ಬೆಂಗಳೂರು, (ನವೆಂಬರ್ 24): ಕಾಂಗ್ರೆಸ್ ಪಾಳಯದಲ್ಲಿ (Karnataka Congress) ಸಿದ್ದರಾಮಯ್ಯ(Siddaramaiah) ಪ್ರಶ್ನಾತೀತ ನಾಯಕ. ಇದಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವವರು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಚತುರ ಸಂಘಟಕ. ಕಾಂಗ್ರೆಸ್ ಸಾಮ್ರಾಜ್ಯದ 2 ಕಂಬಗಳಂತೆ ಸಿದ್ದರಾಮಯ್ಯ ಡಿಕೆಶಿ ಗಟ್ಟಿಯಾಗಿ ನಿಂತಿದ್ದಾರೆ. ಆದ್ರೆ, ಕಾಂಗ್ರೆಸ್ ಮನೆಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಮೂರನೇ ಪವರ್ ಸೆಂಟರ್ ಸೃಷ್ಟಿ ಆಗುತ್ತಿದೆಯೆ ಎಂಬ ಅನುಮಾನ ಹುಟ್ಟಿಕೊಂಡಿವೆ. ಸಿದ್ದರಾಮಯ್ಯನವರನ್ನು ಗೌರವಿಸುತ್ತಲೇ ಹೊಸ ನಾಯಕತ್ವದ ಬಗ್ಗೆಯೂ ದನಿ ಎತ್ತಲು ಮತ್ತೊಂದು ನಾಯಕರ ಪಡೆ ಸಜ್ಜಾಗಿದೆ. ಹೀಗಾಗಿ ಸಮಾನ ಮನಸ್ಕರು ಸಭೆ ಸೇರುವುದಕ್ಕೆ ಪ್ಲ್ಯಾನ್ಗಳು ನಡೆದಿವೆ,
ಸಮಾನ ಮನಸ್ಕ ಶಾಸಕರ ತಂಡದ ಬಗ್ಗೆ ಕೆಲ ದಿನಗಳ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಪ್ರಸ್ತಾಪ ಮಾಡಿದ್ದರು. ಈ ಸಮಾನ ಮನಸ್ಕ ಶಾಸಕರು ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. 20 ಕ್ಕೂ ಹೆಚ್ಚು ಶಾಸಕರೊಂದಿಗೆ ಬೆಳಗಾವಿಯಲ್ಲಿ ಮೀಟಿಂಗ್ ನಡೆಸುವ ಬಗ್ಗೆ ಪ್ಲ್ಯಾನ್ ಇದ್ದು ಮುಂದಿನ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ ಹಾಗೂ ಡಾ.ಜಿ ಪರಮೇಶ್ವರ್ ನೇತೃತ್ವದ ಸಮಾನ ಮನಸ್ಕ ಶಾಸಕರ ದಂಡು ಒಂದುಗೂಡುವ ಸಾಧ್ಯತೆ ಇದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಭೇಟಿಯಾದ ವಿಜಯೇಂದ್ರ: ಲೋಕಸಭೆ ಚುನಾವಣೆಗೆ ಒಗ್ಗಟ್ಟಿನ ಮಂತ್ರ
ಅದರಲ್ಲೂ ಲೋಕಸಭೆ ಚುನಾವಣೆ ಸಿದ್ಧತೆ ನೆಪದಲ್ಲಿ ಬೆಳಗಾವಿಯಲ್ಲಿ ಸಮಾನ ಮನಸ್ಕ ಶಾಸಕರು ಒಗ್ಗೂಡಿ ರಣತಂತ್ರ ರೂಪಿಸಲಿದ್ದಾರೆ. ಆದ್ರೆ, ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಒಂದುಗೂಡಿಸಿ ಸಮಾಲೋ ನಡೆಸಲಿದ್ದು ಭಾರಿ ಕುತೂಹಲ ಮೂಡಿಸಿದೆ. ಮುಂದೆ ಯಾವ ಗುಟ್ಟು ಬಿಟ್ಟುಕೊಡುತ್ತಾರೆ ಎನ್ನುವುದು ಸಸ್ಪೆನ್ಸ್ ಆಗಿದೆ.
ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಶಾಸಕರೆಲ್ಲ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಸಮಾನ ಮನಸ್ಕ ಶಾಸಕರು ಒಂದುಗೂಡಿದರೆ ಹಳೇ ಮೈಸೂರು ಭಾಗದ ನಾಯಕರಿಗೆ ಆತಂಕ ಸೃಷ್ಟಿ ಆಗುವುದರಲ್ಲಿ ಅನುಮಾನ ಇಲ್ಲ. ಸಮಾನ ಮನಸ್ಕರ ಹೆಸರಲ್ಲಿ ಅಧಿಕಾರ ಕೇಂದ್ರಿತ ತಂತ್ರಗಾರಿಕೆ ನಡೆದರೆ ಮುಂದಿನ ಅವಧಿಗೆ ಸಿಎಂ ಆಗಬೇಕು ಎಂಬ ಲೆಕ್ಕಾಚಾರ ಇಟ್ಟುಕೊಂಡವರಿಗೆ ಆತಂಕ ಕಾಡುತ್ತಿದೆ. ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಬಳಿಕ ಮತ್ತೊಂದು ಪವರ್ ಸೆಂಟರ್ ಸೃಷ್ಟಿ ಆಗುವುದು ದಟ್ಟವಾಗಿದೆ.. ಈ ನಿಟ್ಟಿನಲ್ಲಿ ಸಮಾನ ಮನಸ್ಕರ ಮೀಟಿಂಗ್ ಮಹತ್ವ ಪಡೆದುಕೊಂಡಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ