Power tariff hike: ವಿದ್ಯುತ್ ದರ ಹೆಚ್ಚಿಸಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಾರವಾಡ ಮಹಿಳೆಯರ ಆಕ್ರೋಶ!

Power tariff hike: ವಿದ್ಯುತ್ ದರ ಹೆಚ್ಚಿಸಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಾರವಾಡ ಮಹಿಳೆಯರ ಆಕ್ರೋಶ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2023 | 4:21 PM

ಅಸಲು ಸಂಗತಿಯೇನೆಂದರೆ, ಪ್ರತಿ ತಿಂಗಳು ರೂ. 500 ರಷ್ಟು ಬರುತ್ತಿದ್ದ ವಿದ್ಯುತ್ ಬಿಲ್ ಈ ಬಾರಿ ರೂ. 1,000 ಕ್ಕಿಂತ ಜಾಸ್ತಿ ಬಂದಿದೆಯಂತೆ

ಧಾರವಾಡ: ಎರಡು ನೂರು 200 ಯೂನಿಟ್ ಉಚಿತ ಅಂತ ಭರವಸೆ ನೀಡಿ ಹಾಗೆ ನಡೆದುಕೊಳ್ಳುವ ಮೊದಲೇ ವಿದ್ಯುತ್ ದರವನ್ನು ಹೆಚ್ಚಿಸಿರುವ ಸಿದ್ದರಾಮಯ್ಯ (Siddaramaiah) ಸರ್ಕಾರವನ್ನು ನಗರದ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ಇವರಲ್ಲಿ ಅದೆಷ್ಟು ಅಕ್ರೋಶ (anger) ಹುಟ್ಟಿಕೊಂಡಿದೆಯೆಂದರೆ, ಅದು ಒಂದು ವರ್ಷವೂ ಬಾಳೋದಿಲ್ಲ, ಇಂಥ ಸರ್ಕಾರದಿಂದ ಬಡವರಿಗೆ ಏನೂ ಪ್ರಯೋಜನವಾಗದು, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ (chief minister) ಸ್ಥಾನದಿಂದ ಕೆಳಗಿಳಿಸಬೇಕು ಅಂತ ಹೇಳುತ್ತಿದ್ದಾರೆ. ಅಸಲು ಸಂಗತಿಯೇನೆಂದರೆ, ಪ್ರತಿ ತಿಂಗಳು ರೂ. 500 ರಷ್ಟು ಬರುತ್ತಿದ್ದ ವಿದ್ಯುತ್ ಬಿಲ್ ಈ ಬಾರಿ ರೂ. 1,000 ಕ್ಕಿಂತ ಜಾಸ್ತಿ ಬಂದಿದೆಯಂತೆ. ಅಂದರೆ ದುಪ್ಪಟ್ಟು ಬಿಲ್! ಅವರು ಹೇಳುತ್ತಿರೋದು ನಿಜವೇ ಎಂಬ ಗೊಂದಲವೂ ಮೂಡದಿರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ