಹಿಳೆಯರಿಗೆ ಯೋಜನೆ ಅನ್ವಯವಾಗುತ್ತದೆ. ವಿಧವಾ, ವೃದ್ಧಾಪ್ಯ ಪಿಂಚಣಿ ಪಡೆಯುವ ಮಹಿಳೆಗೂ ಯೋಜನೆ ಅನ್ವಯವಾಗುತ್ತದೆ. ಈ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ. ಅನ್ನಭಾಗ್ಯ ಯೋಜನೆಯಡಿ ಜು.1ರಿಂದ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದರು.
ಜನ ಶಕ್ತಿ ಮುಂದೆ ಯಾವ ಶಕ್ತಿಯೂ ಏನೂ ಅಲ್ಲ: ಯತೀಂದ್ರ ಸಿದ್ದರಾಮಯ್ಯ
ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಭರವಸೆ ಈಡೇರಿಸಿದ್ದೇವೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಶಾಂತಿ ಸೌಹಾರ್ದತೆ ಹಾಳಾಗಿತ್ತು. ಕಾರ್ಯಕರ್ತರು ಬಿಜೆಪಿಯ ವೈಫಲ್ಯವನ್ನು ಮನೆ ಮನೆಗೆ ತಿಳಿಸಿದ್ದಾರೆ. ಜನ ಶಕ್ತಿ ಮುಂದೆ ಯಾವ ಶಕ್ತಿಯೂ ತಡೆಯಲು ಸಾಧ್ಯವಾಗುವುದಿಲ್ಲ. ಕರ್ನಾಟಕ ಜನತೆ ತೀರ್ಮಾನದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸಮಾಜದಲ್ಲಿ ಶಾಂತಿ ವ್ಯವಸ್ಥೆಯನ್ನು ಕಾಪಾಡಿದ್ದಾರೆ. ಕರ್ನಾಕದಲ್ಲಿ ಸುವರ್ಣ ಯುಗ ಪ್ರಾರಂಭವಾಗಿದೆ. 5 ಗ್ಯಾರಂಟಿಗಳು ಘೋಷಣೆ ಮಾಡಿದ್ದೇವೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಉದ್ಯೋಗ ಸೃಷ್ಟಿ, ಕಪ್ಪು ಹಣ ತರುತ್ತೇವೆ, 15 ಲಕ್ಷ ಹಣ, ಚೈನಾದವರು ನಮ್ಮ ದೇಶಕ್ಕೆ ಬರವುವುದನ್ನ ತಡೆಯುತ್ತೇವೆ ಎಂದಿದ್ದರು. ಇದನ್ನು ಬಿಜೆಪಿ ಈಡೇರಿಸಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಬಡವರಿಗೆ, ಅಲ್ಪ ಸಂಖ್ಯಾತರಿಗೆ, ದಲಿತರಿಗೆ ಒಳ್ಳೆ ಆಡಳಿತವನ್ನು ನಮ್ಮ ಮುಖ್ಯಮಂತ್ರಿ ಮಾಡುತ್ತಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Sat, 10 June 23