ಜಾರ್ಖಂಡ್ನ ದೇವಘರ್ನಲ್ಲಿ (Deoghar) ಬಿಜೆಪಿ (BJP) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಜನಪರ ಕ್ರಮಗಳನ್ನು ಆಧರಿಸಿದ ‘ಶಾರ್ಟ್‌ಕಟ್’ ರಾಜಕೀಯದ ವಿರುದ್ಧ ಎಚ್ಚರಿಕೆ ನೀಡಿದರು. ಇಂಥಾ ಶಾರ್ಟ್‌ಕಟ್ ರಾಜಕೀಯ ದೇಶವನ್ನು ನಾಶಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ₹16,800 ಕೋಟಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಮೋದಿ, ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂದು ಹೇಳಿದ್ದಾರೆ. “ದೇಶವು ಶಾರ್ಟ್‌ಕಟ್ ರಾಜಕೀಯದ ಪ್ರಮುಖ ಸವಾಲನ್ನು ಎದುರಿಸುತ್ತಿದೆ. ಆದರೆ ಶಾರ್ಟ್‌ಕಟ್ ಅನ್ನು ಆಧರಿಸಿದ ರಾಜಕೀಯವು ಶಾರ್ಟ್ ಸರ್ಕ್ಯೂಟ್ ಆಗುತ್ತದೆ ಎಂಬುದು ದೊಡ್ಡ ಸತ್ಯ. ಅದು ದೇಶವನ್ನು ನಾಶಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಠಿಣ ಪರಿಶ್ರಮದಿಂದ 100 ವರ್ಷಗಳ ಸ್ವಾತಂತ್ರ್ಯವನ್ನು ಸಮೀಪಿಸುತ್ತಿರುವಾಗ ನಾವು ಭಾರತವನ್ನು ಹೊಸ ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸದೆ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಂಡು ಜನಪರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜನರಿಂದ ಮತಗಳನ್ನು ಪಡೆಯುವುದು ತುಂಬಾ ಸುಲಭ, ಭಾರತವು ನಂಬಿಕೆ ಮತ್ತು ಆಧ್ಯಾತ್ಮದ ಭೂಮಿಯಾಗಿದೆ.ತೀರ್ಥಯಾತ್ರೆಗಳು ನಮ್ಮನ್ನು ಉತ್ತಮ ಸಮಾಜ ಮತ್ತು ದೇಶವಾಗಿ ರೂಪಿಸುತ್ತವೆ ಎಂದು ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಾಲಯದಲ್ಲಿ ವೇದ ಮಂತ್ರಗಳ ಪಠಣಗಳ ನಡುವೆ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ಭೇಟಿಗಾಗಿ ದೇವಾಲಯವನ್ನು ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು.
#WATCH | Today shortcut politics is the biggest challenge. It’s very easy to fetch votes through shortcuts… If the politics of one country depends on shortcut politics then it will lead to a short circuit. We’ve to stay away from it: PM Modi in Deoghar, Jharkhand pic.twitter.com/O2bBm1WkIo
— ANI (@ANI) July 12, 2022
ಜಾರ್ಖಂಡ್ ರಾಜಧಾನಿಯಿಂದ ಸುಮಾರು 270-ಕಿಮೀ ದೂರದಲ್ಲಿರುವ ಈ ದೇವಾಲಯವು ಜುಲೈ 14 ರಂದು ಪ್ರಾರಂಭವಾಗುವ ಶ್ರಾವಣಿ ಮೇಳದ ಸಂದರ್ಭದಲ್ಲಿ ಪ್ರತಿವರ್ಷ ಸಾವಿರಾರು ಯಾತ್ರಿಕರನ್ನು ಆಕರ್ಷಿಸುತ್ತದೆ.
“ದೇಗುಲದ ವಿಐಪಿ ಬಾಗಿಲು ತಲುಪಿದ ತಕ್ಷಣ, 11 ಪುರೋಹಿತರ ಗುಂಪಿನಿಂದ ಶಂಖನಾದದ ನಡುವೆ ಪ್ರಧಾನಿಯನ್ನು ಹೂವುಗಳೊಂದಿಗೆ ಸ್ವಾಗತಿಸಲಾಯಿತು. ನಂತರ ಅವರನ್ನು ಗಣೇಶ ಪೂಜೆಗಾಗಿ ‘ಸಮ್ಮುಖ ಬಾಗಿಲು’ (ಮುಂಭಾಗದ ಬಾಗಿಲು) ಗೆ ಕರೆದೊಯ್ಯಲಾಯಿತ ಎಂದು ದೇವಸ್ಥಾನ ಸಮಿತಿಯ ಅಧಿಕಾರಿ ಕಾರ್ತಿಕ್ ನಾಥ್ ಠಾಕೂರ್ ಪಿಟಿಐಗೆ ತಿಳಿಸಿದರು. ಮೋದಿಯವರು ದೇವಾಲಯದ ಗರ್ಭಗುಡಿಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರು ಎಂದು ಅವರು ಹೇಳಿದ್ದಾರೆ.
Published On - 8:06 pm, Tue, 12 July 22